– 3 ವರ್ಷದ ಮಗು ಬಿಟ್ಟು ತಾಯಿ ಆತ್ಮಹತ್ಯೆ
– ಪೋಷಕರು ಮದುವೆಗೆ ತಯಾರಿ ಮಾಡ್ತಿದ್ರು
ಚೆನ್ನೈ: ಸ್ನೇಹಿತೆಯರಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ತಿರುಚಂಗೋಡು ತಾಲೂಕಿನಲ್ಲಿ ನಡೆದಿದೆ.
ಮೃತರನ್ನು ತಿರುಚಂಗೋಡು ತಾಲೂಕಿನ ಜ್ಯೋತಿ (31) ಮತ್ತು ಪ್ರಿಯಾ (23) ಎಂದು ಗುರುತಿಸಲಾಗಿದೆ. ಇಬ್ಬರೂ ಸ್ನೇಹಿತೆಯರಾಗಿದ್ದರು.
Advertisement
Advertisement
ಜ್ಯೋತಿಗೆ ಮದುವೆಯಾಗಿದ್ದು, ಮೂರು ವರ್ಷದ ಮಗಳಿದ್ದಾಳೆ. ಆದರೆ ಎರಡು ವರ್ಷದಿಂದ ಜ್ಯೋತಿ ತನ್ನ ಪತಿಯಿಂದ ಬೇರೆಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಜ್ಯೋತಿಯ ಜೊತೆ ಪ್ರಿಯಾ ಕೂಡ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಜ್ಯೋತಿ ಸಹೋದರ ಮನೆಗೆ ಬಂದು ಬಾಗಿಲು ಬಡಿದಿದ್ದಾರೆ. ಆದರೆ ಜ್ಯೋತಿ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸ್ವಲ್ಪ ಸಮಯದ ನಂತರ ಅನುಮಾನಗೊಂಡು ಕಿಟಕಿಯ ಮೂಲಕ ನೋಡಿದ್ದಾರೆ. ಆಗ ಜ್ಯೋತಿ ಮತ್ತು ಪ್ರಿಯಾ ಇಬ್ಬರೂ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಂತರ ನೆರೆಹೊರೆಯವರ ಸಹಾಯದಿಂದ ಬಾಗಿಲನ್ನು ಒಡೆದು ಮನೆಯೊಳಗೆ ಹೋಗಿದ್ದಾರೆ. ಅಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದರು.
Advertisement
ಮೃತ ಪ್ರಿಯಾಳ ಪೋಷಕರು ಆಕೆಯ ಮದುವೆಗೆ ಸಿದ್ಧತೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯಕ್ಕೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಬೇರೆಯಾಗಲು ಇಷ್ಟವಿರಲಿಲ್ಲ. ಇದರಿಂದ ಇಬ್ಬರು ಸ್ನೇಹಿತೆಯರು ಆತ್ಮಹತ್ಯೆ ಮಾಡಿಕೊಂಡಿರಹುದು. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಆದರೆ ಇಬ್ಬರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.