– ಕಾಂಗ್ರೆಸ್, ಬಿಜೆಪಿ ವಿರುದ್ಧ ಕಿಡಿ
ರಾಮನಗರ: 15 ವರ್ಷದಿಂದ ಪಕ್ಷ ಬೆಳೆಸಿದ ನನ್ನ ಕಷ್ಟ ನನಗೆ ಗೊತ್ತಿದೆ. ಒಂದು ಪ್ರಾದೇಶಿಕ ಪಕ್ಷ ಬೆಳೆಸುವುದು ಅಷ್ಟು ಸುಲಭವಲ್ಲ. ಆ ಅಲ್ಲಾಗೆ ಎಲ್ಲವನ್ನೂ ಬಿಟ್ಟಿದ್ದೇನೆ, ಅಲ್ಲಾ ಅವನನ್ನ ಸರ್ವನಾಶ ಮಾಡ್ತಾನಾ ಅಥವಾ ನನ್ನನ್ನು ಮಾಡ್ತಾನಾ ನೋಡೋಣ ಎಂದು ಶಾಸಕ ಜಮೀರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ಬಿಡದಿ ತೋಟದ ಮನೆಯಲ್ಲಿ ಮಾತನಾಡಿದ ಅವರು, ಮೂರು ಬಸ್ಸಿಗೆ ಒಂದು ನಂಬರ್ ಹಾಕಿಕೊಂಡು ಓಡಿಸುತ್ತಿದ್ದ. ಆ ಜೀವನ ಮಾಡ್ತಿದ್ದ ಅವನು, ಅಂತಹವನು ಇವತ್ತು ಎಂಎಲ್ಎ ಆಗಿದ್ದಾನೆ. ಹುಟ್ಟಿದಾಗಿನಿಂದ ದಾನಧರ್ಮ ಮಾಡಿಕೊಂಡು ಬಂದಿದ್ದಾನಂತೆ. ಅವನ ದಾನಧರ್ಮವನ್ನ ನಾನು ನೋಡಿದ್ದೇನೆ. ಅವನ ಬಗ್ಗೆ ಮಾತನಾಡಿದರೆ ಕೊಚ್ಚೆಗೆ ಕಲ್ಲು ಎಸೆದಾಗೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ನಾನು ಸಿದ್ದರಾಮಯ್ಯನವರ ಕ್ಷೇತ್ರಕ್ಕೆ ಕಳುಹಿಸಿ ಕೊಡ್ತೇನೆ. ಕಾಂಗ್ರೆಸ್ಸಿನವರಿಗೆ ಬಸ್ ಮಾಡಿ ಕೊಡ್ತೇನೆ. ರಾಜ್ಯದ ಕೆಲ ಕ್ಷೇತ್ರಗಳನ್ನ ಹೋಗಿ ನೋಡಿ ಬರಲಿ. ರಾಮನಗರದ ಬಗ್ಗೆ ಮಾತನಾಡುವವರು ಒಮ್ಮೆ ಹೋಗಿ ನೋಡಲಿ. ಬಸವಕಲ್ಯಾಣ ಈಗ ಯಾವ ಸ್ಥಿತಿಯಲ್ಲಿದೆ ಎಂದು ನೋಡಲಿ. ರಾಮನಗರದ ಅಭಿವೃದ್ಧಿ ಬಗ್ಗೆ ಈಗಿನ ಕಾಂಗ್ರೆಸ್ ಮುಖಂಡ ಸಿಂಧ್ಯಾರವರೇ ಹೇಳಿದ್ದಾರೆ. ಅವರು ಈ ಹಿಂದೆ ರಾಮನಗರದ ಅಭಿವೃದ್ಧಿ ಬಗ್ಗೆ ಬಸವಕಲ್ಯಾಣದಲ್ಲಿ ಹೇಳಿದ್ದಾರೆ ಎಂದರು.
