– ಮುಖ್ಯಕಚೇರಿಗೆ ಬರಲು ಹೇಳಿ ಸುಪ್ರಿಯಾಗೆ ಸರ್ಪ್ರೈಸ್ ಗಿಫ್ಟ್
ತಿರುವನಂತಪುರ: ಜುಲೈ ತಿಂಗಳ ಮೊದಲ ವಾರದಲ್ಲಿ ಅಂಧ ವೃದ್ಧರೊಬ್ಬರ ಕೈಹಿಡಿದು ಬಸ್ ಹತ್ತಿಸಿದ ಮಹಿಳೆಗೆ ಇದೀಗ ಬಿಗ್ ಸರ್ಪ್ರೈಸ್ ಒಂದು ದೊರಕಿದೆ.
ಹೌದು. ಸುಪ್ರಿತಾ ಎಂಬ ಮಹಿಳೆ ತಾನು ಕೆಲಸ ಮಾಡುತ್ತಿರುವ ಅಂಗಡಿಯ ಬಳಿಯಿರುವ ಬಸ್ ನಿಲ್ದಾಣದಲ್ಲಿ ಅಂಧ ವೃದ್ಧರೊಬ್ಬರು ಬಸ್ಸಿಗೆ ಕಾಯುತ್ತಿರುವುದನ್ನು ಗಮನಿಸಿದ್ದಾರೆ. ಅಂತೆಯೇ ಬಸ್ ನಿಲ್ದಾಣಕ್ಕೆ ಇನ್ನೇನು ಹೊರ ಬೇಕೆನ್ನುವಷ್ಟುರಲ್ಲಿ ಅಜ್ಜ ಕೂಡ ಅದೇ ಬಸ್ಸಿಗೆ ಹತ್ತಲು ಹಪಹಪಿಸಿದ್ದಾರೆ. ಇವೆಲ್ಲವನ್ನು ಗಮನಿಸಿದ್ದ ಸುಪ್ರಿತಾ ಕೂಡಲೇ ಓಡೋಡಿ ಬಂದು, ಹೊರಡಲು ಅಣಿಯಾಗುತ್ತಿದ್ದ ಬಸ್ಸನ್ನು ನಿಲ್ಲಿಸಿದ್ದಾರೆ. ಅಲ್ಲದೆ ತಾತನ ಕೈ ಹಿಡಿದು ಬಸ್ ಹತ್ತಿಸಿದ್ದಾರೆ.
Advertisement
Advertisement
ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಜಾಲತಾಣಿಗರು ಕೂಡ ಮಹಿಳೆಯ ಮಾನವೀಯ ಕಾರ್ಯಕ್ಕೆ ಮಾರು ಹೋಗಿ ಶಹಬ್ಬಾಸ್ ಅಂದಿದ್ದರು. ಇದಿಗ ಇದೇ ಮಹಿಳೆಗೆ ಒಂದು ದೊಡ್ಡ ಗಿಫ್ಟ್ ಸಿಕ್ಕಿದೆ. ಅದೇನಂದರೆ ಸುಪ್ರಿಯಾಗೆ ಕನಸಿನ ಮನೆಯೊಂದು ದೊರಕಿದೆ. ಈ ಮನೆಯನ್ನು ಪ್ರತಿಷ್ಠಿತ ಆಭರಣ ಮಳಿಗೆಯಾದ ಜಾಯ್ ಅಲುಕ್ಕಾಸ್ ಅವರು ನೀಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದ ಮಹಿಳೆಯನ್ನು ಸಂಸ್ಥೆ ಗೌರವಿಸಿದೆ.
