ಬೆಂಗಳೂರು: ನನ್ನ ಮಗಳ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಅವಳನ್ನು ಸಿಕ್ಕಿಹಾಕಿಸಲು ನೋಡುತ್ತಿದ್ದಾರೆ ಎಂದು ನಟಿ, ಡ್ರಗ್ ಪ್ರಕರಣದಲ್ಲಿ ಆರೋಪಿಯಾಗಿರುವ ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಹೇಳಿದ್ದಾರೆ.
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಮಗಳ ಮೇಲಿನ ಎಲ್ಲ ಆರೋಪಗಳು ಸುಳ್ಳು. ಅವಳನ್ನು ಸಿಕ್ಕಿ ಹಾಕಿಸಲಾಗುತ್ತಿದೆ. ಇದೆಲ್ಲವೂ ಸುಳ್ಳು, ನನ್ನ ಮಗಳು ಪ್ರಕರಣದಿಂದ ಮುಕ್ತಳಾಗಿ ಬರುತ್ತಾಳೆ. ನಾನು ಎಲ್ಲ ರೀತಿಯ ದಾಖಲೆಗಳನ್ನು ಸಲ್ಲಿಸುತ್ತೇನೆ. ಶೀಘ್ರವೇ ನನ್ನ ಮಗಳು ಆರೋಪದಿಂದ ಮುಕ್ತಳಾಗುತ್ತಾಳೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎರಡು ಬಾರಿ ಎಂಡಿಎಂಎ ಡ್ರಗ್ ಬಳಕೆ- ರಾಗಿಣಿ ತಪ್ಪೊಪ್ಪಿಗೆ!
Advertisement
ನಟಿ ರಾಗಿಣಿ ಭೇಟಿ ಮಾಡಲು ಕುಟುಂಬಸ್ಥರು ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಈ ವೇಳೆ ಅವರ ತಾಯಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ತಮ್ಮ ಮಗಳನ್ನು ಬಿಡಿಸಿಕೊಂಡು ಬರಲು ದಾಖಲೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
Advertisement
Advertisement
ಶುಕ್ರವಾರ ರಾಗಿಣಿ ನಿವಾಸದ ಮೇಲೆ ದಾಳಿ ನಡೆಸಿದ್ದು ಅಧಿಕಾರಿಗಳು ವಿಚಾರಣೆಗಾಗಿ ನಟಿಯನ್ನ ಸಿಸಿಬಿ ಕಚೇರಿಗೆ ಕರೆ ತಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿತ್ತು. ಮಧ್ಯರಾತ್ರಿ ರಾಗಿಣಿ ಭೇಟಿ ಮಾಡಲು ಪೋಷಕರು ದೌಡಾಯಿಸಿದ್ದು, ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದು ಗೇಟ್ನಲ್ಲಿ ಕಾದು ನಿಂತಿದ್ದರು. ನಟಿ ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಮತ್ತು ತಂದೆ ರಾಕೇಶ್ ದ್ವಿವೇದಿ ಸಾಂತ್ವನ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲದೇ ಮಗಳು ರಾಗಿಣಿಗಾಗಿ ಊಟಕ್ಕಾಗಿ ಪಾಸ್ತಾ, ನೀರಿನ ಬಾಟಲ್ ಹಾಗೂ ಬಟ್ಟೆ ತಂದಿದ್ದರು. ಆದ್ರೆ ಅಧಿಕಾರಿಗಳು ಭೇಟಿಗೆ ಅನುಮತಿ ನೀಡದ ಹಿನ್ನೆಲೆ ಹಿಂದಿರುಗಿದ್ದರು.
12 ಆರೋಪಿಗಳು: ಶಿವಪ್ರಕಾಶ್ (ಎ1), ರಾಗಿಣಿ ದ್ವಿವೇದಿ (ಎ2), ವೀರೇನ್ ಖನ್ನಾ (ಎ3), ಪ್ರಶಾಂತ್ ರಂಕಾ (ಎ4), ವೈಭವ್ ಜೈನ್ (ಎ5), ಆದಿತ್ಯ ಆಳ್ವಾ (ಎ6), ಲೂಮ್ ಪೆಪ್ಪರ್ (ಎ7), ಪ್ರಶಾಂತ್ ರಿಜು (ಎ8), ಅಶ್ವಿನ್ (ಎ9), ಅಭಿ ಸ್ವಾಮಿ (ಎ10), ರಾಹುಲ್ (ಎ11), ವಿನಯ್ (ಎ12).