ಮ್ಯಾಂಚೆಸ್ಟರ್: ಚೀನಿ ವೈರಸ್ ಕಷ್ಟದ ನಡುವೆಯೂ ಇಂಗ್ಲೆಂಡ್‍ನಲ್ಲಿ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿದೆ. ಆದರೆ ಇಂಗ್ಲೆಂಡ್ ಕ್ರಿಕೆಟಿಗ ಡೊಮಿನಿಕ್ ಸಿಬ್ಲಿ ಪಂದ್ಯದ ನಡುವೆ ಚೆಂಡಿಗೆ ಸಲೈವಾ (ಎಂಜಲು) ಉಜ್ಜಿದ್ದಾರೆ. ಈ ಮೂಲಕ ಐಸಿಸಿ ಜಾರಿ ಮಾಡಿದ್ದ ಹೊಸ ನಿಯಮವನ್ನು ಉಲ್ಲಂಘಿಸಿದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ.
ಕ್ರಿಕೆಟ್‍ನಲ್ಲಿ ಬೌಲರ್ ಕೈಗೆ ಚೆಂಡು ನೀಡುವ ಮುನ್ನ ಆಟಗಾರ ಚೆಂಡಿಗೆ ಎಂಜುಲು ಉಜ್ಜಿ ಚೆಂಡಿನ ಶೈನ್ ಕಾಪಾಡಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ ಕೊರೊನಾ ಕಾರಣದಿಂದ ಇತ್ತೀಚೆಗೆ ಐಸಿಸಿ ಇದಕ್ಕೆ ನಿರ್ಬಂಧ ಹೇರಿದ್ದು, ಆಟಗಾರ 2 ಬಾರಿ ಈ ನಿಯಮವನ್ನು ಉಲ್ಲಂಘಿಸಿದರೆ ತಂಡಕ್ಕೆ 5 ರನ್ ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಿತ್ತು.
Advertisement
WATCH: Highlights from Day 4 as @StuartBroad & @chriswoakes gave us a chance of victory! ????
???? 15-minute Highlights ➡️ https://t.co/23wOC9GiH9#ENGvWI pic.twitter.com/YK43INjoiN
— England Cricket (@englandcricket) July 20, 2020
Advertisement
ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವೆ ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಫೀಲ್ಡರ್ ಡೊಮಿನಿಕ್ ಸಿಬ್ಲಿ ಹಲವು ದಿನಗಳ ಅಭ್ಯಾಸದಂತೆ ಚೆಂಡು ಕೈಗೆ ಬರುತ್ತಿದಂತೆ ಎಂಜಲು ಉಜ್ಜಿ ನಿಯಮ ಉಲ್ಲಂಘಿಸಿದ್ದಾರೆ. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನ 42ನೇ ಓವರಿನಲ್ಲಿ ಘಟನೆ ನಡೆದಿದ್ದು, ಆಫ್ ಸ್ಪಿನ್ನರ್ ಡೊಮ್ ಬೆಸ್ ಬೌಲಿಂಗ್ ಮಾಡಲು ಮುಂದಾಗಿದ್ದರು. ಈ ವೇಳೆ ಡೊಮಿನಿಕ್ ಸಿಬ್ಲಿ ಚೆಂಡಿಗೆ ಎಂಜಲು ಸವರಿಸಿದ್ದರು. ಕೂಡಲೇ ತಮ್ಮ ತಪ್ಪನ್ನು ಅರಿತ ಸಿಬ್ಲೆ ಫೀಲ್ಡ್ ಅಂಪೈರ್ ಗೆ ಮಾಹಿತಿ ನೀಡಿದ್ದರು. ತಕ್ಷಣ ಅಂಪೈರ್ ಚೆಂಡನ್ನು ಸ್ಯಾನಿಟೈಸ್ ಮಾಡಿ ಪಂದ್ಯವನ್ನು ಪುನರ್ ಆರಂಭಿಸಿದ್ದರು.
Advertisement
How long should we bat for today?
Day 4 Highlights: https://t.co/C304GUuCaF#ENGvWI pic.twitter.com/IvWdsTlStx
— England Cricket (@englandcricket) July 20, 2020
Advertisement
ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಪಂದ್ಯಗಳ ಟೂರ್ನಿಯನ್ನು ಸಂಪೂರ್ಣವಾಗಿ ಬಯೋ ಸೆಕ್ಯೂರ್ ವಾತಾವರಣದಲ್ಲಿ ನಿರ್ವಹಿಸಲಾಗುತ್ತಿದೆ. ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತ ಇಂಗ್ಲೆಂಡ್ ಬ್ಯಾಟಿಂಗ್ ಆರಂಭ ಮಾಡುವ ಅವಕಾಶ ಪಡೆದು 9 ವಿಕೆಟ್ ಕಳೆದುಕೊಂಡು 469 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಮೊದಲ ಇನ್ನಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಭಾನುವಾರ 287 ರನ್‍ಗಳಿಗೆ ಆಲೌಟ್ ಆಗಿತ್ತು. 182 ರನ್ ಮುನ್ನಡೆ ಪಡೆದ ಇಂಗ್ಲೆಂಡ್ ಭಾನುವಾರ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ 219 ರನ್‍ಗಳಿಗೆ ಮುನ್ನಡೆಯನ್ನು ಹೆಚ್ಚಿಸಿದೆ. ಉಳಿದಂತೆ ಸೌತಾಪ್ಟಂನ್‍ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದ ವೆಸ್ಟ್ ಇಂಡೀಸ್ ತಂಡ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ.
#ENGvWI Test Match Drama!???? Catch up on the highs and lows of Day 4️⃣! #MenInMaroon #WIReady
Match Highlights + Report⬇️https://t.co/M7vMzsVgyk pic.twitter.com/Y2EqVSjmrS
— Windies Cricket (@windiescricket) July 19, 2020