ಬೆಂಗಳೂರು: ಕಳೆದ 28 ದಿನಗಳಿಂದ ವಿಡಿಯೋ ಮೂಲಕ ಸ್ಟೇಟ್ಮೆಂಟ್ ನೀಡುತ್ತಿದ್ದ ಯುವತಿ ಕೊನೆಗೂ ವಿಚಾರಣೆಗೆ ಹಾಜರಾಗಿದ್ದಾರೆ. ಲೇಡಿ ಆಗ ಬರ್ತಾರೆ, ಈಗ ಬರ್ತಾರೆ ಅಂತ ಕಾಯುತ್ತಿದ್ದರೆ ಆ ಯುವತಿ ಮಾತ್ರ ಮಾಧ್ಯಮದವರ ಕಣ್ತಪ್ಪಿಸಿಸುತ್ತಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಬದಲು ವಸಂತನಗರದಲ್ಲಿರುವ ಗುರುನಾನಕ್ ಭವನದಲ್ಲಿ ಜಡ್ಜ್ ಎದುರು ಹಾಜರಾದ್ರು. ಮಂಗಳವಾರ ಮಧ್ಯಾಹ್ನ 3:30ರ ಸುಮಾರಿಗೆ ಯುವತಿ ಹೇಳಿಕೆ ದಾಖಲಿಸಲಾಯಿತು.
ಯುವತಿ ಗುರುನಾನಕ್ ಭವನಕ್ಕೆ ಬಂದದ್ದನ್ನು ಕಂಡು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಎಸ್ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಸಹ ಅಲ್ಲಿಗೆ ದೌಡಾಯಿಸಿದರು. ಸಿಆರ್ಪಿಸಿ ಸೆಕ್ಷನ್ 164ರ ಅನ್ವಯ ಕೇವಲ ಟೈಪಿಸ್ಟ್ ಉಪಸ್ಥಿತಿಯಲ್ಲಿ ನ್ಯಾಯಾಧೀಶರು ಸುಮಾರು 2 ಗಂಟೆ ಕಾಲ ಯುವತಿಯ ಹೇಳಿಕೆಯನ್ನು ಪಡೆದುಕೊಂಡರು. ಈ ವೇಳೆ ಗುರುನಾನಕ್ ಭವನದ ಮುಂದೆ ಖಾಕಿ ಕಣ್ಗಾವಲು ಜೋರಾಗಿತ್ತು.
Advertisement
Advertisement
ಜಡ್ಜ್ ಎದುರು ಹಾಜರಾದ ಬಳಿಕ ಸಿಡಿ ಲೇಡಿಯನ್ನು ಆಡುಗೋಡಿಯ ಟೆಕ್ನಿಕಲ್ ಸೆಂಟರ್ಗೆ ಎಸ್ಐಟಿ ಅಧಿಕಾರಿಗಳು ಕರೆದೊಯ್ದು ಹೇಳಿಕೆಯನ್ನು ಪಡೆದುಕೊಂಡರು. ಸಿಡಿಯ ಆಡಿಯೋ-ವಿಡಿಯೋದಲ್ಲಿರುವ ಧ್ವನಿ ಯುವತಿಯದ್ದಾ ಅಥವಾ ಅಲ್ಲವಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಸ್ಐಟಿ ಅಧಿಕಾರಿಗಳು ಧ್ವನಿ ಪರೀಕ್ಷೆಯನ್ನು ನಡೆಸಿದರು.
Advertisement
ಎಸ್ಐಟಿ ಮುಂದೆ ಸಿಡಿ ಯುವತಿ ಹೇಳಿದ್ದೇನು?
ವಿಡಿಯೋಗಳ ಮೂಲಕ ನೀಡಿರುವ ಹೇಳಿಕೆಗೆ ಬದ್ಧವಾಗಿದ್ದು ಈಗಾಗಲೇ ಕೊಟ್ಟ ದೂರಿಗೆ ನಾನು ಬದ್ಧವಾಗಿದ್ದೇನೆ. ರಮೇಶ್ ಜಾರಕಿಹೊಳಿ ನನ್ನನ್ನು ನಂಬಿಸಿಯೇ ಅತ್ಯಾಚಾರ ಮಾಡಿದ್ದು ಇದು ನಂಬಿಕೆ ದ್ರೋಹ. ಪ್ರಯಾಣ ಮಾಡಿ ಸುಸ್ತಾಗಿರುವ ಕಾರಣ ಇಂದು ವೈದ್ಯಕೀಯ ಪರೀಕ್ಷೆಗೆ ಒಳಪಡಲು ಸಾಧ್ಯವಿಲ್ಲ. ನಾಳೆ ಪರೀಕ್ಷೆಗೆ ಹಾಜರಾಗುತ್ತೇನೆ. ನಾನು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ನನಗೆ ರಮೇಶ್ ಜಾರಕಿಹೊಳಿಯಿಂದ ಬೆದರಿಕೆ ಇದ್ದು ಭದ್ರತೆ ಕೊಟ್ಟರೆ ಎಲ್ಲಾ ಮಾಹಿತಿಯನ್ನು ನೀಡುತ್ತೇನೆ.
Advertisement
ಸಿಡಿ ಕೇಸ್ ಮುಂದೇನು?
* ಜಡ್ಜ್ ಮುಂದೆಯೂ ತಮ್ಮ ವೀಡಿಯೋ ಹೇಳಿಕೆಗಳಿಗೆ ಬದ್ದರಾಗಿದ್ದರೇ ರಮೇಶ್ ಜಾರಕಿಹೊಳಿ ಬಂಧನ ಆಗಬಹುದು.
* ತಮ್ಮ ವಿಡಿಯೋ ಹೇಳಿಕೆಗಳಿಗೆ ಯುವತಿ ಬದ್ಧರಾಗದೇ ಇದ್ದರೇ ರಮೇಶ್ ಜಾರಕಿಹೊಳಿ ಸೇಫ್ ಆಗಬಹುದು.
* ತಮ್ಮ ವಿಡಿಯೋ ಹೇಳಿಕೆಗಳಿಗೆ ಯುವತಿ ಬದ್ಧರಾಗದೇ ಇದ್ದರೇ ಸಿಡಿ ಗ್ಯಾಂಗ್ಗೆ ಸಂಕಷ್ಟ ಎದುರಾಗಬಹುದು .
* ಸಿಡಿ ಯುವತಿಯನ್ನು ಕೋರ್ಟ್ ಪೋಷಕರ ವಶಕ್ಕೆ ಒಪ್ಪಿಸಬಹುದು.
* ಎಸ್ಐಟಿ ತನಿಖೆಗೆ ಮತ್ತೊಂದು ಆಯಾಮ ಸಿಕ್ಕಬಹುದು.