ಅಬುಧಾಬಿ: ಎಬಿ ಸೂಪರ್ಹ್ಯೂಮನ್ ಆತ ಮಾತ್ರ ಈ ರೀತಿ ಬ್ಯಾಟ್ ಬೀಸಲು ಸಾಧ್ಯ ಎಂದು ಹೇಳುವ ಮೂಲಕ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಅವರನ್ನು ಹಾಡಿಹೊಗಳಿದ್ದಾರೆ.
ಸೋಮವಾರ ಶಾರ್ಜಾದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಆರ್ಸಿಬಿ 87 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇದರ ಜೊತೆಗೆ ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಬೆಂಗಳೂರು ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಎಬಿಡಿ ವಿಲಿಯರ್ಸ್ ಅವರ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ತಲೆಬಾಗಿದೆ.
Advertisement
Advertisement
ಎಬಿಡಿಯವರ ಇನ್ನಿಂಗ್ಸ್ ಕುರಿತು ಪಂದ್ಯದ ಬಳಿಕ ಮಾತನಾಡಿರುವ ಕೊಹ್ಲಿ, ನಾವೆಲ್ಲರೂ ಶಾರ್ಜಾ ಪಿಚ್ನಲ್ಲಿ ಬ್ಯಾಟ್ ಬೀಸಲು ಕಷ್ಟಪಡುತ್ತಿದ್ದವು. ಆದರೆ ಆಗತಾನೇ ಕಣಕ್ಕಿಳಿದ ಸೂಪರ್ಹ್ಯೂಮನ್ ಎಬಿ ಚಿತ್ರಣವನ್ನೇ ಬದಲು ಮಾಡಿದರು. ನಾವೆಲ್ಲ 165ರಿಂದ 170 ಟಾರ್ಗೆಟ್ ನೀಡುವ ಬಗ್ಗೆ ಯೋಚಿಸುತ್ತಿದ್ದೆವು. ಆದರೆ ವಿಲಿಯರ್ಸ್ ಅವರ ಅದ್ಭುತ ಆಟ 195 ರನ್ಗಳ ಟಾರ್ಗೆಟ್ ನೀಡುವಂತೆ ಮಾಡಿತು. ಎಬಿಡಿ ಮಾತ್ರ ಈ ರೀತಿ ಬ್ಯಾಟ್ ಬೀಸಲು ಸಾಧ್ಯ, ಏಕೆಂದರೆ ಅವರು ಒಳ್ಳೆಯ ಪ್ರತಿಭೆ ಎಂದು ಹೇಳಿದ್ದಾರೆ.
Advertisement
On a pitch like that, to bat like that only @ABdeVilliers17 can do that: @imVkohli #Dream11IPL #RCBvKKR pic.twitter.com/EVgskchh5c
— IndianPremierLeague (@IPL) October 12, 2020
Advertisement
ನಾನು ಕೂಡ ಆಗ ಸ್ಟ್ರೈಕಿನಲ್ಲಿದ್ದೆ ಆದರೆ ಆ ಮೈದಾನದಲ್ಲಿ ಬಾಲ್, ಬ್ಯಾಟಿಗೆ ಬರುತ್ತಿರಲಿಲ್ಲ. ಬ್ಯಾಟ್ ಮಾಡುವುದೇ ಕಷ್ಟವಾಗಿತ್ತು. ಆದರೆ ಎಬಿಡಿ ವಿಲಿಯರ್ಸ್ ತಾವು ಆಡಿದ ಮೂರನೇ ಬಾಲನ್ನೇ ಬೌಂಡರಿಗೆ ಅಟ್ಟಿದರು. ಈ ಪಂದ್ಯದಲ್ಲಿ ಅವರು ಉತ್ತಮವಾಗಿ ಆಟವಾಡಿದರು. ನಮ್ಮ ತಂಡದ ಎಲ್ಲ ಆಟಗಾರರು ಕೂಡ ವೈಯಕ್ತಿಕವಾಗಿ ಬಹಳ ಚೆನ್ನಾಗಿ ಆಡಿದ್ದೇವೆ. ಬೌಲಿಂಗ್ ವಿಭಾಗದಲ್ಲೂ ಕೂಡ ನಾವು ಬ್ಯಾಲೆನ್ಸ್ ಆಗಿ ಇದ್ದೇವೆ. ನನಗೆ ಬಹಳ ಖುಷಿಯಾಗಿದೆ ಎಂದು ಕೊಹ್ಲಿ ತಿಳಿಸಿದ್ದಾರೆ. ಇದನ್ನು ಓದಿ: 47 ಎಸೆತಕ್ಕೆ 100 ರನ್ ಜೊತೆಯಾಟ – ಐಪಿಎಲ್ನಲ್ಲಿ ಎಬಿಡಿ, ಕೊಹ್ಲಿ ದಾಖಲೆ
ನಿನ್ನೆ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. 12ನೇ ಓವರಿನ 2ನೇ ಬಾಲಿನಲ್ಲಿ ಫಿಂಚ್ ಅವರು ಔಟ್ ಆದಾಗ ತಂಡ 94 ರನ್ ಸಿಡಿಸಿ ಎರಡು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ನಾಯಕ ಕೊಹ್ಲಿ ಮತ್ತು ಅನುಭವಿ ಆಟಗಾರ ಎಬಿಡಿ ವಿಲಿಯರ್ಸ್ ಆದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಶತಕದ ಜೊತೆಯಾಟವಾಡಿತು. ಈ ಮೂಲಕ 10ನೇ ಶತಕದ ಜೊತೆಯಾಟವಾಡಿ ಐಪಿಎಲ್ನಲ್ಲಿ ದಾಖಲೆ ಬರೆಯಿತು.
ಈ ಪಂದ್ಯನಲ್ಲಿ ಸ್ಫೋಟಕವಾಗಿ ಬ್ಯಾಟ್ ಬೀಸಿದ ಎಬಿಡಿ ವಿಲಿಯರ್ಸ್, ತಾವು ಆಡಿ 33 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಆರು ಸಿಕ್ಸರ್ ಸಮೇತ ಭರ್ಜರಿ 73 ರನ್ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ವಿರಾಟ್ ಕೊಹ್ಲಿಯವರು 28 ಬಾಲಿಗೆ 33 ರನ್ ಸಿಡಿಸಿದರು. ಈ ಮೂಲಕ ಕೋಲ್ಕತ್ತಾಗೆ 195 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಬೆಂಗಳೂರು ಬೌಲರ್ ಗಳ ದಾಳಿಗೆ ತತ್ತರಿಸಿ 20 ಓವರಿನಲ್ಲಿ ಕೇವಲ 112 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.