– ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಮತ್ತು ಮುಂಬೈ ಮಧ್ಯೆ ಸೆಣಸಾಟ
ಮುಂಬೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಗಳು ಏಪ್ರಿಲ್ 9 ರಿಂದ, ಮೇ 30ರ ವರೆಗೆ ಭಾರತದ 6 ನಗರಗಳಲ್ಲಿ ನಡೆಯಲಿದೆ ಎಂದು ಅಧಿಕೃತವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟ್ವಿಟ್ಟರ್ ಮೂಲಕ ಖಚಿತಪಡಿಸಿದೆ.
Advertisement
ಬಿಸಿಸಿಐ ತಿಳಿಸಿರುವ ಪ್ರಕಾರ, ಐಪಿಎಲ್ನ 14ನೇ ಆವೃತ್ತಿ ಪಂದ್ಯಗಳು ಭಾರತದಲ್ಲೇ ನಡೆಯಲಿದ್ದು, ಏಪ್ರಿಲ್ 9ರಿಂದ ಟೂರ್ನಿ ಆರಂಭವಾಗಿ ಮೇ 30ಕ್ಕೆ ಕೊನೆಗೊಳ್ಳಲಿದೆ. ಐಪಿಎಲ್ ಪಂದ್ಯಾಟಗಳಿಗಾಗಿ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್, ಕೋಲ್ಕತ್ತಾ ಹಾಗೂ ಮುಂಬೈ ನಗರಗಳನ್ನು ಆಯ್ಕೆ ಮಾಡಲಾಗಿದೆ. ಏಪ್ರಿಲ್ 9ರಿಂದ ಮೇ 30ರ ವರೆಗೆ 56 ಲೀಗ್ ಹಂತದ ಪಂದ್ಯಾಟಗಳು ನಡೆಯಲಿದೆ.
Advertisement
Advertisement
ಈ ಬಾರಿಯ ಐಪಿಎಲ್ ಪಂದ್ಯಗಳ ಪ್ರಮುಖ ಅಂಶವೆಂದರೆ ತಟಸ್ಥ ಸ್ಥಳಗಳಲ್ಲೇ ಹೆಚ್ಚಿನ ಪಂದ್ಯ ನಡೆಯಲಿದ್ದು, ಎಲ್ಲಾ ತಂಡಗಳು ಲೀಗ್ ಹಂತದ ಪಂದ್ಯಗಳನ್ನು ತವರಿನಂಗಳದಲ್ಲಿ ಆಡದೆ ಬೇರೆ ಬೇರೆ ಅಂಕಣಗಳಲ್ಲಿ ಎದುರು ಬದುರಾಗಲಿದೆ.
Advertisement
14ನೇ ಆವೃತ್ತಿಯ ಐಪಿಎಲ್ ನಲ್ಲಿ 11 ಡಬಲ್ ಹೆಡ್ಡರ್ ಪಂದ್ಯಾಟಗಳು ನಡೆಯಲಿದ್ದು 6 ತಂಡಗಳು 3 ಮದ್ಯಾಹ್ನದ ನಂತರದ ಪಂದ್ಯಾಟಗಳನ್ನು ಆಡಿದರೆ, 2 ತಂಡ, 2 ಮಧ್ಯಾಹ್ನದ ನಂತರದ ಪಂದ್ಯವನ್ನು ಆಡಳಿದೆ. ಮಧ್ಯಹ್ನದ ಪಂದ್ಯಾಟಗಳು ಭಾರತೀಯ ಕಾಲಮಾನ 3:30 ಗಂಟೆಗೆ ಪ್ರಾರಂಭವಾದರೆ, ರಾತ್ರಿಯ ಪಂದ್ಯಗಳು 7:30 ಗಂಟೆಗೆ ಪ್ರಾರಂಭವಾಗಲಿದೆ.
ಕಳೆದ ಬಾರಿ ಯುಎಇಯಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲಾಗಿತ್ತು. ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರೀಡಾಂಗಣಗಳಲ್ಲಿ ಐಪಿಎಲ್ ಪಂದ್ಯಗಳು ನಡೆದಿದ್ದವು. ಆದರೆ ಈ ಬಾರಿ ಭಾರತದ 6 ಸ್ಥಳಗಳಲ್ಲಿ ಪಂದ್ಯ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಅಲ್ಲದೆ ಒಟ್ಟು 8 ತಂಡಗಳ ಆಟಗಾರರನ್ನು ಬಯೋ ಬಬಲ್ನಲ್ಲಿ ಇರಲಿದ್ದಾರೆ. ಇದರೊಂದಿಗೆ ಎಲ್ಲಾ 6 ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಕ್ರೀಡಾಂಗಣಗಳು ರಂಗೇರಲಿದೆ.
ಕಳೆದ ಬಾರಿ ಯುಎಇಯಲ್ಲಿ ನಡೆದ ಐಪಿಎಲ್ ಪಂದ್ಯಗಳಿಗೆ ಅಭಿಮಾನಿಗಳಿಗೆ ಪ್ರವೇಶ ಕಲ್ಪಿಸಿರಲಿಲ್ಲ. ಐಪಿಎಲ್ 2021ರ ಆವೃತ್ತಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೇನು ಸಿದ್ಧತೆ ಮಾತ್ರ ಬಾಕಿ ಉಳಿದಿದೆ.