Advertisement
ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸಾರ್ವಜನಿಕರ ಜೊತೆ ಯಾವ ರೀತಿ ನಡೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಗೊತ್ತಿಲ್ಲ. ಚುನಾವಣಾ ಆಯೋಗವಾಗಲಿ, ರಾಜ್ಯ ಸರ್ಕಾರ ಇಂತಹ ಸಂದರ್ಭದಲ್ಲಿ ಯಾವ ರೀತಿ ನಡೆಸಿಕೊಳ್ಳುತ್ತಿದ್ದೀರಿ. ನೈಟ್ ಕರ್ಫ್ಯೂ, ಲಾಕ್ ಡೌನ್ ಮಾಡುವುದರಿಂದ ಯಾರಿಗೆ ಉಪಯೋಗ. ನಮ್ಮ ಜೀವದ ಬಗ್ಗೆ ನಾವೇ ಚೆಲ್ಲಾಟವಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಜವಬ್ದಾರಿ ಇರಬೇಕು ಎಂದು ಕಿಡಿಕಾರಿದರು.
Advertisement
ಬೆಂಗಳೂರಿನಲ್ಲಿ ಬೆಡ್ ದೊರೆಯುತ್ತಿಲ್ಲ. ಸರ್ಕಾರ ಇಂತಹ ಸಂದರ್ಭದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದ್ರೆ ಸರ್ಕಾರಕ್ಕೆ ಉಪಚುನಾವಣೆ ಚಿಂತೆಯಾಗಿದೆ. ದಿನದಿಂದ ದಿನಕ್ಕೆ ಸೋಂಕು ಏರುತ್ತಿದೆ. ಕೊರೊನಾ ಪಾಸಿಟಿವ್ ಬಂದವರಿಗೆ ಕೊಡುವ ಇಂಜೆಕ್ಷನ್ ಲಭ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಜನಸಾಮಾನ್ಯರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಗರಂ ಆದರು.
ಸಾರಿಗೆ ನೌಕರರ ಮುಷ್ಕರ ವಿಚಾರ ಕುರಿತು ಮಾತನಾಡಿ, ಸಾರಿಗೆ ನೌಕರರ ಬಗ್ಗೆ ಸರ್ಕಾರದ ಇಷ್ಟೊಂದು ಬಿಗಿ ಧೋರಣೆ ಇದೆ. ಸರ್ಕಾರವೇ ಫ್ರಿ ಪಾಸ್ ಕೊಡುತ್ತೇವೆ ಎನ್ನುತ್ತಾರೆ. ಮತಕ್ಕಾಗಿ ತೆಗೆದುಕೊಳ್ಳುವ ಕಾರ್ಯಕ್ರಮಗಳಿಗೆ ಕೊಡುವ ಹಣ ಎಷ್ಟು ಇದೆ. ಅದರಿಂದ ಸಾರಿಗೆ ಇಲಾಖೆ ನಷ್ಟದಲ್ಲಿ ಇದೆ. ಸರ್ಕಾರದ ತಪ್ಪು ಇಟ್ಟುಕೊಂಡು ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎನ್ನುವುದು ಎಷ್ಟು ಸರಿ. ನಿಮ್ಮಲ್ಲೆ ವಿಶ್ವಾಸದ ಕೊರತೆ ಇದೆ. ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ. ಸಾರಿಗೆ ನೌಕರರನ್ನ ಕರೆದು ಹೇಳಬೇಕು. ಸಮಯಕೊಡಿ, ಗೌರವಯುತವಾಗಿ ನಡೆಸಿಕೊಡುತ್ತೆವೆ ಎಂದು ಕೇಳಬೇಕು. ಅದನ್ನು ಬಿಟ್ಟು ಸರ್ಕಾರ ಮೂಲಕ ಹೆದರಿಸುತ್ತೇವೆ ಎಂದರೇ ಅದು ಸಾಧ್ಯವಿಲ್ಲ ಎಂದರು.