Advertisement
'Kindness is beautiful': A few days back a woman who helped visually-impaired man to get on the bus is now invited to meet chairman of #Joyallukas and was gifted a residential house. pic.twitter.com/haCdGpLyjv
— Amar Prasad Reddy (@amarprasadreddy) July 21, 2020
Advertisement
ಮಾನವೀಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಾಯ್ ಅಲುಕ್ಕಾಸ್ ಗ್ರೂಪ್ ಮುಖ್ಯಸ್ಥ ಜಾಯ್ ಅಲುಕ್ಕಾಸ್ ಅವರು ಸುಪ್ರಿಯಾ ಅವರನ್ನು ಭೇಟಿ ಮಾಡಿ, ಮೊದಲು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆ ಬಳಿಕ ತ್ರಿಶೂರಿನಲ್ಲಿರುವ ಮುಖ್ಯ ಕಚೇರಿಗೆ ಬಂದು ಭೇಟಿಯಾಗುವಂತೆ ಹೇಳಿದ್ದಾರೆ ಈ ವೇಳೆ ಸುಪ್ರಿಯಾಗೆ ಅಲ್ಲಿ ಬಿಗ್ ಗಿಫ್ಟ್ ಸಿಕ್ಕಿದೆ. ಇದನ್ನೂ ಓದಿ: ಅಂಧ ವೃದ್ಧನಿಗಾಗಿ ಓಡೋಡಿ ಬಂದು ಬಸ್ ನಿಲ್ಲಿಸಿದ ಮಹಿಳೆ- ವಿಡಿಯೋ ವೈರಲ್
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸುಪ್ರಿಯಾ, ನಾನು ಮಾಡಿರುವ ಕಾರ್ಯಕ್ಕೆ ಇಂತಹದ್ದೊಂದು ದೊಡ್ಡ ಉಡುಗೊರೆ ಸಿಗುತ್ತೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ನಾನು ಜಾಯ್ ಅಲುಕ್ಕಾಸ್ ಮುಖ್ಯ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿರುವ ನೂರಾರು ಸಿಬ್ಬಂದಿ ನನ್ನನ್ನು ಹುರಿದುಂಬಿಸಿದರು. ಈ ವೇಳೆ ನನ್ನ ಕಣ್ಣಂಚಲ್ಲಿ ನೀರು ಬಂತು. ನಾನು ವೃದ್ಧನಿಗೆ ಮಾಡಿರುವ ಸಹಾಯ ಅಚಾನಕ್ ಆಗಿದೆ. ಆದರೆ ಆ ವಿಚಾರ ನನ್ನನ್ನು ಈ ಮಟ್ಟಕ್ಕೆ ಅಲ್ಲದೆ ಇಷ್ಟೊಂದು ಮಂದಿ ಮೆಚ್ಚಿ ಕೊಂಡಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಖುಷಿ ಹಂಚಿಕೊಂಡಿದ್ದಾರೆ.
ಇದೇ ವೇಳೆ ಅಲುಕ್ಕಾಸ್ ಮುಖ್ಯಸ್ಥರ ಪತ್ನಿ ಕೂಡ ನನ್ನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ನೀವು ಈ ಹಿಂದೆಯೂ ತುಂಬಾ ಒಳ್ಳೆಯ ಕೆಲಸವನ್ನು ಮಾಡಿರಬೇಕು. ಹೀಗಾಗಿ ಇಂದು ಈ ಕೆಲಸ ಮಾಡಲು ಅದು ಪ್ರೇರೇಪಿಸಿದೆ. ಈ ದೇಶದಲ್ಲಿ ಅನುಕಂಪ ಎಂಬುದು ಹರಿಯುವ ನದಿ ಆಗಿರಬೇಕು. ಅದು ಯಾವತ್ತೂ ಬತ್ತಬಾರದು ಎಂದು ಹೇಳಿರುವ ಮಾತನ್ನು ಸುಪ್ರಿಯಾ ಉಲ್ಲೇಖಿಸಿದ್ದಾರೆ.
she made this world a better place to live.kindness is beautiful!????
உலகம் அன்பான மனிதர்களால் அழகாகிறது#kindness #love pic.twitter.com/B2Nea2wKQ4
— Vijayakumar IPS (@vijaypnpa_ips) July 8, 2020
ಸುಪ್ರಿಯಾ ಅವರು ಜಾಲಿ ಸಿಲ್ಕ್ಸ್ ಎಂಬ ಟೆಕ್ಸ್ ಟೈಲ್ ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಪರಿ ಕೂಡ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.