-ಕಂಗನಾ ಮೇಲೆ ವೈಯಕ್ತಿಕ ದ್ವೇಷವಿಲ್ಲ ಎಂದ ರಾವತ್
ಮುಂಬೈ: ನಟಿ ಕಂಗನಾ ರಣಾವತ್ ಕಚೇರಿ ನೆಲಸಮಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಬಿಎಂಸಿ (ಬೃಹತ್ ಮುಂಬೈ ಕಾರ್ಪೋರೇಷನ್) ತೆಗೆದುಕೊಂಡ ನಿರ್ಧಾರ ಇದಾಗಿದೆ. ಕಟ್ಟಡ ನೆಲಸಮಕ್ಕೆ ನ್ಯಾಯಾಲಯ ಕಾರಣ ಕೇಳಿದ್ದು, ಬಿಎಂಸಿ ನಾಳೆ ಉತ್ತರ ನೀಡಲಿದೆ ಎಂದು ಶಿವಸೇನೆಯ ವಕ್ತಾರ, ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
Advertisement
ಬಿಎಂಸಿ ಪ್ರತಿದಿನ ತೆಗೆದುಕೊಳ್ಳುವ ನಿರ್ಧಾರಗಳು ಸರ್ಕಾರಕ್ಕೆ ತಿಳಿದಿರಬೇಕೆಂದು ಏನಿಲ್ಲ. ಅದು ಸ್ವತಂತ್ರ ಸಂಸ್ಥೆಯಾಗಿದ್ದು, ತನ್ನ ಕಾರ್ಯಗಳನ್ನ ಮಾಡುತ್ತಿರುತ್ತದೆ. ಶಿವಸೇನೆಗೆ ಕಂಗನಾ ರಣಾವತ್ ಮೇಲೆ ಯಾವುದೇ ವೈಯಕ್ತಿಯ ದ್ವೇಷವಿಲ್ಲ. ಮುಂಬೈ ನಗರದಲ್ಲಿ ಇಡೀ ದೇಶದ ಎಲ್ಲ ಭಾಗದ ಜನರು ವಾಸವಾಗಿದ್ದಾರೆ. ಅದೇ ರೀತಿ ಕಂಗನಾ ಸಹ ಮುಂಬೈನಲ್ಲಿ ಉಳಿದುಕೊಂಡಿದ್ದಾರೆ. ಆದ್ರೆ ಮುಂಬೈನ್ನ ಪಿಓಕೆಗೆ ಹೋಲಿಕೆ ಮಾಡಿದ್ದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ ಎಂದು ಸಂಜಯ್ ರಾವತ್ ಹಾರಿಕೆಯ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ನನ್ನ ಮನೆಯಂತೆ ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ: ಸಿಎಂ ಠಾಕ್ರೆ ವಿರುದ್ಧ ಕಂಗನಾ ಪ್ರಹಾರ
Advertisement
Advertisement
ಇಂದು ಬೆಳಗ್ಗೆ ನಡೆದ ಘಟನೆಯ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಶಿವಸೇನೆಯ ಯಾವ ಕಾರ್ಯಕರ್ತರು ಕಂಗನಾಗೆ ಜೀವ ಬೆದರಿಕೆ ಹಾಕಿಲ್ಲ. ನಿಮಗೆ ಮುಂಬೈ ಪಾಕಿಸ್ತಾನ ರೀತಿ ಕಾಣುತ್ತಿದ್ದರೆ ಇಲ್ಲಿ ಯಾಕೆ ವಾಸ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದೆ. ನನ್ನ ಹೇಳಿಕೆ ಬೇರೆಯ ಸ್ವರೂಪ ಪಡೆದುಕೊಂಡಿತು ಎಂದು ಸಂಜಯ್ ರಾವತ್ ಮಾತನ್ನ ಬದಲಿಸಿದರು. ಇದನ್ನೂ ಓದಿ: ಕಂಗನಾ V/s ಮಹಾರಾಷ್ಟ್ರ ಸರ್ಕಾರ- ಮನೆ, ಕಚೇರಿ ನೆಲಸಮಕ್ಕೆ ಹೈಕೋರ್ಟ್ ತಡೆ-ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ
