Connect with us

Bengaluru City

ಐರಾಗೆ 18 ತಿಂಗಳು- ಅಮ್ಮನ ಕಡೆಯಿಂದ ಸರ್ಪ್ರೈಸ್

Published

on

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದು, ಈ ಕುರಿತು ತಮ್ಮ ಅಭಿಮಾನಿಗಳಿಗೂ ಅಪ್‍ಡೇಟ್ ನೀಡುತ್ತಿದ್ದಾರೆ. ಇದೀಗ ಐರಾಗೆ 18 ತಿಂಗಳು ತುಂಬಿದ ಹಿನ್ನೆಲೆ  ಸರ್ಪ್ರೈಸ್ ನೀಡಿರುವ ಕುರಿತು ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುವ ರಾಧಿಕಾ ಪಂಡಿತ್, ಆಗಾಗ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ಹಿಂದೆ ಐರಾ ತನ್ನ ತಮ್ಮನನ್ನು ತೊಡೆ ಮೇಲೆ ಮಲಗಿಸಿಕೊಂಡು ಲಾಲಿ ಹಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಅಭಿಮಾನಿಗಳು ಇದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Advertisement
Continue Reading Below

ಇದೀಗ ಐರಾ 18 ತಿಂಗಳು ತುಂಬಿದ ಹಿನ್ನೆಲೆ ಕೇಕ್ ತಯಾರಿಸಿ ಸಂಭ್ರಮಿಸಿದ್ದಾರೆ. ಅದೂ ಸಹ ತಾವೇ ಮನೆಯಲ್ಲಿ ಮಾಡಿದ್ದು, ಮಾವಿನ ಹಣ್ಣಿನಿಂದ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಐರಾಗೆ 18 ತಿಂಗಳು ತುಂಬಿದ ಹಿನ್ನೆಲೆ ಮ್ಯಾಂಗೋ ಚೀಸ್ ಕೇಕ್ ಮಾಡಿದೆ. ನಿಜವಾಗಿಯೂ ಬಹಳ ಸಮಯದ ನಂತರ ಬೇಕ್ ಮಾಡಿದೆ, ಚೆನ್ನಾಗಿದೆ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

Made this Mango Cheesecake when Ayra turned 18 months! Baked something after really long!! It felt good ???? #nimmaRP #radhikapandit

A post shared by Radhika Pandit (@iamradhikapandit) on

ಲಾಕ್‍ಡೌನ್ ಹಿನ್ನೆಲೆ ರಾಕಿಂಗ್ ಸ್ಟಾರ್ ಸಹ ಮನೆಯಲ್ಲೇ ಇದ್ದು, ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಮಗನೊಂದಿಗೆ ಯಶ್ ಬರಿ ಮೈಯ್ಯಲ್ಲಿ ಇರುವ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡು ನನ್ನ ಫೇವರಿಟ್ ಹುಡುಗರು ಎಂದು ಬರೆದುಕೊಂಡಿದ್ದರು. ಫೋಟೋದಲ್ಲಿ ಯಶ್ ತಮ್ಮ ಮುದ್ದು ಮಗನನ್ನು ಎತ್ತಿಕೊಂಡಿದ್ದು, ಅವನ ಮುಖವನ್ನೇ ನೋಡುತ್ತಾ ಸಂತಸಪಟ್ಟಿದ್ದಾರೆ. ಇನ್ನೂ ಜೂನಿಯರ್ ಯಶ್ ಕೂಡ ನಗುತ್ತಾ ಕ್ಯೂಟಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾನೆ.

 

View this post on Instagram

 

My Favourite Boys ❤ #nimmaRP #radhikapandit

A post shared by Radhika Pandit (@iamradhikapandit) on

ರಾಕಿ ಭಾಯ್ ಸಹ ಐರಾಗೆ ಊಟ ಮಾಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದರು. ಹೀಗೆ ಯಶ್ ದಂಪತಿ ಮಕ್ಕಳ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಪರಿಚಯಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *