Connect with us

Cinema

ಐಶ್ವರ್ಯಾ ರೈ ಫೋಟೋ ಹಂಚಿಕೊಂಡ WWE ಸೂಪರ್ ಸ್ಟಾರ್ ಜಾನ್ ಸಿನಾ

Published

on

ಮುಂಬೈ: ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸಿನಾ ಅವರು ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿರುವ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಅವರಿಗೆ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಐಶ್ವರ್ಯಾ ರೈ ಮತ್ತು ಮಗಳ ಆರಾಧ್ಯ ಬಚ್ಚನ್ ಅವರಿಗೆ ಕೊರೊನಾ ಕಾಣಿಸಿಕೊಂಡಿದ್ದು, ಕಳೆದ ಶುಕ್ರವಾರದವರೆಗೂ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು, ನಂತರ ಅವರನ್ನು ಕೂಡ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊರೊನಾ ಭೀತಿಯಿಂದ ಆಸ್ಪತ್ರೆ ಸೇರಿರುವ ಐಶ್ವರ್ಯಾ ರೈ ಅವರ ಫೋಟೋವನ್ನು ಜಾನ್ ಸಿನಾ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಯಾವುದೇ ಕ್ಯಾಪ್ಶನ್ ಬರೆದುಕೊಂಡಿಲ್ಲ. ಜುಲೈ 11ರಂದು ಅಮಿತಾಬ್ ಬಚ್ಚನ್ ಅವರಿಗೆ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಕುರಿತು ಅಂದು ಟ್ವೀಟ್ ಮಾಡಿದ್ದ ಬಿಗ್‍ಬಿ, ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದೇನೆ ಎಂದಿದ್ದರು. ಆಗ ಕೂಡ ಜಾನ್ ಸಿನಾ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದರು.

ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸಿನಾ ಅವರು ಕುಸ್ತಿಯ ಜೊತೆಗೆ ಸಿನಿಮಾದಲ್ಲಿ ನಟನೆಯನ್ನು ಮಾಡುತ್ತಾರೆ. ಅವರಿಗೆ ಇಡೀ ವಿಶ್ವದಲ್ಲೇ ಅಭಿಮಾನಿಗಳಿದ್ದು, ಭಾರತದಲ್ಲೂ ಅವರ ಅಭಿಮಾನಿಗಳು ಇದ್ದಾರೆ. ಬಾಲಿವುಡ್ ಜೊತೆ ನಿಕಟ ಸಂಬಂಧವೊಂದಿರುವ ಅವರು ಕಳೆದ ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಫೋಟೋವನ್ನು ಕೂಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

Click to comment

Leave a Reply

Your email address will not be published. Required fields are marked *