ಮಂಗಳೂರು: ಸುರತ್ಕಲ್ ಸಮೀಪದ ಚಿತ್ರಾಪುರ ಮತ್ತು ಬೈಕಂಪಾಡಿಯ ಮೀನಕಳಿಯದಲ್ಲಿನ ಕಡಲ್ಕೊರೆತ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿದರು. ಚಿತ್ರಾಪುರದಲ್ಲಿನ ರಂಗ ಮಂದಿರ, ಶಾಲಾ ಮೈದಾನ ಅಪಾಯದಲ್ಲಿರುವುದನ್ನು ಗಮನಿಸಿದರು. ಮೀನಕಳಿಯದ ಮೀನು ಹರಾಜು ಕಟ್ಟಡವೂ ಅಪಾಯದಲ್ಲಿದ್ದು ಭೇಟಿ ನೀಡಿ ಸ್ವತಃ ಕಡಲ್ಕೊರೆತದ ಸಮಸ್ಯೆಯನ್ನು ತಿಳಿದುಕೊಂಡರು.
ಈ ಸಂದರ್ಭ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಚಿತ್ರಾಪುರ ಮತ್ತು ಬೈಕಂಪಾಡಿ ಪ್ರದೇಶದಲ್ಲಿ ಸಮುದ್ರದ ಕೊರೆತದಿಂದ ಆಗುತ್ತಿರುವ ನಷ್ಟದ ಕುರಿತು ಮಾಹಿತಿ ನೀಡಿದ್ದು, ಶಾಶ್ವತ ಕಾಮಗಾರಿಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವಿವರಿಸಿದರು. ಈಗಾಗಲೇ ಚಿತ್ರಾಪುರ ಬಳಿ 1.65 ಕೋ.ರೂ,ಮತ್ತು ಮೀನಕಳಿಯದಲ್ಲಿ 1.50 ಕೋಟಿ ರೂ.ವೆಚ್ಚದಲ್ಲಿ ಸಮುದ್ರ ಕೊರೆತಕ್ಕೆ ಕಲ್ಲುಹಾಕುವ ಕಾಮಗಾರಿ ಅನುದಾನ ಮೀಸಲಿಡಲಾಗಿದೆ. ಹೆಚ್ಚುವರಿ 250 ಕೋಟಿ ರೂ. ಅನುದಾನದಲ್ಲಿ ಸರ್ಕಾರ ಹೆಚ್ಚುವರಿ ಅನುದಾನ ನೀಡುವಂತೆ ಕಂದಾಯ ಸಚಿವ ಆರ್.ಆಶೋಕ್ ಅವರಿಗೆ ಮನವಿ ಮಾಡಿದರು.
Advertisement
ಈ ಸಂದರ್ಭ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಉಪಮೇಯರ್ ವೇದಾವತಿ,ಕಾರ್ಪೊರೇಟರ್ ಸುಮಿತ್ರ ಕರಿಯಾ, ಈ ಸಂದರ್ಭ ಪಣಂಬೂರು ಮೊಗವೀರ ಮಹಾಸಭಾದ ಅಧ್ಯಕ್ಷ ಮಾಧವ ಸುವರ್ಣ ಹಾಗೂ ಮಹಾಸಭಾದ ಪದಾಧಿಕಾರಿಗಳು, ಉಪಸ್ಥಿತರಿಸದ್ದರು.
Advertisement