ಟೋಕಿಯೋ: ಜಪಾನ್ನಲ್ಲಿ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಮತ್ತು ಅವರ ತರಬೇತುದಾರರಿಗೆ ಭಾರೀ ಮೊತ್ತದ ನಗದು ಬಹುಮಾನವನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್(ಐಒಎ) ಘೋಷಿಸಿದೆ.
Advertisement
ಒಲಿಂಪಿಕ್ಸ್ನಲ್ಲಿ ಭಾಗವಹಿಸಿರು ಭಾರತೀಯ ಕ್ರೀಡಾಪಟುಗಳು ಚಿನ್ನ, ಬೆಳ್ಳಿ, ಕಂಚು ಯಾವುದೇ ಪದಕ ಗೆದ್ದರೂ ಕೂಡ ನಗದು ಬಹುಮಾನ ಘೋಷಿಸಿದ್ದ ಐಒಎ ಇದೀಗ ಅಥ್ಲೀಟ್ಸ್ ಜೊತೆ ಅವರ ಕೋಚ್ಗಳಿಗೂ ಕೂಡ ನಗದು ಬಹುಮಾನವನ್ನು ಘೋಷಿಸಿದೆ.
Advertisement
Advertisement
ಟೋಕಿಯೋ ಒಲಿಂಪಿಕ್ಸ್ನ ಮಹಿಳೆಯರ 49 ಕೆಜಿ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮೀರಾಬಾಯಿ ಚಾನು ಅವರ ಕೋಚ್ ವಿಜಯ್ ಶರ್ಮಾ ಅವರಿಗೆ 10ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು
Advertisement
ಇದಲ್ಲದೆ ಇನ್ನೂ ಮುಂದೆ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳ ಕೋಚ್ಗಳಿಗೆ 12.5 ಲಕ್ಷ ರೂಪಾಯಿ, ಬೆಳ್ಳಿ ಗೆದ್ದರೆ 10 ಲಕ್ಷ ರೂಪಾಯಿ ಮತ್ತು ಕಂಚು ಗೆದ್ದರೆ 7.5 ಲಕ್ಷ ರೂಪಾಯಿ ಕೊಡುವುದಾಗಿ ಐಒಎ ತಿಳಿಸಿದೆ.
ಈ ಕುರಿತು ಮಾತನಾಡಿದ ಐಒಎನ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು, ಪದಕ ಗೆಲ್ಲುವ ಕ್ರೀಡಾಪಟುಗಳೊಂದಿಗೆ ಅವರ ಕೋಚ್ಗಳಿಗೂ ನಗದು ಬಹುಮಾನವನ್ನು ಘೋಷಿಸಲಾಗಿದ್ದು, ಪ್ರತಿದಿನ ಕ್ರೀಡಾಪಟುಗಳೊಂದಿಗೆ ಅವರ ಕೋಚ್ಗಳು ಕೂಡ ಶ್ರಮ ವಹಿಸುತ್ತಾರೆ. ಹಾಗಾಗಿ ಅವರಿಗೂ ಕೂಡ ಗೌರವಿಸಲು ನಿರ್ಧರಿಸಿದ್ದೇವೆ ಎಂದರು.
Coaches who are in Tokyo with athletes and have trained them will be given cash rewards. It will be a huge morale booster for them. Vijay Sharma Mirabai Chanu's coach will be given Rs 10 lakhs: IOA Secretary General Rajeev Mehta to ANI
— ANI (@ANI) July 24, 2021
ಈ ಹಿಂದೆ ರಾಷ್ಟ್ರೀಯ ಫೆಡರೇಶನ್(ಎನ್ಎಸ್ಎಫ್) ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುವಿಗೆ 25 ಲಕ್ಷ ರೂಪಾಯಿ ಬೋನಸ್ ಜೊತೆ 75 ಲಕ್ಷ ರೂಪಾಯಿ ನಗದು, ಬೆಳ್ಳಿ ಪದಕ ಗೆದ್ದವರಿಗೆ 40 ಲಕ್ಷ ರೂಪಾಯಿ ಮತ್ತು ಕಂಚಿನ ಪದಕ ಗೆದ್ದವರಿಗೆ 25 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿತ್ತು. ಈ ಮೂಲಕ ಭಾರತದ ಪದಕ ವಿಜೇತರಿಗೆ ಇನ್ನಷ್ಟು ಹುರುಪನ್ನು ಮೂಡಿಸಿದೆ.