ಮುಂಬೈ: ಐಪಿಎಲ್ ಎಂದರೆ ಅದು ಬ್ಯಾಟ್ಸ್ ಮ್ಯಾನ್ಗಳ ಸ್ವರ್ಗ ಅಂತಾನೇ ಫೇಮಸ್. ಈ ಕ್ರಿಕೆಟ್ ಟೂರ್ನಿಯಲ್ಲಿ ಬೌಲರ್ ಗಳಿಗಿಂತ ಬ್ಯಾಟ್ಸ್ ಮ್ಯಾನ್ಗಳು ಹೆಚ್ಚು ಮಿಂಚು ಹರಿಸುತ್ತಾರೆ. ಈವರೆಗಿನ 13 ಆವೃತ್ತಿಗಳಲ್ಲಿ ಭಾರತೀಯ ಬ್ಯಾಟ್ಸ್ ಮ್ಯಾನ್ಗಳು ಸಹಿತ ವಿದೇಶಿ ಬ್ಯಾಟ್ಮ್ಯಾನ್ಗಳು ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಸಿಡಿಸಿ ಆರೆಂಜ್ ಕ್ಯಾಪ್ನ ಒಡೆಯರಾಗಿದ್ದಾರೆ. ಅದೇ ರೀತಿ ಈ ಬಾರಿಯು ಆರೆಂಜ್ ಕ್ಯಾಪ್ ಯಾರ ಪಾಲಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಬರತೊಡಗಿದೆ.
Advertisement
2008ರಲ್ಲಿ ಪ್ರಾರಂಭಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಮೊದಲ ಆವೃತ್ತಿಯಲ್ಲಿ ಪಂಜಾಬ್ ತಂಡದ ಬ್ಯಾಟ್ಸ್ ಮ್ಯಾನ್ ಶಾನ್ ಮಾರ್ಷ್ 11 ಪಂದ್ಯಗಳನ್ನು ಆಡಿ, 5 ಅರ್ಧಶತಕ ಮತ್ತು 1 ಶತಕ ಸಹಿತ 616 ರನ್ ಬಾರಿಸುವ ಮೂಲಕ ಅತೀ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದುಕೊಂಡರು.
Advertisement
Advertisement
2009 ರಲ್ಲಿ ಚೆನ್ನೈ ತಂಡದ ಪರ ಮ್ಯಾಥ್ಯೂ ಹೇಡನ್ 12 ಪಂದ್ಯಗಳನ್ನು ಆಡಿ 5 ಅರ್ಧಶತಕ ಸಹಿತ 572 ರನ್ ಸಿಡಿಸಿ ಆ ಆವೃತ್ತಿಯ ಆರೆಂಜ್ ಕ್ಯಾಪ್ ಒಡೆಯನಾಗಿದ್ದರು. ನಂತರ 2010 ರಲ್ಲಿ ಮುಂಬೈ ತಂಡದ ಸಚಿನ್ ತೆಂಡೂಲ್ಕರ್ 15 ಪಂದ್ಯಗಳಿಂದ 5 ಅರ್ಧಶತಕ ಸಹಿತ 618 ರನ್ ಬಾರಿಸಿ ಮಿಂಚಿದ್ದರು. 2011 ರಲ್ಲಿ 2012 ರಲ್ಲಿ ಬೆಂಗಳೂರು ಪರ ಬ್ಯಾಟ್ಬೀಸಿದ ಕ್ರಿಸ್ ಗೇಲ್ ಕ್ರಮವಾಗಿ 608 ಮತ್ತು 618 ರನ್ ಸಿಡಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು.
