ಅಬುಧಾಬಿ: ಸಾಮಾನ್ಯವಾಗಿ ಕ್ರೆಕೆಟ್ ನಡೆಯುತ್ತಿರುವ ವೇಳೆ ಎಲ್ಲ ಆಟಗಾರರು ಒಂದೊಂದು ಟೋಪಿ ಧರಿಸಿರುತ್ತಾರೆ. ಆದರೆ ಈ ಬಾರಿ ಐಪಿಎಲ್ನಲ್ಲಿ ನಾಯಕರು ಎರಡು ಟೋಪಿಗಳನ್ನು ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಕೊರೊನಾ ಕಾರಣದಿಂದ ಐಪಿಎಲ್-2020 ಆರು ತಿಂಗಳು ತಡವಾಗಿ ಯುಎಇಯಲ್ಲಿ ಆರಂಭವಾಗಿ ಅರ್ಧಕ್ಕಿಂತ ಹೆಚ್ಚಿನ ಪಯಾಣವನ್ನು ಯಶಸ್ವಿಯಾಗಿ ಮುಗಿಸಿದೆ. ಈಗಾಗಲೇ 43 ಪಂದ್ಯಗಳು ಐಪಿಎಲ್ನಲ್ಲಿ ಮುಗಿದಿವೆ. ಈ ನಡುವೆ ಪಂದ್ಯದ ವೇಳೆ ನಾಯಕರ ಎರಡು ಟೋಪಿ ಧರಿಸಲು ಕಾರಣವೇನು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದರು.
Advertisement
Advertisement
ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಕೊರೊನಾ ನಡುವೆಯೂ ಬಿಸಿಸಿಐ ಹಲವಾರು ನಿಯಮಗಳನ್ನು ಮಾಡಿಕೊಂಡು ಐಪಿಎಲ್ ಅನ್ನು ಆರಂಭ ಮಾಡಿದೆ. ಅಂತೆಯೇ ಕೊರೊನಾ ನಡುವೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜನೆ ಮಾಡಿದ್ದ ಐಸಿಸಿ ಕೂಡ ಕೆಲ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.ಕೊರೊನಾ ಕಾರಣದಿಂದ ಬಾಲಿಗೆ ಎಂಜಲನ್ನು ಹಚ್ಚಬಾರದು ಎಂಬ ನಿಯಮವನ್ನು ಐಸಿಸಿ ಜಾರಿಗೆ ಮಾಡಿತ್ತು.
Advertisement
Advertisement
ಈ ಮೊದಲು ಪಂದ್ಯದಲ್ಲಿ ಬೌಲರ್ ಬೌಲ್ ಮಾಡುವ ಮೊದಲು ಆತನ ಟೋಪಿ, ಗ್ಲಾಸ್ ಮತ್ತು ಸ್ವೆಟ್ಟರ್ ಇನ್ನಿತರ ವಸ್ತುಗಳನ್ನು ಅಂಪೈರ್ ಕೈಗೆ ಕೊಡುತ್ತಿದ್ದರು. ಈಗ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಐಸಿಸಿ ಹೊಸ ನಿಯಮ ಮಾಡಿದ್ದು, ಈ ನಿಯಮದಂತೆ ಯಾವ ಆಟಗಾರನೂ ಕೂಡ ಪಂದ್ಯದ ವೇಳೆ ತನ್ನ ಯಾವುದೇ ವಸ್ತುಗಳನ್ನು ಅಂಪೈರ್ ಗೆ ನೀಡುವಂತಿಲ್ಲ. ಜೊತೆಗೆ ವಸ್ತುಗಳ ಮೂಲಕ ಯಾವುದೇ ಅಂಪೈರ್ ಅನ್ನು ಸಂಪರ್ಕ ಮಾಡುವಂತಿಲ್ಲ.
ಐಸಿಸಿ ಈ ನಿಯಮವನ್ನು ಬಿಸಿಸಿಐ ಐಪಿಎಲ್ನಲ್ಲೂ ಕೂಡ ಅವಳವಡಿಸಿದ್ದು, ಯಾವುದೇ ಬೌಲರ್ ಬೌಲ್ ಮಾಡುವಾಗ ತನ್ನ ವಸ್ತುಗಳನ್ನು ಅಂಪೈರ್ ಗೆ ನೀಡುವಂತಿಲ್ಲ. ಜೊತೆಗೆ ಅವರನ್ನು ಸಂಪರ್ಕ ಮಾಡುವಂತಿಲ್ಲ. ಹೀಗಾಗಿ ಯಾವುದೇ ತಂಡದ ಬೌಲರ್ ಬೌಲ್ ಮಾಡುವಾಗ ತನ್ನ ಯಾವುದೇ ವಸ್ತುಗಳನ್ನು ಅಂಪೈರಿಗೆ ನೀಡುವುದಿಲ್ಲ. ಆದ್ದರಿಂದ ಬೌಲರ್ ಬೌಲ್ ಮಾಡುವಾಗ ಆತನ ಟೋಪಿಯನ್ನು ನಾಯಕ ಧರಿಸುವ ಕಾರಣ ಕ್ಯಾಪ್ಟನ್ಗಳು ಎರಡು ಟೋಪಿ ತೊಟ್ಟು ಕಾಣಿಸಿಕೊಳ್ಳುತ್ತಿದ್ದಾರೆ.
ಕೊರೊನಾ ಕಾರಣದಿಂದ ಬಹಳ ಮುಂಜಾಗ್ರತೆವಹಿಸಿ ಐಪಿಎಲ್ ಅನ್ನು ನಡೆಸಲಾಗುತ್ತಿದೆ. ಆದರೂ ಐಪಿಎಲ್ ಆರಂಭಕ್ಕೂ ಮುನ್ನವೇ ಕೊರೊನಾ ಕರಿನೆರಳು ಟೂರ್ನಿಯ ಮೇಲೆ ಬಿದ್ದಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ನಂತರ ಅವರು ಸೋಂಕಿನಿಂದ ಗುಣಮುಖರಾಗಿದ್ದು, ಐಪಿಎಲ್ ಆರಂಭವಾಗಿ ತನ್ನ ಅರ್ಧ ಜರ್ನಿಯನ್ನು ಯಾವುದೇ ತೊಂದರೆಯಿಲ್ಲದೆ ಮುಗಿಸಿದೆ.