– ಆಸ್ಟ್ರೇಲಿಯಾ ಟೂರ್ನಿಗೂ ಡೌಟ್
ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ 19ನೇ ಓವರಿನಲ್ಲಿ ಕೇವಲ 1 ಎಸೆತ ಮಾತ್ರ ಬೌಲ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಸ್ನಾಯು ಸೆಳೆತದ ಗಾಯದಿಂದ ಭುವನೇಶ್ವರ್ ಕುಮಾರ್ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಅವರಿಗೆ ಗ್ರೇಡ್ 2 ಅಥವಾ ಗ್ರೇಡ್ 3 ಪ್ರಮಾಣದ ಗಾಯವಾಗಿರುವ ಸಾಧ್ಯತೆ ಇದೆ. ಪರಿಣಾಮ ಅವರು ಕನಿಷ್ಠ 6 ರಿಂದ 8 ವಾರಗಳ ಕಾಲ ಮೈದಾನದಿಂದ ದೂರ ಉಳಿಯಬೇಕಿದೆ. ಇದು ಅವರನ್ನು ಭಾರತ ಮತ್ತು ಆಸ್ಟ್ರೇಲಿಯಾ ಪ್ರವಾಸದಿಂದಲೂ ದೂರ ಮಾಡಬಹುದು ಎಂದು ಬಿಸಿಸಿಐ ವಕ್ತಾರರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Advertisement
Advertisement
2016, 2017ರ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದಿದ್ದ ಭುವನೇಶ್ವರ್ ಗಾಯದ ಸಮಸ್ಯೆಯಿಂದ ಆವೃತ್ತಿಯಿಂದಲೇ ಹೊರ ನಡೆದಿರುವುದರಿಂದ ಡೇವಿಡ್ ವಾರ್ನರ್ ನಾಯಕತ್ವದ ಹೈದರಾಬಾದ್ ತಂಡಕ್ಕೆ ಭಾರೀ ಹಿನ್ನೆಡೆಯಾಗಲಿದೆ. ಕಳೆದ ಪಂದ್ಯದಲ್ಲಿ ಭುವಿ ಸ್ಥಾನದಲ್ಲಿ ತಂಡವನ್ನು ಕೂಡಿಕೊಂಡಿದ್ದ ಸಿದ್ದಾರ್ಥ್ ಕೌಲ್ ಮುಂಬೈ ವಿರುದ್ಧ 4 ಓವರ್ ಗಳಲ್ಲಿ 64 ರನ್ ನೀಡಿ ದುಬಾರಿಯಾಗಿದ್ದರು.
Advertisement
Bhuvneshwar Kumar ruled out of IPL with hip injury
Read @ANI Story | https://t.co/V8Ypl1tfEf pic.twitter.com/vFkrnCMtKD
— ANI Digital (@ani_digital) October 5, 2020
Advertisement
ಭುಮಿ ಗಾಯದ ಸಮಸ್ಯೆ ತೀವ್ರವಾಗಿರುವ ಕಾರಣ ಅವರಿಗೆ ಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತ ಗಾಯದ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ನವೆಂಬರ್ ನಲ್ಲಿ ಐಪಿಎಲ್ ಟೂರ್ನಿ ಬಳಿಕ ಟೀಂ ಇಂಡಿಯಾ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಟೂರ್ನಿಗೂ ಭುವಿ ದೂರವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಆಡಿದ್ದು 4 ಎಸೆತವಾದ್ರೂ, ಐಪಿಎಲ್ನಲ್ಲಿ ಕೃನಾಲ್ ಪಾಂಡ್ಯ ಆಲ್ಟೈಮ್ ರೆಕಾರ್ಡ್
ಗಾಯದ ಸಮಸ್ಯೆಯಿಂದ ಬಹು ಕಳೆದ ವರ್ಷ ಟೀಂ ಇಂಡಿಯಾದಿಂದ ದೂರವೇ ಉಳಿದಿದ್ದ ಭುವನೇಶ್ವರ್ ಐಪಿಎಲ್ ಟೂರ್ನಿಯ ಮೂಲಕ ಕಮ್ಬ್ಯಾಕ್ ಮಾಡಿದ್ದರು. ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೂರ್ನಿಯಿಂದಲೂ ಭುವಿ ಹೊರಗುಳಿದಿದ್ದರು. ಸದ್ಯ ಅವರು ಮತ್ತೊಮ್ಮೆ ಗಾಯದ ಸಮಸ್ಯೆಗೆ ಒಳಗಾಗಿರುವುದು ಅಭಿಮಾನಿಗಳಲ್ಲಿ ನಿರಾಸೆ ತಂದಿದೆ. ಇತ್ತ ವರ್ಷದ ಅಂತ್ಯದಲ್ಲಿ ಟೀಂ ಇಂಡಿಯಾ ಆಸೀಸ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಬೇಕಿದೆ.