ಬೆಂಗಳೂರು: ಜನತಾ ಕರ್ಫ್ಯೂ ಹೇರಿದರೂ ಕೊರೊನಾ ನಿಯಂತ್ರಣವಾಗದ ಕಾರಣ ರಾಜ್ಯ ಸರ್ಕಾರ ಕಂಪ್ಲೀಟ್ ಲಾಕ್ಡೌನ್ ಮಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದೆ.
ಲಾಕ್ಡೌನ್ನಿಂದ ಎಲ್ಲವೂ ಬಂದ್ ಆಗಲಿರುವ ಕಾರಣ ಎರಡು ತಿಂಗಳು ಆಹಾರ ಧಾನ್ಯ ವಿತರಣೆಗೆ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಪಡಿತರ ವಿತರಣೆಗೆ ಸೂಚನೆ ನೀಡಿದೆ ಎನ್ನಲಾಗಿದೆ.
Advertisement
Advertisement
ಪಡಿತರ ಸಿದ್ಧತೆ ಹೇಗೆ?
ಮುಂದಿನ 2 ತಿಂಗಳು ಹೆಚ್ಚುವರಿ ಪಡಿತರ ವಿತರಣೆಗೆ ಸಿದ್ಧತೆ ಮಾಡಿದ್ದು, ಮೇ 11ರಿಂದಲೇ ಹೆಚ್ಚುವರಿ ಅಕ್ಕಿ-ಬೇಳೆ ನೀಡಲು ಮುಂದಾಗುವ ಸಾಧ್ಯತೆಯಿದೆ. ಬಿಪಿಎಲ್, ಅಂತ್ಯೋದಯ ಕಾರ್ಡುದಾರರಿಗೆ ಹೆಚ್ಚುವರಿ ಅಕ್ಕಿ ವಿತರಿಸಲಾಗುತ್ತದೆ. ಮೇ-ಜೂನ್ನಲ್ಲಿ ಹೆಚ್ಚುವರಿ ಅಕ್ಕಿ, ರಾಗಿ, ಗೋಧಿ, ಜೋಳ ನೀಡಲು ಸಿದ್ಧತೆ ನಡೆದಿದೆ.
Advertisement
ಅಂತ್ಯೋದಯ ಸ್ಕೀಂನಲ್ಲಿ ಮೇ, ಜೂನ್ನಲ್ಲಿ ತಲಾ 35 ಕೆಜಿ ಅಕ್ಕಿ, ಬಿಪಿಎಲ್ ಕಾರ್ಡ್ಗೆ ತಲಾ ಒಬ್ಬರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಕೇಂದ್ರದ 5 ಕೆಜಿ, ರಾಜ್ಯದ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿ ವಿತರಿಸಲು ಪ್ಲಾನ್ ಮಾಡಲಾಗುತ್ತದೆ. ರಾಗಿ ಬಳಸುವ ಪ್ರದೇಶದಲ್ಲಿ 3 ಕೆಜಿ ರಾಗಿ, 7 ಕೆಜಿ ಅಕ್ಕಿ, 2 ಕೆಜಿ ಗೋಧಿ, ಅಕ್ಕಿಯನ್ನು ಬಳಸುವ ಭಾಗದಲ್ಲಿ 7 ಕೆಜಿ ಅಕ್ಕಿ, 3 ಕೆಜಿ ಜೋಳ, 3 ಕೆಜಿ ಗೋಧಿ ವಿತರಿಸುವ ಸಾಧ್ಯತೆಯಿದೆ.