ಚೆನ್ನೈ: ದುಬೈನ ಶಾರ್ಜಾದಿಂದ ಹಿಂದಿರುಗುತ್ತಿದ್ದ ಪ್ರಯಾಣಿಕನೊಬ್ಬನ ಬಳಿ ಇದ್ದ 1.97 ಕೋಟಿ ಮೌಲ್ಯದ 3.72 ಕೆ.ಜಿ ಶುದ್ಧ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಚೈನ್ನೈನಲ್ಲಿ ನಡೆದಿದೆ.
ದುಬೈನ ಎಮಿರೇಟ್ಸ್ ಫ್ಲೈಟ್ ಇಕೆ 544 ಮೂಲಕ ಚೆನ್ನೈಗೆ ಆಗಮಿಸಿದ ಪದ್ಮಾ ಬಾಲಾಜಿ(25) ಅವರನ್ನು ತಡೆದು ಪರಿಶೀಲನೆ ಮಾಡಿದಾಗ ಆತ ತನ್ನ ಒಳ ಉಡುಪಿನಲ್ಲಿ ಮರೆಮಾಚಿದ್ದ ದೊಡ್ಡ ಕ್ಯಾಡ್ಬರೀಸ್ ಡೈರಿ ಮಿಲ್ಕ್ ಚಾಕ್ಲೇಟ್ ಕಂಡುಬಂದಿದೆ.
Advertisement
Advertisement
ಚಾಕ್ಲೇಟ್ ತೆರೆದು ನೋಡಿದಾಗ 660 ಗ್ರಾಂ ಚಿನ್ನದ ಪೇಸ್ಟ್ ಹೊಂದಿರುವ ಪ್ಲಾಸ್ಟಿಕ್ ಪ್ಯಾಕೆಟ್ ಮೂಲಕ ಸುತ್ತಿಡಲಾಗಿತ್ತು. ಹೊರತೆಗೆದಾಗ 28.7 ಲಕ್ಷ ರೂ ಬೆಲೆ ಬಾಳುವ 546 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಆತನಿಂದ ವಶಪಡಿಸಿಕೊಂಡು ಪ್ರಯಾಣಿಕ ಪದ್ಮ ಬಾಲಾಜಿಯನ್ನು ಬಂಧಿಸಿದ್ದಾರೆ. ಅಲ್ಲದೆ ಬುಧವಾರ ಏರ್ ಇಂಡಿಯಾ ಫ್ಲೈಟ್ ಮೂಲಕ ಆಗಮಿಸಿದ 11 ಮಂದಿ ಪ್ರಯಾಣಿಕರು ತಮ್ಮ ಗುದನಾಳದಲ್ಲಿ ಅಡಗಿಸಿಕೊಂಡಿದ್ದ 12 ಚಿನ್ನದ ಪೇಸ್ಟ್ ಕಟ್ಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊರತೆಗೆದಾಗ 2.15 ಕೆಜಿ ಚಿನ್ನವಾಗಿದ್ದು, ಅದರ ಬೆಲೆ 1.14 ಕೋಟಿ ಆಗಿತ್ತು.
Advertisement
Advertisement
ಶಾರ್ಜಾದಿಂದ ಆಗಮಿಸಿದ 3 ಏರ್ ಅರೇಬಿಯಾ ವಿಮಾನದ ಜಿ 9-471 ಎಂಬ ಪ್ರಯಾಣಿಕನ ಗುದನಾಳದಲ್ಲಿ ಇದ್ದ 831 ಗ್ರಾಂ ತೂಕದ ಐದು ಕಟ್ಟುಗಳ ಚಿನ್ನದ ಪೇಸ್ಟ್ ನನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಆತನ ಬಳಿ 685 ಗ್ರಾಂ ಚಿನ್ನವಿದ್ದು, ಇದರ ಬೆಲೆ 36.40 ಲಕ್ಷ ರೂಗಳಾಗಿತ್ತು. ಫ್ಲೈ ದುಬೈ ಫ್ಲೈಟ್ ಎಫ್ಜೆಡ್ 8517 ಪ್ರಯಾಣಿಕನೊಬ್ಬನು ನಿರ್ಗಮಿಸುತ್ತಿದ್ದ ವೇಳೆ ತಡೆಹಿಡಿದು ಪರಿಶೀಲಿಸಿದಾಗ ಆತ ತನ್ನ ಗುದನಾಳದಲ್ಲಿ 401 ಗ್ರಾಂ ತೂಕದ ಎರಡು ಚಿನ್ನದ ಪೇಸ್ಟ್ ಕಟ್ಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹೊರತೆಗೆದಾಗ 18.28 ಲಕ್ಷರೂ ಮೌಲ್ಯದ 347 ಗ್ರಾಂ ಚಿನ್ನ ಸಿಕ್ಕಿತ್ತು.