Advertisement
2013 ರಲ್ಲಿ ಚೆನ್ನೈ ತಂಡದಲ್ಲಿದ್ದ ಮೈಕ್ ಹಸ್ಸಿ 17 ಪಂದ್ಯಗಳಿಂದ 733 ರನ್ ಸಿಡಿಸಿ ತನ್ನ ಬ್ಯಾಟಿಂಗ್ ಪರಾಕ್ರಮವನ್ನು ತೋರಿಸಿದ್ದರು. 2014 ಕೋಲ್ಲತ್ತಾ ಪರ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ 16 ಪಂದ್ಯಗಳಿಂದ 660 ರನ್ ಸಿಡಿಸಿ ಆರೆಂಜ್ ಕ್ಯಾಪ್ ತೊಟ್ಟುಕೊಂಡಿದ್ದರು. ನಂತರದ 2015 ನೇ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದ ಡೇವಿಡ್ ವಾರ್ನರ್ ಆ ವರ್ಷ 14 ಪಂದ್ಯಗಳಿಂದ 562 ರನ್ ಗಳಿಸುವ ಮೂಲಕ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದರು.
2016ರಲ್ಲಿ ಆರೆಂಜ್ ಕ್ಯಾಪ್ ಬಿರುದು ಆರ್ಸಿಬಿ ತಂಡದ ವಿರಾಟ್ ಕೈ ಸೇರಿತ್ತು ವಿರಾಟ್ 16 ಪಂದ್ಯಗಳನ್ನು ಆಡಿ 7 ಅರ್ಧಶತಕ, 4 ಶತಕ ಸಹಿತ 973 ರನ್ ಚಚ್ಚಿದ್ದರು. 2017 ರಲ್ಲಿ ಮತ್ತೆ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ 14 ಪಂದ್ಯಗಳಿಂದ 641 ರನ್ ಸಿಡಿಸುವ ಮೂಲಕ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದರು. 2018 ರಲ್ಲಿ ಹೈದರಾಬಾದ್ ತಂಡದ ಕೇನ್ ವಿಲಿಯಮ್ಸ್ ನ್ 17 ಪಂದ್ಯಗಳಿಂದ 735 ರನ್ ಸಿಡಿಸಿ ಆರೆಂಜ್ ಟೋಪಿ ಪಡೆದುಕೊಂಡಿದ್ದರು. ಬಳಿಕ 2019 ರಲ್ಲಿ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ 12 ಪಂದ್ಯಗಳಿಂದ 8 ಅರ್ಧಶತಕ ಮತ್ತು 1 ಶತಕ ಸಹಿತ 692 ರನ್ ಬಾರಿಸಿ ಗಮನಸೆಳೆದಿದ್ದರು. ಕಳೆದ 2020 ಸಾಲಿನ 13ನೇ ಆವೃತ್ತಿಯಲ್ಲಿ ಪಂಜಾಬ್ ಪರ ಮಿಂಚಿದ ಕನ್ನಡಿಗ ಕೆ.ಎಲ್ ರಾಹುಲ್ 14 ಪಂದ್ಯಗಳನ್ನು ಆಡಿ 5 ಅರ್ಧಶತಕ ಮತ್ತು 1 ಶತಕ ಸಿಡಿಸುವ ಮೂಲಕ 670 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದರು.
ಐಪಿಎಲ್ನ 13 ಆವೃತ್ತಿಗಳಲ್ಲಿ ಅತೀ ಹೆಚ್ಚು ರನ್ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿರುವ ಕೆಲ ಆಟಗಾರರು 14ನೇ ಆವೃತ್ತಿಯ ಐಪಿಎಲ್ನಲ್ಲಿ ಅಡುತ್ತಿದ್ದು ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಬಾರಿ ಅಭಿಮಾನಿಗಳ ಲೆಕ್ಕಾಚಾರದ ಪ್ರಕಾರ ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಮಧ್ಯೆ ಆರೆಂಜ್ ಕ್ಯಾಪ್ಗೆ ಹೆಚ್ಚು ಪೈಪೊಟಿ ಕಂಡುಬರಲಿದೆ ಎಂದು ಚರ್ಚೆಗಳು ನಡೆಯುತ್ತಿವೆ ಇವರಿಬ್ಬರೊಂದಿಗೆ ಸ್ಪರ್ಧೆ ಇರಲಿದ್ಯಾ ಅಥವಾ ಬೇರೆ ಆಟಗಾರರು ಇವರೊಂದಿಗೆ ಕೂಡಿಕೊಳ್ಳಲಿದ್ದಾರ ಎಂದು ಮುಂದೆ ಕಾದು ನೋಡಬೇಕಾಗಿದೆ.