Advertisement
ಕಂಗನಾ ಏನೇ ಹೇಳಿದ್ರೂ ನಾವು ಪ್ರತಿಕ್ರಿಯೆ ನೀಡಲ್ಲ. ಮಹಾರಾಷ್ಟ್ರದ ಆಸ್ಮಿಯತೆ ಮತ್ತು ಗೌರವದ ಪ್ರಶ್ನೆ ಬಂದಾಗ ರಾಜ್ಯದ ಜನತೆ ಒಂದಾಗುತ್ತಾರೆ. ಕಂಗನಾ ಹೇಳಿಕೆಯಿಂದ ರಾಜ್ಯದ ಜನತೆ ಆಕ್ರೋಶಗೊಂಡಿದ್ದರು. ಕಂಗನಾ ಕಟ್ಟಡ ಕಚೇರಿ ಅಕ್ರಮವಾಗಿ ವಿನ್ಯಾಸ ಮಾಡಲಾಗಿತ್ತು. ಹಾಗಾಗಿ ಬಿಎಂಸಿ ಅದಕ್ಕೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಕರಣ ಹೈಕೋರ್ಟ್ ಅಂಗಳದಲ್ಲಿದ್ದು, ಹೆಚ್ಚು ಪ್ರತಿಕ್ರಿಯೆ ನೀಡುವುದು ಉತ್ತಮವಲ್ಲ ಎಂದರು. ಇದನ್ನೂ ಓದಿ: ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ
ಬೆದರಿಕೆ ಮಧ್ಯೆಯೂ ಮುಂಬೈಗೆ ಹಿಮಾಚಲಪ್ರದೇಶದಿಂದ ಹೊರಟಿದ್ದ ಕಂಗನಾ, ಮಹಾ ಸರ್ಕಾರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೂ, ಬಿಎಂಸಿಯನ್ನು ಬಾಬರ್ ಸೈನ್ಯಕ್ಕೂ ಹೋಲಿಸಿ ವಾಗ್ದಾಳಿ ನಡೆಸಿದ್ದರು. ಕಂಗನಾ ಮುಂಬೈಗೆ ಆಗಮಿಸಿದ ವೇಳೆ ವಿಮಾನ ನಿಲ್ದಾಣದ ಮುಂಭಾಗ ಹೈಡ್ರಾಮಾವೇ ನಡೆದಿತ್ತು. ಕಂಗನಾ ಭೇಟಿ ವಿರೋಧಿಸಿ ಶಿವಸೈನಿಕರು ದೊಡ್ಡ ಮಟ್ಟದಲ್ಲಿ ಸೇರಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ಭೇಟಿ ಬೆಂಬಲಿಸಿ ಕರ್ಣಿ ಸೇನಾ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಜಮಾಯಿಸಿದ್ದರು. ಕಂಗನಾ ಮುಖ್ಯದ್ವಾರದ ಮೂಲಕ ಹೊರ ಬಂದ್ರೆ ಗಲಾಟೆ ಆಗಬಹುದು ಎನ್ನುವ ಕಾರಣಕ್ಕೆ ವಿಮಾನ ನಿಲ್ದಾಣದ ಮತ್ತೊಂದು ಮಾರ್ಗದಲ್ಲಿ ಕಂಗನಾರನ್ನು ಕರೆದೊಯ್ಯಲಾಯ್ತು. ಇದನ್ನೂ ಓದಿ: ಶಿವಸೇನೆ ಧಮ್ಕಿ -ನಟಿ ಕಂಗನಾ ರಣಾವತ್ಗೆ ವೈ ದರ್ಜೆಯ ಭದ್ರತೆ