– ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 356ಕ್ಕೆ ಏರಿಕೆ
ರಾಯಚೂರು: ಮಹಾರಾಷ್ಟ್ರದ ನಂಟಿನ ಪರಿಣಾಮ ರಾಯಚೂರಿನಲ್ಲಿಂದು ಮೂರು ಜನ ಪೊಲೀಸ್ ಕಾನ್ಸ್ಟೇಬಲ್, 35 ಮಂದಿ ಮಕ್ಕಳು ಸೇರಿ 88 ಜನರಲ್ಲಿ ಕೊರೊನಾ ವೈರಸ್ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 356ಕ್ಕೇರಿದೆ. ರಾಜ್ಯದ ಸೋಂಕಿತರ ಪಟ್ಟಿಯಲ್ಲಿ ರಾಯಚೂರು ನಾಲ್ಕನೇ ಸ್ಥಾನಕ್ಕೇರಿದೆ. ಕ್ವಾರಂಟೈನ್ನಲ್ಲಿದ್ದವರಿಂದಲೇ 76 ಜನರಿಗೆ ಸೋಂಕು ತಗುಲಿದೆ.
Advertisement
ರೋಗಿ ಸಂಖ್ಯೆ 2939 ರಿಂದ 14 ಜನರಿಗೆ, ರೋಗಿ ಸಂಖ್ಯೆ 2641 ರಿಂದ 9 ಜನರಿಗೆ, ರೋಗಿ ಸಂಖ್ಯೆ 2608 ರಿಂದ 17 ಜನರಿಗೆ, ರೋಗಿ ಸಂಖ್ಯೆ 2612 ರಿಂದ 30 ಜನರಿಗೆ, ರೋಗಿ ಸಂಖ್ಯೆ 2936 ರಿಂದ 6 ಜನರಿಗೆ ಸೋಂಕು ತಗುಲಿದೆ. ಎಲ್ಲಾ ರೋಗಿಗಳು ಮಹಾರಾಷ್ಟದಿಂದ ಬಂದವರಾಗಿದ್ದಾರೆ. ತೆಲಂಗಾಣದಿಂದ ಬಂದವರಲ್ಲಿ 1, ಮಹಾರಾಷ್ಟ್ರದಿಂದ ಬಂದವರಲ್ಲಿ 9 ಜನ, ತೀವ್ರ ಉಸಿರಾಟ ತೊಂದರೆಯಿರುವ ಒಂದು ಪ್ರಕರಣ ಪಾಸಿಟಿವ್ ಬಂದಿದೆ. ಆದ್ರೆ ರೋಗಿ ಸಂಖ್ಯೆ 4100ಕ್ಕೆ ಸೋಂಕು ತಗುಲಿರುವ ಮೂಲ ಪತ್ತೆಯಾಗಿಲ್ಲ.
Advertisement
Advertisement
ಮಹಾರಾಷ್ಟ್ರದಿಂದ ಬಂದವರಿಂದಲೇ ಇತರರಿಗೂ ಸೋಂಕು ಹಬ್ಬಿದೆ. ಈ ಮೂಲಕ ದೇವದುರ್ಗ ತಾಲೂಕಿನ ಸೋಂಕಿತರ ಸಂಖ್ಯೆ 301ಕ್ಕೇರಿದೆ. ದೇವದುರ್ಗದ ಕ್ವಾರಂಟೈನ್ ಕೇಂದ್ರದಲ್ಲಿರುವವರೆಲ್ಲಾ ಬಹುತೇಕ ಮಹಾರಾಷ್ಟ್ರದಿಂದ ಬಂದಿದ್ದಾರೆ. ಇದೂವರೆಗೆ ರಾಯಚೂರಿನ 33 ಮಂದಿ, ಲಿಂಗಸುಗೂರಿನ 14 , ಮಸ್ಕಿಯ 8 ಜನರಿಗೆ ಸೋಂಕು ತಗುಲಿದೆ.
Advertisement
ಸೋಂಕಿತರ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕಿತರ ಪತ್ತೆಕಾರ್ಯ ಮುಂದುವರಿದಿದೆ. ಸೋಂಕು ಕ್ವಾರಂಟೈನ್ ಕೇಂದ್ರದಿಂದ ಸಮುದಾಯಕ್ಕೂ ಹಬ್ಬಿರುವುದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ. ನಗರದ ಕೃಷಿ ವಿವಿ ಕ್ವಾರಂಟೈನ್ ಕೇಂದ್ರಕ್ಕೆ ಕಾವಲಿದ್ದ ಪಶ್ಚಿಮ ಪೊಲೀಸ್ ಠಾಣೆಯ ಮೂವರು ಕಾನ್ಸ್ ಟೇಬಲ್ಗಳಿಗೆ ಸೋಂಕು ಧೃಡವಾಗಿರುವುದು ಪೋಲಿಸರನ್ನೂ ಬೆಚ್ಚಿಬೀಳಿಸಿದೆ.