ಬೆಂಗಳೂರು: ಕೊರೊನಾ ಫ್ರಂಟ್ ಲೈನ್ ವರ್ಕರ್ಸ್ ಗೆ ಇಂದಿನಿಂದ ಲಸಿಕೆ ನೀಡುವ ಪ್ರಕ್ರಿಯೆ ಶುರುವಾಗಿದೆ. ಎರಡನೇ ಹಂತದ ಫಲಾನುಭವಿಗಳಿಗೆ ಲಸಿಕೆ ಆರಂಭವಾಗಿದೆ.
ನಾಳೆಯಿಂದ ಪಾಲಿಕೆ ವತಿಯಿಂದ ಕೊರೊನಾ ಸಂಬಂಧ ದುಡಿದ ಎಲ್ಲ ನೌಕರರಿಗೆ ಲಸಿಕೆ ನೀಡಲಾಗುತ್ತದೆ. ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ನಾಲ್ವರು ವಿಶೇಷ ಆಯುಕ್ತರು, ಇಲಾಖಾವಾರು ಮುಖ್ಯ ಎಂಜಿನಿಯರ್ ಗಳು ಲಸಿಕೆ ಪಡೆಯಲಿದ್ದಾರೆ.
Advertisement
Advertisement
ಬಿಬಿಎಂಪಿ ಕೇಂದ್ರ ಕಚೇರಿ ಗಾಜಿನ ಮನೆಯಲ್ಲಿ ಲಸಿಕೆ ನೀಡಲಾಗುತ್ತದೆ. ಫ್ರಂಟ್ ಲೈನ್ ವರ್ಕರ್ಸ್ ಗೆ ಲಸಿಕೆ ಇಂದು ಆರೋಗ್ಯ ಇಲಾಖೆ ವತಿಯಿಂದ ಲಸಿಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುತ್ತಿದೆ.
Advertisement
ನಾಳೆ ಪಾಲಿಕೆ ವತಿಯಿಂದ ಫ್ರಂಟ್ ಲೈನ್ ವರ್ಕರ್ಸ್ ಗೆ ಲಸಿಕೆ ಪಾಲಿಕೆ ವತಿಯಿಂದ ಅಧಿಕೃತ ಶುರುವಾಗಲಿದೆ. 3600 ಪಾಲಿಕೆ ನೌಕರರು, 1900 ಎರವಲು ಸೇವೆ ನೌಕರರು, ಪೊಲೀಸರು, ಕಂದಾಯ ಇಲಾಖೆಯ ನೌಕರರು ಎಲ್ಲರು ಫ್ರಂಟ್ ಲೈನ್ ವರ್ಕರ್ಸ್ ಲಸಿಕೆ ಪಡೆಯಲಿದ್ದಾರೆ.
Advertisement
3 ದಿನ ಲಸಿಕೆ ಟಾರ್ಗೆಟ್ ಫಿಕ್ಸ್:
ಮುಂದಿನ 3 ದಿನಗಳಲ್ಲಿ 61 ಸಾವಿರ ಫ್ರಂಟ್ ಲೈನ್ ವರ್ಕರ್ಸ್ ಗೆ ಲಸಿಕೆ ನೀಡುವ ಯೋಜನೆ ಸಿದ್ಧವಾಗಿದೆ. ಪೊಲೀಸ್ ಇಲಾಖೆ, ನಗರಾಭಿವೃದ್ಧಿ, ಸಿಆರ್ ಪಿ ಎಪ್, ಬಿಬಿಎಂಪಿ, ಕಂದಾಯ ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡಬೇಕಾಗಿದೆ. 108 ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲೇಬೇಕು.
ಮನವರ್ತಿ ಪೇಟೆ, ಲಗ್ಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಲಾಯಿತು. ಫ್ರಂಟ್ ಲೈನ್ ವರ್ಕರ್ಸ್ ಗೆ ಲಸಿಕೆ ಕಾರ್ಯ ಚಾಲನೆ ಸಿಕ್ಕಿದ್ದು, ಬರೋಬ್ಬರಿ 18 ಜನರಿಗೆ ಲಸಿಕೆ ಕೊಡಲಾಗಿತ್ತು. ಒಂದು ಸೆಂಟರ್ ಗೆ ಕನಿಷ್ಟ 100 ಫ್ರಂಟ್ ಲೈನ್ ವರ್ಕರ್ಸ್ ಲಸಿಕೆ ಪಡೆಯಬೇಕಾಗಿದೆ.