ನವದೆಹಲಿ: ಬಾಲಿವುಡ್ ಪ್ರತಿಭಾವಂತ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ವೀರೆಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಇಫ್ರಾನ್ ಪಠಾಣ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ವೀರೆಂದ್ರ ಸೆಹ್ವಾಗ್ ಟ್ವೀಟ್ ಮಾಡಿ, ಜೀವನ ತುಂಬಾ ಚಿಕ್ಕದಾಗುತ್ತಿದೆ. ಏನಾಗುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಒಬ್ಬರ ಹಿಂದೆ ಮತ್ತೊಬ್ಬರು ಸಾಗುತ್ತಲೇ ಇದ್ದಾರೆ. ಸುಶಾಂತ್ ಸಿಂಗ್ ಒಳ್ಳೆಯ ವ್ಯಕ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
Advertisement
Life is fragile and we don’t know what one is going through. Be kind. #SushantSinghRajput Om Shanti pic.twitter.com/zJZGV96mmb
— Virender Sehwag (@virendersehwag) June 14, 2020
Advertisement
ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಸಚಿನ್ ತೆಂಡೂಲ್ಕರ್, ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುದ್ದಿ ಕೇಳಿ ಆಘಾತ ಮತ್ತು ದುಃಖವಾಗಿದೆ. ಅವರು ಯುವ ಮತ್ತು ಪ್ರತಿಭಾವಂತ ನಟ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನೋವವನ್ನು ಭರಿಸುವ ಶಕ್ತಿ ಸಿಗಲಿ. ಸುಶಾಂತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.
Advertisement
Shocked and sad to hear about the loss of Sushant Singh Rajput.
Such a young and talented actor. My condolences to his family and friends. May his soul RIP. ???? pic.twitter.com/B5zzfE71u9
— Sachin Tendulkar (@sachin_rt) June 14, 2020
Advertisement
ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇಫ್ರಾನ್ ಪಠಾಣ್ ಟ್ವೀಟ್ ಮಾಡಿ, ಸುಶಾಂತ್ ಸಿಂಗ್ ರಾಜ್‍ಪುತ್ ಅವರ ಆತ್ಮಹತ್ಯೆಯ ಬಗ್ಗೆ ಕೇಳಿ ನನಗೆ ತುಂಬಾ ಆಘಾತವಾಗಿದೆ ಮತ್ತು ದುಃಖವಾಗಿದೆ. ಸುಶಾಂತ್ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
ಇತ್ತೀಚೆಗೆ ತಾಜ್ ಹೋಟೆಲ್ ಜಿಮ್‍ನಲ್ಲಿ ಕೊನೆಯದಾಗಿ ಸುಶಾಂತ್ ಜೊತೆಗೆ ಮಾತನಾಡಿದ್ದೆ. ಕೇದಾರನಾಥದಲ್ಲಿ ಅವರ ಕೆಲಸಕ್ಕಾಗಿ ನಾನು ಅವರನ್ನು ಹೊಗಳಿದ್ದೆ. ಆಗ ಅವರು ಪ್ರೀತಿಯ ಸಹೋದರ ‘ಚಿಚೋರ್’ ಸಿನಿಮಾವನ್ನು ನೋಡಿ (ಭಾಯ್ ಪ್ಲೀಸ್ ಡು ವಾಚ್ ಚಿಚೋರ್) ನೀವು ಅದನ್ನು ಇಷ್ಟಪಡುತ್ತೀರಿ ಎಂದಿದ್ದರು ಎಂದು ಇಫ್ರಾನ್ ಪಠಾಣ್ ನೆನಿದ್ದಾರೆ.
I chatted with him last at the Taj Hotel Gym, I praised him for his work in Kedarnath & his reply was ‘Bhai please do watch chhichhore’ you will love it!
— Irfan Pathan (@IrfanPathan) June 14, 2020
ಇದೇ ವರ್ಷ ಮಾರ್ಚ್ ನಲ್ಲಿ ಖ್ಯಾತ ಹಾಸ್ಯ ನಟ ಸಂತಾನಂ ಸ್ನೇಹಿತ ನಟ, ವೈದ್ಯ ಸೇತುರಾಮನ್ (36) ಹೃದಯಾಘಾತದಿಂದ ಮೃತಪಟ್ಟಿದ್ದರು. ಬಾಲಿವುಡ್‍ನ ಹೆಮ್ಮೆಯ ನಟ ಇರ್ಫಾನ್ ಖಾನ್ (53) ಬೆನ್ನಲ್ಲೇ ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ (36) ಸಾವನ್ನಪ್ಪಿದ್ದರು. ಈಗ ಸುಶಾಂತ್ ಸಿಂಗ್ ಕೇವಲ 34 ವರ್ಷ ಮೃತಪಟ್ಟಿರುವುದು ಸಿನಿಮಾ ರಂಗಕ್ಕೆ ಆಘಾತವನ್ನುಂಟು ಮಾಡಿದೆ.
I am shocked and speechless. Such a young and talented actor gone too soon. RIP #SushantSinghRajput. pic.twitter.com/RieEU4r5E4
— Amit Mishra (@MishiAmit) June 14, 2020