CrimeLatestMain PostNational

ಒಬ್ಬನೊಂದಿಗೆ ತಾಯಿ-ಮಗಳ ಅಕ್ರಮ ಸಂಬಂಧ – ಗೂಢಚಾರಿಕೆ ನಡೆಸ್ತಿದ್ದವನನ್ನ ಕೊಂದೇ ಬಿಟ್ರು!

Advertisements

– ಪ್ರಿಯಕರನ ಜೊತೆ ಸೇರಿ ಸಂಚು ರೂಪಿಸಿದ ಅಮ್ಮ, ಮಗಳು

ಲಕ್ನೊ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಯುವಕನ್ನು ತಾಯಿ, ಮಗಳು ಮತ್ತು ಪ್ರಿಯಕರ ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ತಾಯಿ-ಮಗಳು ಇಬ್ಬರು ಒಬ್ಬನೊಂದಿಗೆಯೇ ಅನೈತಿಕ ಸಂಬಂಧ ಹೊಂದಿದ್ದರು.

ನವೀನ್ ಅನೈತಿಕ ಸಂಬಂಧದ ಗೂಢಚಾರಿ ನಡೆಸಿ ಕೊಲೆಯಾದ ಯುವಕ. ಭರತ್ ಎಂಬವನು ತನ್ನ ತಾಯಿ ಮತ್ತು ಸೋದರಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ಹೊಂದಿದ್ದನು. ಹೀಗಾಗಿ ಇಬ್ಬರ ಜೊತೆ ಇರೋ ವ್ಯಕ್ತಿಯನ್ನ ಪತ್ತೆ ಮಾಡಲು ನವೀನ್‍ಗೆ ಸೂಚಿಸಿದ್ದನು. ಭರತ್ ಸೂಚನೆಯಂತೆ ನವೀನ್, ಆ ಇಬ್ಬರ ನಡೆಯನ್ನು ಗಮನಿಸುತ್ತಿದ್ದನು.

ಗೂಢಚಾರಿಕೆಯ ವಿಷಯ ಭರತ್ ನ ತಾಯಿ ಮತ್ತು ತಂಗಿಗೆ ಗೊತ್ತಾಗಿದೆ. ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ನವೀನ್ ನನ್ನು ಕೊಲ್ಲಲು ಇಬ್ಬರು ಪ್ಲಾನ್ ಮಾಡಿದ್ದರು. ನಂತರ ಗೆಳೆಯ ರಂಜಿತ್ ಪಾಲ್‍ಗೆ ಆತನನ್ನು ಕೊಲ್ಲುವಂತೆ ಹೇಳಿದ್ದಾರೆ. ತಾಯಿ-ಮಗಳ ಮಾತು ಕೇಳಿದ ರಂಜಿತ್, ಮೊದಲಿಗೆ ನವೀನ್ ಸ್ನೇಹ ಸಂಪಾದಿಸಿದ್ದಾನೆ. ಭಾನುವಾರ ಉಪಾಯವಾಗಿ ನವೀನ್ ನನ್ನು ಟೆಸ್ಕೋ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಮದ್ವೆಯಾದ್ರೂ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ- ಸಿಕ್ಕಿ ಬಿದ್ದಾಗ ಕೊಂದೇ ಬಿಟ್ರು!

ಕೊಲೆಯ ವಿಷಯ ತಿಳಿಯುತ್ತಿದ್ದಂತೆ ಪೊಲೀಸುರ ಘಟನಾ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದರು. ಮೊದಲಿಗೆ ಅನುಮಾನದ ಮೇಲೆ ರಂಜಿತ್ ಪಾಲ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ವಿಷಯ ಬಾಯಿಬಿಟ್ಟಿದ್ದಾನೆ. ರಂಜಿತ್ ಹೇಳಿಕೆಯ ಮೇಲೆ ಇದೀಗ ಪೊಲೀಸರು ತಾಯಿ-ಮಗಳನ್ನು ಸಹ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಬೇಡ, ಸೆಕ್ಸ್ ವೇಳೆ ಮಾಸ್ಕ್ ಧರಿಸಿ- ತಜ್ಞರ ಸಲಹೆ

Leave a Reply

Your email address will not be published.

Back to top button