ಭುವನೇಶ್ವರ: ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ರೈತನೋರ್ವ ಸೋಲಾರ್ ಬ್ಯಾಟರಿ ಮೂಲಕ ಚಲಿಸುವ ನಾಲ್ಕು ಚಕ್ರದ ವಾಹನವನ್ನು ತಯಾರಿಸಿದ್ದಾರೆ.
Advertisement
ಮಯೂರ್ ಭಂಜ್ನ ಕಾರಂಜಿಯಾ ಉಪವಿಭಾಗದ ಸುಶೀಲ್ ಅಗರ್ವಾಲ್ ಎಂಬವರು 850 ವ್ಯಾಟ್ಸ್ ಮೋಟಾರ್ ಹಾಗೂ 100 ಎಎಚ್/54 ವೋಲ್ಟ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ ಕಾರನ್ನು ತಯಾರಿಸಿದ್ದಾರೆ. ಅಲ್ಲದೆ ಒಂದು ಬಾರಿ ಚಾರ್ಜ್ ಮಾಡಿದರೆ ಈ ವಾಹನ 300 ಕಿ.ಮೀವರೆಗೂ ಚಲಿಸುತ್ತದೆ.
Advertisement
ಪುಸ್ತಕಗಳನ್ನು ಮತ್ತು ಯೂಟ್ಯೂಬ್ ವೀಡಿಯೋಗಳನ್ನು ನೋಡುವ ಮೂಲಕ ಲಾಕ್ಡೌನ್ ಸಮಯದಲ್ಲಿ ಸುಶೀಲ್ ಅಗರ್ವಾಲ್ ಈ ಕಾರನ್ನು ಮನೆಯಲ್ಲಿಯೇ ತಯಾರಿಸಿದ್ದಾರೆ. ಜೊತೆಗೆ ಕಾರಿನ ಬ್ಯಾಟರಿಯನ್ನು ಎಂಟೂವರೆ ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ತಿಳಿಸಿದ್ದಾರೆ.
Advertisement
Advertisement
ನಾನು ಮನೆಯಲ್ಲಿಯೇ ವರ್ಕ್ ಶಾಪ್ ಹೊಂದಿದ್ದು, ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಕಾರನ್ನು ತಯಾರಿಸಲು ಆರಂಭಿಸಿದೆ. ಇದು 300 ಕಿಮೀ ವರೆಗೂ ಚಲಿಸುತ್ತದೆ. ಅಲ್ಲದೆ ಈ ವಾಹನದ ಬ್ಯಾಟರಿಯು ನಿಧಾನವಾಗಿ ಚಾರ್ಜ್ ಆಗುತ್ತದೆ. ಅಲ್ಲದೆ ಈ ಬ್ಯಾಟರಿ ಹತ್ತು ವರ್ಷ ಗ್ಯಾರಂಟಿ ಹೊಂದಿದೆ ಎಂದು ಸುಶೀಲ್ ಅಗರ್ವಾಲ್ ಹೇಳಿದ್ದಾರೆ. ಅಲ್ಲದೆ ತಮ್ಮ ಮನೆಯಲ್ಲಿರುವ ವರ್ಕ್ಶಾಪ್ನಲ್ಲಿ ಮೋಟಾರ್ ವಿಂಡಿಂಗ್, ಎಲೆಕ್ಟ್ರಿಕಲ್ ಫಿಟ್ಟಿಂಗ್ ಮತ್ತು ಚಾಸಿಸ್ ಎಲ್ಲ ಕೆಲಸಗಳನ್ನು ಇಬ್ಬರು ಮೆಕಾನಿಕ್ಸ್ ಮತ್ತು ಸ್ನೇಹಿತರೊಬ್ಬರ ಸಹಾಯದಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ.
ಲಾಕ್ಡೌನ್ ವೇಳೆ ನಾನು ಮನೆಯಲ್ಲೇ ಇದ್ದಿದ್ದರಿಂದ ಬೇಸರವಾಗುತ್ತಿತ್ತು ಈ ವೇಳೆ ಕಾರನ್ನು ನಿರ್ಮಿಸಲು ಯೋಚಿಸಿದೆ. ಲಾಕ್ಡೌನ್ ನಿರ್ಬಂಧಗಳನ್ನು ತೆಗೆದು ಹಾಕಿದ ಬಳಿಕ ಇಂಧನ ಬೆಲೆ ಹೆಚ್ಚಾಗುತ್ತದೆ ಎಂದು ನನಗೆ ತಿಳಿದಿತ್ತು. ಹಾಗಾಗಿ ನಾನು ಸೋಲಾರ್ ಬ್ಯಾಟರಿ ಮೂಲಕ ಚಲಿಸುವ ಕಾರನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ನುಡಿದರು.