ಮುಂಬೈ: ಪಂಜಾಬ್ ಕಿಂಗ್ಸ್ ಪರ ಬ್ಯಾಟ್ ಬೀಸುವ ಯುನಿವರ್ಸಲ್ ಬಾಸ್ ಖ್ಯಾತಿಯ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಕ್ರಿಸ್ ಗೇಲ್ ಐಪಿಎಲ್ನಲ್ಲಿ 350 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
Advertisement
ಮುಂಬೈನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ತಂಡದ ಬೌಲರ್ ಬೇನ್ ಸ್ಟೋಕ್ಸ್ ಎಸೆದ 7ನೇ ಓವರ್ನ 3 ನೇ ಬಾಲ್ನ್ನು ಮಿಡ್ವಿಕೆಟ್ ನತ್ತ ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್ನಲ್ಲಿ 350 ನೇ ಸಿಕ್ಸರ್ ಸಿಡಿಸಿದ ಅಪರೂಪದ ದಾಖಲೆ ಬರೆದರು.
Advertisement
Milestone ???? – 3⃣5⃣0⃣ Maximums in the IPL for the Universe Boss ????????#VIVOIPL | #RRvPBKS | @henrygayle pic.twitter.com/bhIxAAmq2J
— IndianPremierLeague (@IPL) April 12, 2021
Advertisement
2008ನೇ ಆವೃತ್ತಿ ಐಪಿಎಲ್ನಿಂದ ಇದುವರೆಗೆ ಒಟ್ಟು 133 ಪಂದ್ಯಗಳಿಂದ 388 ಬೌಂಡರಿ ಮತ್ತು 351 ಸಿಕ್ಸ್ ಸಿಡಿಸಿದ್ದಾರೆ. ಗೇಲ್ ನಂತರದ ಸ್ಥಾನದಲ್ಲಿ ಆರ್ಸಿಬಿ ತಂಡದ ಎಬಿಡಿ ವಿಲಿಯರ್ಸ್ ಇದ್ದಾರೆ. ಎಬಿಡಿ 170 ಪಂದ್ಯಗಳಿಂದ 237 ಸಿಕ್ಸ್ ಬಾರಿಸಿದ್ದಾರೆ.
Advertisement
205 ಪಂದ್ಯಗಳಿಂದ 216 ಸಿಕ್ಸರ್ ಸಿಡಿಸಿರುವ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನ 214 ಸಿಕ್ಸರ್ ಗಳೊಂದಿಗೆ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಪಾಲಾದರೆ, 201 ಸಿಕ್ಸರ್ನೊಂದಿಗೆ ಐದನೇ ಸ್ಥಾನದಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ.
ಕ್ರಿಸ್ ಗೇಲ್ 14ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ತಮ್ಮ ಬ್ಯಾಟ್ ಬೀಸಲು ಪ್ರಾರಂಭಿಸಿದ್ದು, ಮುಂದಿನ ಪಂದ್ಯಗಳಲ್ಲಿ ಗೇಲ್ ಸ್ಪೋಟಗೊಂಡರೆ ಎದುರಾಳಿ ತಂಡಗಳಿಗೆ ನಡುಕ ಹುಟ್ಟುವುದಂತು ಗ್ಯಾರಂಟಿ.