ಭೋಪಾಲ್: ಸೇನಾ ಮೇಜರ್, ಮಹಿಳಾ ಜಡ್ಜ್ ಮಧ್ಯಪ್ರದೇಶದಲ್ಲಿ ಕೇವಲ 500 ರೂಪಾಯಿ ಖರ್ಚುಮಾಡಿ ಸರಳವಾಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Advertisement
ಅತ್ಯಂತ ಸರಳವಾಗಿ ಮದುವೆಯಾಗಿರುವ ಈ ಜೋಡಿ ಭೋಪಾಲ್ ನಿವಾಸಿಗಳಾಗಿದ್ದಾರೆ. ಶಿವಾಂಗಿ ಜೋಶಿ ಮತ್ತು ಅನಿಕೇತ್ ಚತುರ್ವೇದಿ ಯಾವುದೇ ಆಡಂಬರವಿಲ್ಲದೇ ಮದುವೆಯಾಗುವ ಮೂಲಕ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದಲೇ ಕುಟುಂಬಸ್ಥರ ಅನುಮತಿ ಪಡೆದು ಜಡ್ಜ್ ಮುಂದೆಯೇ ಕೆಲವು ಮಂದಿ ಕುಟುಂಬಸ್ಥರ ಸಮ್ಮುಖದಲ್ಲಿ ಕೋರ್ಟ್ನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
Advertisement
Advertisement
ಸದ್ಯ ಅನಿಕೇತ್ ಲಡಾಖ್ನಲ್ಲಿ ಭಾರತೀಯ ಸೇನೆಯಲ್ಲಿದ್ದಾರೆ. ಶಿವಾಂಗಿ ಸಿಟಿ ಮೆಜಿಸ್ಟ್ರೇಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿ 2ವರ್ಷಗಳ ಹಿಂದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದರೆ ಕೊರೊನಾ ಇರುವ ಕಾರಣದಿಂದಾಗಿ ಹಲವು ಬಾರಿ ಇವರು ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಇವರು ಸರಳವಾಗಿ ಮದುವೆಯಾಗುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ.
Advertisement
ದಂಪತಿಗಳು ಮದುವೆಯಲ್ಲಿ ಅತಿಯಾದ ಖರ್ಚು ಮಾಡುವುದರಿಂದ ಹುಡುಗಿಯ ಕುಟುಂಬಕ್ಕೆ ಹೊರೆಯಾಗುವುದಲ್ಲದೆ, ಹಣದ ದುರುಪಯೋಗಕ್ಕೂ ಕಾರಣವಾಗುತ್ತದೆ. ಹೀಗಾಗಿ ನವು ಸರಳವಾಗಿ ಮದುವೆಯಾಗುವ ಮೂಲಕವಾಗಿ ಸಮಾಜಕ್ಕೆ ಸಂದೇಶವನ್ನು ಕೋಡಬೇಕು ಎಂದುಕೊಂಡಿದ್ದೇವು ಎಂದು ನವದಂಪತಿ ಹೇಳಿದ್ದಾರೆ.