ಮುಂಬೈ: ಯುಎಇಯಲ್ಲಿ ನಡೆಯಲಿರುವ ಐಪಿಎಲ್ನಲ್ಲಿ ಆಟಗಾರರ ಸುರಕ್ಷತೆಯ ಸಲುವಾಗಿ ಹೊಸ ನಿಯಮಗಳನ್ನು ಬಿಸಿಸಿಐ ಜಾರಿ ಮಾಡಿದೆ.
ಚೆಂಡು ಸ್ಟ್ಯಾಂಡ್ ಅಥವಾ ಕ್ರೀಡಾಂಗಣದಿಂದ ಹೊರಗೆ ಹೋದರೆ ನಾಲ್ಕನೇ ಅಂಪೈರ್ ಅವರು ಲೈಬ್ರೆರಿಯಿಂದ ಬದಲಿ ಚೆಂಡು ನೀಡುತ್ತಾರೆ. ಆ ಚೆಂಡು ಮರಳಿದಾಗ ಆಲ್ಕೋಹಾಲ್ ಆಧಾರಿತ ಒರೆಸುವ ಬಟ್ಟೆ ಅಥವಾ ಅಥವಾ ಯುವಿ-ಸಿ(Ultraviolet germicidal irradiation -UVGI) ಮೂಲಕ ನಾಲ್ಕನೇ ಅಂಪೈರ್ ಬಾಲನ್ನು ಸ್ವಚ್ಛಗೊಳಿಸಿ ಮತ್ತೆ ಲೈಬ್ರರಿಯಲ್ಲಿ ಇಡುತ್ತಾರೆ ಎಂದು ತನ್ನ ಸುತ್ತೋಲೆಯಲ್ಲಿ ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ : ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ
Advertisement
Advertisement
ಕ್ರಿಕೆಟ್ ಚೆಂಡುಗಳ ಮೂಲಕ ಕೊರೊನಾ ಹರಡುವ ಅಪಾಯವು ತುಂಬಾ ಕಡಿಮೆ ಇದೆ. ಆದರೂ ಆಟಗಾರರ ಆರೋಗ್ಯದ ದೃಷ್ಟಿಯಿಂದ ಮೇ ತಿಂಗಳಿನಲ್ಲಿ ಸ್ಥಗಿತಗೊಂಡ ಟೂರ್ನಿಯನ್ನು ಪೂರ್ಣಗೊಳಿಸಲು ಈ ನಿಯಮವನ್ನು ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.
Advertisement
ಈ ವೇಳೆ ಪ್ರೇಕ್ಷಕರಿಗೆ ಪಂದ್ಯ ನೋಡಲು ಅವಕಾಶ ನೀಡಲಾಗಿದ್ದರೂ ಕ್ರೀಡಾಂಗಣದ ಮೇಲಿನ ಭಾಗದಲ್ಲಿ ಮಾತ್ರ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ.
Advertisement
ವಾಶ್ರೂಂ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಆಟಗಾರರು ಉಗುಳುವುದುನ್ನು ನಿಷೇಧಿಸಲಾಗಿದೆ. ಆಟಗಾರರು ನಿಗದಿ ಪಡಿಸಿದ ಬಯೋ ಬಬಲ್ ಬಿಟ್ಟು ಬೇರೆ ಪ್ರದೇಶಗಳಾದ ರೆಸ್ಟೋರೆಂಟ್, ಕೆಫೆ, ಜಿಮ್ಗೆ ಹೋಗುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಎಲ್ಲ ಆಟಗಾರರು ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಬೇಕು ಮತ್ತು ಅವರಿಗೆ ನೀಡಲಾದ ಬಾಟಲಿ ಹೊರತು ಪಡಿಸಿ ಬೇರೆಯವರು ಬಳಕೆ ಮಾಡುತ್ತಿರುವ ಬಾಟಲಿಯನ್ನು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ.