ಬಿಗ್ಬಾಸ್ಮನೆಯ ಸ್ಪರ್ಧಿಗಳಿಗೆ ಇತ್ತೀಚೆಗೆ ನಿದ್ದೆ ಹೆಚ್ಚಾಗುತ್ತಿದೆ. ಬಿಗ್ಬಾಸ್ ಮನೆಯ ರೂಲ್ಸ್ ಪ್ರಕಾರ ಹಗಲು ಮಲಗುವಂತಿಲ್ಲ. ಬಿಗ್ಬಾಸ್ ಮನೆಯ ಲೈಟ್ ಆಫ್ ಆದ್ಮೇಲೆನೇ ನಿದ್ದೆ ಮಾಡಬೇಕು. ಹಾಗೇ ಲೈಟ್ ಆನ್ ಆಗುತ್ತಿದ್ದಂತೆ ಸ್ಪರ್ಧಿಗಳು ಎದ್ದು ಅವರ ಪ್ರತಿನಿತ್ಯದ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಆದರೆ ಸ್ಪರ್ಧಿಗಳು ಮಾತ್ರ ನಿದ್ದೆ ಮಾಡಲು ಪ್ರಾರಂಭಿಸಿದ್ದಾರೆ. ಅದರಲ್ಲಿಯೂ ಮಹಿಳಾ ಸ್ಪರ್ಧಿಗಳು ಅತಿ ಹೆಚ್ಚಾಗಿ ನಿದ್ದೆ ಮಾಡುತ್ತಿದ್ದಾರೆ.
Advertisement
ಇಂದು ಬೆಳಗ್ಗೆ ಬಿಗ್ಬಾಸ್ ವೇಕ್ ಅಪ್ ಸಾಂಗ್ ಹಾಕಿದರೂ ಕೂಡ ಶುಭಾ, ನಿಧಿ ಎದ್ದೇಳದೆ ಹಾಗೇ ಮಲಗಿದ್ದರು. ಆಗ ಬಿಗ್ಬಾಸ್ ಎದ್ದೇಳು ಮಂಜುನಾಥ ಎದ್ದೇಳು ಎಂದು ಸಾಂಗ್ ಹಾಕಿದ್ದಾರೆ. ಈ ವೇಳೆ ಶುಭಾ, ಬಿಗ್ಬಾಸ್ ನಾನು ಎದ್ದೇಳುವುದಿಲ್ಲ. ಗೇಮ್ ಪ್ರಾಪರ್ಟಿ ಆಟದ ನಂತರ ಮುಟ್ಟಿರುವುದಕ್ಕೆ ನೀವು ಟೀ, ಕಾಫಿ ಕೊಡದೆ ಇದ್ದೀರಾ. ನನಗೆ ಟಿ, ಕಾಫಿ ಬೇಕು ಬಿಗ್ಬಾಸ್ ಎಂದು ಹಠ ಮಾಡಿದ್ದಾರೆ. ಬಿಗ್ಬಾಸ್ ಮಾತ್ರ ಏನು ಮಾತನಾಡದೇ ಸುಮ್ಮನಾಗಿದ್ದಾರೆ.
Advertisement
Advertisement
ವೈಷ್ಣವಿ ನಿದ್ದೆ ಮಾಡುತ್ತಾ ಜ್ಞಾನ ಮಾಡುತ್ತಾರೆ ಎಂದು ಮನೆಮಂದಿ ತಮಾಷೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಅದರಂತೆ ವೈಷ್ಣವಿ ಮತ್ತೆ ಜ್ಞಾನ ಮಾಡುತ್ತೇನೆ ಎಂದು ಕುಳಿತುಕೊಂಡಿದ್ದಾರೆ. ಆಗ ಮಂಜು ಮಾತ್ರ ವೈಷ್ಣವಿಗೆ ಕಣ್ಣು ಬಿಟ್ಟು ಜ್ಞಾನ ಮಾಡು ನೋಡೋಣ, ಕಂಡಿದ್ದೇವೆ ನಿನ್ನ ಜ್ಞಾನವನ್ನು ಎಂದು ಹೇಳುತ್ತಾ ತಮಾಷೆ ಮಾಡಿದ್ದಾರೆ.
Advertisement
ಇತ್ತ ಬಿಗ್ಬಾಸ್ ಮನೆಯಲ್ಲಿ ನಿಧಿ, ಶುಭಾ, ಪ್ರಿಯಾಂಕ, ವೈಷ್ಣವಿ ಮನೆಯ ಹಾಲ್ನಲ್ಲಿ ಕುಳಿತು ನಿದ್ದೆಗೆ ಜಾರಿದ್ದಾರೆ. ಇದನ್ನು ಕಂಡ ಮಂಜು ಮತ್ತು ಶಮಂತ್ ನಿದ್ದೆ ಮಾಡುತ್ತಿದ್ದಾರೆ ಬಿಗ್ಬಾಸ್ ಈಗ ಹೇಳುತ್ತಾರೆ ಎಂದು ಮಾತನಾಡಿಕೊಳ್ಳುತ್ತಿರುವಾಗ ಬಿಗ್ಬಾಸ್ ಮತ್ತೆ ಎದ್ದೇಳು ಮಂಜುನಾಥ ಎದ್ದೇಳು ಎಂದು ಸಾಂಗ್ ಹಾಕಿದ್ದಾರೆ. ಆಗ ನಿದ್ದೆಗೆ ಜಾರಿರುವ ಮಹಿಳಾ ಮಣಿಗಳು ಎದ್ದು ಕುಳಿತಿದ್ದಾರೆ. ಬಿಗ್ಬಾಸ್ ಮನೆಯ ಸ್ಪರ್ಧಿಗಳು ಇತ್ತೀಚೆಗೆ ಅತಿ ಹೆಚ್ಚು ನಿದ್ದೆ ಮಾಡುತ್ತಿರುವ ದೃಶ್ಯಗಳು ಕಾಣುತ್ತಿವೆ.