ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ಪಕ್ಷಪಾತದಿಂದ ಆಡುತ್ತಿದ್ದಾರೆ ಎಂಬ ಅನುಮಾನ ರಾಜಸ್ಥಾನ ಮತ್ತು ಕೋಲ್ಕತ್ತಾ ವಿರುದ್ಧದ ಪಂದ್ಯದ ಬಳಿಕ ಮೂಡಿದೆ.
ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಐಯಾನ್ ಮಾರ್ಗನ್ ಎದುರು ವೇಗದ ಬೌಲರ್ ಜೋಫ್ರಾ ಆರ್ಚರ್, ಟಾಮ್ ಕರ್ರನ್ ಕನಿಷ್ಠ ಒಂದು ಬೌನ್ಸರ್ ಕೂಡ ಎಸೆಯದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಇದೇ ವಿಚಾರದ ಕುರಿತು ಕ್ರಿಕೆಟ್ ವಿಶ್ಲೇಷಕ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ.
Advertisement
Advertisement
ಕೋಲ್ಕತ್ತಾ ತಂಡ 13.1 ಓವರ್ ಗಳಲ್ಲಿ 106 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಐಯಾನ್ ಮಾರ್ಗನ್ ಬ್ಯಾಟಿಂಗ್ಗೆ ಇಳಿದಿದ್ದರು. ಪಂದ್ಯದಲ್ಲಿ 23 ಎಸೆತಗಳಲ್ಲಿ 34 ರನ್ ಗಳಿಸಿದ ಮಾರ್ಗನ್ ಚೆಂಡನ್ನು ಮಿಡಲ್ ಮಾಡಲು ವಿಫಲರಾಗುತ್ತಿದ್ದರು. ಆದರೂ ಆರ್ಚರ್ ಮತ್ತು ಕರ್ರನ್ ಆತನ ವಿರುದ್ಧ ಕನಿಷ್ಠ ಒಂದು ಬೌನ್ಸರ್ ಕೂಡ ಎಸೆಯಲಿಲ್ಲ. ಸ್ಲಾಗ್ ಓವರ್ ಗಳಲ್ಲಿ 2 ಸಿಕ್ಸರ್ ಸಿಡಿಸಿದ ಮಾರ್ಗನ್ ತಂಡಕ್ಕೆ ಉಪಯುಕ್ತವಾದರು. ಇದನ್ನೂ ಓದಿ: ಗುರು ದ್ರಾವಿಡ್ ಪರಿಶ್ರಮ – ಐಪಿಎಲ್ ಅಲ್ಲ ಇದು ಇಂಡಿಯನ್ ಪ್ಲೇಯರ್ಸ್ ಲೀಗ್
Advertisement
Advertisement
ಐಪಿಎಲ್ನಲ್ಲಿ ಫಾಸ್ಟೆಸ್ಟ್ ಬೌಲರ್ ಎಂದು ಗುರುತಿಸಿಕೊಂಡಿರುವ ಆರ್ಚರ್ ಪಂದ್ಯದಲ್ಲಿ ಇಯಾನ್ ಮಾರ್ಗನ್ಗೆ ಒಂದು ಬೌನ್ಸರ್ ಕೂಡ ಹಾಕಿಲಿಲ್ಲ. ಆರ್ಚರ್ ರಂತಹ ಆಟಗಾರನಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇನ್ನು ಕರ್ರನ್ ಆದ್ರೆ ಏಕಾಏಕಿ ಫುಲ್ಟಾಸ್ ಎಸೆದು ತನ್ನ ಕ್ಯಾಪ್ಟನ್ ಸಿಕ್ಸರ್ ಸಿಡಿಸುವಂತೆ ಮಾಡಿದ್ದರು ಎಂದು ಸುನಿಲ್ ಗವಾಸ್ಕರ್ ಆರೋಪಿಸಿದ್ದಾರೆ. ಪಂದ್ಯದಲ್ಲಿ ಕೋಲ್ಕತ್ತಾ ತಂಡ 6 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿದ್ರೆ, ರಾಜಸ್ಥಾನ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯ್ತು.