– ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನ
ಮೈಸೂರು: ಸುತ್ತಲಿನ ಗ್ರಾಮಗಳ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿ, ಒಂದು ವರ್ಷದಿಂದ ಸತಾಯಿಸುತ್ತಿದ್ದ ಚಿರತೆ ಕೊನೆಗೂ ಸೆರೆಯಾಗಿದ್ದು, ಸ್ಥಳೀಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
Advertisement
ಹುಣಸೂರು ತಾಲೂಕಿನ ಹನಗೋಡಿನ ಬಳಿ ಚಿರತೆ ಸೆರೆಯಾಗಿದ್ದು, ಕಳೆದ ಒಂದು ವರ್ಷದಿಂದಲೂ ಲಕ್ಷ್ಮಣ ತೀರ್ಥ ನದಿ ದಂಡೆಯಲ್ಲೇ ನೆಲೆಸಿ, ಸುತ್ತಲಿನ ಗ್ರಾಮಸ್ಥರಿಗೆ ಕಾಟ ನೀಡುತ್ತಿತ್ತು. ಅಲ್ಲದೆ ಸುತ್ತಲಿನ ಗ್ರಾಮಗಳಾದ ಹನಗೋಡು, ಅಬ್ಬೂರು, ಬಿ.ಆರ್.ಕಾವಲ್ ಗ್ರಾಮಗಳ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸಿತ್ತು. ಹಲವು ಬಾರಿ ಗ್ರಾಮಸ್ಥರೂ ಚಿರತೆಯನ್ನು ಕಂಡಿದ್ದರು. ಬಳಿಕ ಹತ್ತಾರು ಬೋನ್ ಇಟ್ಟು ಸೆರೆ ಹಿಡಿಯಲು ಯತ್ನಿಸಿದರೂ ಚಿರತೆ ಮಾತ್ರ ಸಿಕ್ಕಿರಲಿಲ್ಲ.
Advertisement
Advertisement
ಕಳೆದ ಒಂದು ವರ್ಷದಿಂದ ಎಷ್ಟೇ ಪ್ರಯತ್ನಪಟ್ಟರೂ ಚಿರತೆ ಬಲೆಗೆ ಬೀಳದ ಹಿನ್ನೆಲೆ ಅರವಳಿಕೆ ನೀಡಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಇದೀಗ ಕೊನೆಗೂ ಬೋನಿನಲ್ಲಿ ಸೆರೆಯಾಗಿದ್ದು, ಸುತ್ತಲಿನ ಗ್ರಾಮಗಳ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.