ಬೆಂಗಳೂರು: ಇಂದಿನಿಂದ ಮೂರು ದಿನ ಯಲಹಂಕದ ವಾಯುನೆಲೆಯಲ್ಲಿ ನಡೆಯುವ ಏರೋ ಇಂಡಿಯಾ ಶೋಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ರು. ಭಾರತೀಯ ವಾಯುಸೇನೆ ಹಾಗೂ ಏರೋ ಇಂಡಿಯಾ 2021 ಧ್ವಜಹೊತ್ತು ಎಲ್ಯುಎಚ್ (ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರ್) ಹೆಲಿಕ್ಯಾಪ್ಟರ್ ಗಳು ವೇದಿಕೆಯ ಎಡಭಾಗದಿಂದ ಬಲಭಾಗಕ್ಕೆ ಹಾರುವ ಮೂಲಕ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಲಾಯ್ತು.
Advertisement
ಏರೋ ಇಂಡಿಯಾ ಶೋಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ರಾಜನಾಥ ಸಿಂಗ್, ಕೊರೋನಾ ಕಷ್ಟದ ಸಮಯದಲ್ಲಿ ಏರೋ ಶೋ ಆರಂಭವಾಗಿದೆ. ಏಷ್ಯಾದಲ್ಲೇ ಅತ್ಯಂತ ಅತಿ ದೊಡ್ಡ ಏರೋ ಶೋ ಆಯೋಜನೆ ಮಾಡಿರುವ ಬೆಂಗಳೂರಿಗೆ ಅಭಿನಂದನೆ. ಬಸವಣ್ಣ, ವಿಶ್ವೇಶ್ವರಯ್ಯ ಹುಟ್ಟಿದ ನಾಡು ಕರುನಾಡು. ಏರೋ ಶೋ ಆಯೋಜನೆ ಮಾಡಲು ಸಹಕರಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಅಚವರಿಗೆ ಅಭಿನಂದನೆ ಸಲ್ಲಿಸಿದ್ರು.
Advertisement
Advertisement
ರಾಜ್ಯ ಸರ್ಕಾರ ಎಲ್ಲರ ಭದ್ರತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದು, 540 ಪ್ರದರ್ಶಕರು, 77 ವಿದೇಶಿ ಪ್ರದರ್ಶಕರು ಭಾಗಿಯಾಗಲಿದ್ದಾರೆ. ಬೆಂಗಳೂರು ವಿದ್ಯಾಭ್ಯಾಸ, ಸ್ಟಾರ್ಟ್ ಅಪ್, ವಹಿವಾಟಿಗೆ ಅತ್ಯುತ್ತಮ ಸ್ಥಳವಾಗಿದೆ. 1 ಸಾವಿರ ಎಕರೆ ವಿಸ್ತೀರ್ಣದ ಏರೋಸ್ಪೇಸ್ ಪಾರ್ಕ್ ದೇವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿದೆ. ಎರಡು ಅಂತರಾಷ್ಟ್ರೀಯ ಮತ್ತು ಐದು ಡೊಮೆಸ್ಟಿಕ್ ಏರ್ಪೋರ್ಟ್ ಕರ್ನಾಟಕದಲ್ಲಿದೆ. ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತದ ಕನಸು ಕಂಡಿದ್ದಾರೆ. ಅದಕ್ಕೆ ಪೂರಕವಾಗಿ ಕರ್ನಾಟಕವೂ ನಡೆದುಕೊಳ್ಳುತ್ತಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
Advertisement
ಇಂದಿನಿಂದ ಮೂರು ದಿನ ಏರೊ ಇಂಡಿಯಾ ಶೋ ನಡೆಯಲಿದ್ದು, ಪ್ರತಿದಿನ 2 ಬಾರಿ ಭಾರತ, ವಿದೇಶಗಳ ಒಟ್ಟು 63 ವಿಮಾನಗಳ ಪ್ರದರ್ಶನ ನಡೆಯಲಿವೆ. ಈ ಬಾರಿ ಹೆಚ್ಎಎಲ್ ವಿಮಾನಗಳಿಂದ ಆತ್ಮ ನಿರ್ಭರ ಫಾರ್ಮೆಷನ್ ಪ್ರಮುಖ ಆಕರ್ಷಣೆಯಾಗಿದೆ. ಇದೇ ಮೊದಲ ಬಾರಿಗೆ ವಿಶ್ವದ ಏಕೈಕ ಹೆಲಿಕಾಪ್ಟರ್ ಸ್ಟಂಟ್ ತಂಡ ಸಾರಂಗ್, ಸೂರ್ಯಕಿರಣ್ ತಂಡಗಳು ಏಕಾಕಾಲಕ್ಕೆ ಜಂಟಿಯಾಗಿ ಪ್ರದರ್ಶನಕ್ಕಿಳಿಯಲಿವೆ.
ಏರೋ ಇಂಡಿಯಾ-2021 ರಲ್ಲಿ ಭಾಗವಹಿಸಲು ಇಂದು ನಗರಕ್ಕೆ ಆಗಮಿಸಿದ ರಕ್ಷಣಾ ಸಚಿವ @rajnathsingh ರವರನ್ನು ಮುಖ್ಯಮಂತ್ರಿ @BSYBJP ರವರು ಸ್ವಾಗತಿಸಿದರು. ನಂತರ ಏರೋ ಇಂಡಿಯಾ ಪ್ರದರ್ಶನದ ಅನಾವರಣ ಕಾರ್ಯಕ್ರಮದಲ್ಲಿ ಉಭಯ ನಾಯಕರು ಪಾಲ್ಗೊಂಡರು.
ಉಪಮುಖ್ಯಮಂತ್ರಿ @drashwathcn, ಕೈಗಾರಿಕಾ ಸಚಿವ @JagadishShettar, ಗಣ್ಯರು ಉಪಸ್ಥಿತರಿದ್ದರು pic.twitter.com/3unGPYOENj
— CM of Karnataka (@CMofKarnataka) February 2, 2021