– ಟಿಕೆಟ್ ನೀಡುವಾಗ ಯತ್ನಾಳ್‍ರನ್ನ ಬಿಎಸ್‍ವೈ ಸಮರ್ಥಿಸಿಕೊಂಡಿದ್ರು
ಚಿಕ್ಕಮಗಳೂರು: ಕೋಡಿಹಳ್ಳಿ ಚಂದ್ರಶೇಖರ್ ಇಷ್ಟು ದಿನ ರೈತ ನಾಯಕರಾಗಿದ್ದರು ಈಗ ಕಾರ್ಮಿಕ ನಾಯಕರಾಗಿದ್ದಾರೆ. ನೌಕರರನ್ನ ಎತ್ತಿಕಟ್ಟುವುದು ಅರಾಜಕತೆ ಸೃಷ್ಟಿಸುವುದು ಸುಲಭ. ಆದರೆ, ಹರಾಜಕತೆ ಸೃಷ್ಟಿಸುವುದು ನಾಯಕತ್ವದ ಲಕ್ಷಣ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿ ಡಾಂಬಾರೀಕರಣಗೊಂಡ ರಸ್ತೆಯನ್ನ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಮೂರು ರೈತಪರವಾದ ಕೃಷಿ ಮಸೂದೆಗಳನ್ನು ಮಂಡಿಸಿದೆ. ಆದರೆ ಆ ಮಸೂದೆಗಳು ರೈತ ವಿರೋಧಿ ಮಸೂದೆಗಳು ಎನ್ನುತ್ತಿದ್ದಾರೆ. ಸರ್ಕಾರ ರೈತರ ಪರವಾಗಿ ತೆಗೆದುಕೊಂಡ ನಿಲುವುಗಳನ್ನು ರೈತ ವಿರೋಧಿ ಎಂದು ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಬೆಳೆದ ಬೆಳೆಯನ್ನ ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದಿದ್ದರು. ಈಗ ಸರ್ಕಾರ ಮುಕ್ತ ಮಾರಾಟಕ್ಕೆ ಅವಕಾಶ ಕೊಟ್ಟಿದೆ. ಈಗ ರೈತ ವಿರೋಧಿ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement
Advertisement
ಬೆದರಿಕೆ ಮೂಲಕ ಸರ್ಕಾರವನ್ನು ಮಣಿಸಲು ಸಾಧ್ಯವಿಲ್ಲ. ಸಾರಿಗೆ ಸಚಿವರು ಮೇ 2ರ ವರೆಗೆ ಸಮಯ ಕೊಡುವಂತೆ ಕೇಳಿಕೊಂಡಿದ್ದಾರೆ. ನೌಕರರು ಅಲ್ಲಿಯವರೆಗೆ ಸಮಯ ಕೊಟ್ಟು ನೋಡಬೇಕು. ಸರ್ಕಾರ ಹಾಗೂ ಬಿಜೆಪಿ ನಿಮ್ಮ ಬೇಡಿಕೆಯ ಪರವಾಗಿದೆ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಯನ್ನು ಎದುರಿಸುವಂತಹ ವೇಳೆಯಲ್ಲೂ ನೌಕರರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮುಷ್ಕರವನ್ನು ಹಿಂತೆಗೆದುಕೊಳ್ಳುವಂತೆ ನೌಕರರಲ್ಲಿ ಮನವಿ ಮಾಡಿದರು. ಮೊದಲೇ ಸಂಕಷ್ಟದಲ್ಲಿದ್ದ ಸಾರಿಗೆ ಇಲಾಖೆ ಕೋವಿಡ್‍ನಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಹಕರಿಸುವಂತೆ ವಿನಂತಿಸಿದರು.
Advertisement
ಸೈನಿಕರ ಹತ್ಯೆ ದುರಾದೃಷ್ಟಕರ : ನಾನು ಗೌರಿ ಎಂದು ಮೊಂಬತ್ತಿ ಹಿಡಿದವರು 27 ಜನ ಸೈನಿಕರು ಸತ್ತಾಗ ಏಕೆ ಮೊಂಬತ್ತಿ ಹಿಡಿಯಲಿಲ್ಲ ಎಂದು ಟೀಕಿಸಿದರು. ಎಡಪಂಥೀಯ ನಿಲುಗಳಿಂದ ದುಷ್ಪ್ರೇರಣೆ ಪಡೆದ ಜನ ಛತ್ತಿಸ್‍ಗಢದಲ್ಲಿ 27 ಜನ ಸೈನಿಕರನ್ನ ಹತ್ಯೆ ಮಾಡಿದ್ದಾರೆ. ಇದು ದುರಾದೃಷ್ಟಕರ. ಸೈನಕರಿಗೆ ಶತ್ರುಗಳಾದವರು ದೇಶಕ್ಕೂ ಶತ್ರುಗಳೇ. ಯಾರು ಸಂವಿಧಾನವನ್ನ ಒಪ್ಪುವುದಿಲ್ಲವೋ ಅವರು ಬ್ಯಾಲೆಟ್ ಮೇಲೆ ನಂಬಿಕೆ ಇಡಲ್ಲ. ಸಂವಿಧಾನದ ಮೇಲೆ ಯಾರಿಗೆ ನಂಬಿಕೆ ಇರುತ್ತೋ ಅವರು ಬ್ಯಾಲೆಟ್ ಮೇಲೆ ನಂಬಿಕೆ ಇಡುತ್ತಾರೆ. ಬುಲೆಟ್ ಮೇಲೆ ನಂಬಿಕೆ ಇರುವವರಿಗೆ ಸಂವಿಧಾನದ ಮೇಲೆ ನಂಬಿಕೆ ಇರುವುದಿಲ್ಲ ಎಂದರು.
ಸೈನಿಕರನ್ನ ಶತ್ರು ಎಂದು ಪರಿಗಣಿಸುವವನು ದೇಶದಲ್ಲಿ ಇರುವುದಕ್ಕೆ ಅನರ್ಹ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಸಣ್ಣ-ಸಣ್ಣ ವಿಷಯಗಳನ್ನ ವೈಭವಿಕರಿಸಿ ಅರಾಜಕತೆ ಸೃಷ್ಟಿಸಿ ದೇಶವನ್ನು ಹೊಡೆಯುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಜನಜಾಗೃತಿ ಉಂಟು ಮಾಡುವ ಅನಿವಾರ್ಯತೆ ಇದೆ ಎಂದರು.
ಇದೇ ವೇಳೆ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಯತ್ನಾಳ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಬಿಎಸ್‍ವೈ ಹಾಗೂ ಯತ್ನಾಳ್ ಸಂಬಂಧ ಚೆನ್ನಾಗಿದೆ. ಯತ್ನಾಳ್ ಸ್ವಭಾವದ ಬಗ್ಗೆ 2018ರಲ್ಲಿ ಟಿಕೆಟ್ ನೀಡುವಾಗ ಚರ್ಚೆಯಾಗಿತ್ತು. ಆಗ ಯತ್ನಾಳ್ ಪರ ಬಿ.ಎಸ್ ಯಡಿಯೂರಪ್ಪ ಸಮರ್ಥನೆ ಮಾಡಿ ಮಾತನಾಡಿದ್ದರು. ಅವರ ವ್ಯಕ್ತಿಗತ ಸಂಬಂಧ ಚೆನ್ನಾಗಿದೆ ಎಂದರು.