– ಕನ್ಯಾದಾನದ ಬಳಿಕ ಹಸೆಮಣೆ ಏರಿದ ಅಮ್ಮ
– ಅತ್ತಿಗೆಯನ್ನ ಮದ್ವೆಯಾದ ಮೈದುನ
ಲಕ್ನೋ: ಒಂದೇ ಮಂಟಪದಲ್ಲಿ ತಾಯಿ- ಮಗಳು ಮದುವೆಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿ ನಡೆದಿದೆ. ಕನ್ಯಾದಾನದ ಬಳಿಕ ವಧುವಾಗಿ ಬಂದ ಅಮ್ಮ ಮೈದುನ ಜೊತೆ ಮದುವೆಯಾಗಿದ್ದಾರೆ.
ಗೋರಖ್ಪುರನಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಅಡಿಯಲ್ಲಿ 63 ಜೋಡಿಗಳ ಮದುವೆ ಆಯೋಜಿಸಲಾಗಿತ್ತು. 63ರ ಜೋಡಿಗಳಲ್ಲಿ ತಾಯಿ -ಮಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಪಿಪರೌಲಿಯ ಬೇಲಾ ದೇವಿ ಮೊದಲಿಗೆ ತಮ್ಮ ಕಿರಿಯ ಮಗಳ ಮದುವೆ ಮಾಡಿದ್ದಾರೆ. ನಂತರ ಅದೇ ಮಂಟಪದಲ್ಲಿ 55 ವರ್ಷದ ಮೈದುನ ಜಗದೀಶ್ ಜೊತೆ ಹಸೆಮಣೆ ಏರಿದ್ದಾರೆ.
Advertisement
Advertisement
ಕುಟುಂಬಸ್ಥರಿಂದ ಮದ್ವೆಗೆ ಸಮ್ಮತಿ: ಬೇಲಾದೇವಿ ಅವರಿಗೆ ಒಟ್ಟು 5 ಮಕ್ಕಳಿದ್ದು, ಅದರಲ್ಲಿ ನಾಲ್ವರ ಮದುವೆ ಮಾಡಿದ್ದರು. ಇದೀಗ ಕೊನೆಯ ಮಗಳ ಮದುವೆಯನ್ನ ರಾಹುಲ್ ಎಂಬ ಯುವಕನ ಜೊತೆ ನೆರೆವೇರಿಸಿದ್ದಾರೆ. ಈಗಾಗಲೇ ಮದುವೆಯಾಗಿರುವ ಗಂಡು ಮಕ್ಕಳು ತಾಯಿಯಿಂದ ಪ್ರತ್ಯೇಕರಾಗಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಕೊನೆಯ ಮಗಳ ಮದುವೆ ಬಳಿಕ ಬೇಲಾದೇವಿ ಒಂಟಿಯಾಗಿದ್ದರು. ಕುಟುಂಬಸ್ಥರ ಸಮ್ಮತಿಯ ಮೇರೆಗೆ ಈ ಮದುವೆ ಆಗಿದ್ದಾರೆ. ಇದನ್ನೂ ಓದಿ: ಅಣ್ಣನಿಲ್ಲದ ರಾತ್ರಿ ಬೆಡ್ ರೂಮಿಗೆ ಬಂದು ಅತ್ತಿಗೆಗೆ I Love You ಅಂದ ಮೈದುನ
Advertisement
Advertisement
25 ವರ್ಷಗಳ ನಂತ್ರ ಸಿಂಧೂರವಿಟ್ಟ ತಾಯಿ: 25 ವರ್ಷಗಳ ಹಿಂದೆ ಬೇಲಾದೇವಿ ಪತಿ ಮರಣ ಹೊಂದಿದ್ದರು. ಎರಡು ಗಂಡು ಮತ್ತು ಮೂರು ಹೆಣ್ಣು ಮಕ್ಕಳ ಜೊತೆ 25 ವರ್ಷ ಜೀವನ ನಡೆಸಿದ್ದರು. ಇದೀಗ ಕುಟುಂಬಸ್ಥರು ಒಂಟಿಯಾದ ಬೇಲಾದೇವಿಗೆ ಮದುವೆ ಮಾಡಿಸಿದ್ದಾರೆ. 25 ವರ್ಷದ ಬಳಿಕ ಬೇಲಾದೇವಿ ಮತ್ತೊಮ್ಮೆ ಸಿಂಧೂರವಿಟ್ಟ ಸಂಭ್ರಮದಲ್ಲಿದ್ದಾರೆ. ಇದನ್ನೂ ಓದಿ: ಅತ್ತಿಗೆ ಜೊತೆ ಮದುವೆ- ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ಬಾಲಕ