ಎಚ್‍ಡಿಕೆ – ಜಮೀರ್ ಬೆಂಬಲಿಗರ ಮಧ್ಯೆ ಗಲಾಟೆ

Advertisements

ಬೆಂಗಳೂರು: ಸದಾಶಿವನಗರದ ಗೆಸ್ಟ್ ಹೌಸ್ ವಿಚಾರವಾಗಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಬೆಂಬಲಿಗರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬೆಂಬಲಿಗರ ನಡುವೆ ಗಲಾಟೆ ನಡೆದು ತಣ್ಣಗಾಗಿದೆ.

Advertisements

ಇಂದು ಸಂಜೆ ಗೆಸ್ಟ್ ಹೌಸ್ ಬಳಿ ತೆರಳಿದ ನಿಖಿಲ್ ಕುಮಾರಸ್ವಾಮಿ ಅವರ ಮೂವರು ಬಾಡಿಗಾರ್ಡ್‍ಗಳು ಬೀಗ ಮುರಿದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಜಮೀರ್ ಕಡೆಯ ಗೆಸ್ಟ್ ಹೌಸ್ ಕೇರ್ ಟೇಕರ್ ಅಡ್ಡ ಬಂದಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ವೇಳೆ ಬಾಡಿಗಾರ್ಡ್‍ಗಳು ಬೀಗ ಮುರಿದು ಒಳಗೆ ನುಗ್ಗಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ಕೇರ್ ಟೇಕರ್ ಜಮೀರ್ ಅಹ್ಮದ್‍ಗೆ ವಿಷಯ ಮುಟ್ಟಿಸಿದ್ದಾರೆ. ಇದನ್ನು ಓದಿ:ರಮೇಶ್ ಜಾರಕಿಹೊಳಿ ಪ್ರಕರಣ- ಎಸ್‍ಐಟಿಗೆ ಮುಖ್ಯಸ್ಥರೇ ಇಲ್ಲ..!

Advertisements

ವಿಷಯ ತಿಳಿದು ಜಮೀರ್ ಅವರು ತನ್ನ ಪಿಎ ಫಾರೂಖ್ ಅವರಿಗೆ ಸದಾಶಿವನಗರದ ಪೊಲೀಸ್ ಠಾಣೆಗೆ ದೂರು ಕೊಡುವಂತೆ ಸೂಚಿಸಿದ್ದಾರೆ. ನಿಖಿಲ್ ಬಾಡಿಗಾರ್ಡ್‍ಗಳು ಎಚ್‍ಡಿಕೆಯ ಕೆಲ ವಸ್ತುಗಳನ್ನು ಕೊಂಡೊಯ್ಯಲು ಬಂದಿದ್ದರು ಎಂದು ಹೇಳಲಾಗುತ್ತಿದ್ದು, 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಜಮೀರ್ ಅಹಮದ್ ಖಾನ್‍ಗೆ ಈ ಗೆಸ್ಟ್ ಹೌಸ್ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಇಬ್ಬರ ನಡುವಿನ ಸ್ನೇಹ ಮುರಿದು ಬಿದ್ದಿತ್ತು.

Advertisements

ಎಚ್‍ಡಿಕೆ ಪಲ್ಟಿ ಗಿರಾಕಿ ಕಾಸು ಇರುವ ಕಡೆ ತಿರುಗುತ್ತಾರೆ ಅಂತೆಲ್ಲ ಜಮೀರ್ ಟಾಂಗ್ ಕೊಟ್ಟಿದ್ದರು. ಇದರ ನಡುವೆ ಗೆಸ್ಟ್ ಹೌಸ್ ಗಲಾಟೆ ಮೇಲಕ್ಕೆ ಎದ್ದಿತ್ತು. ಹೀಗಾಗಿ ಎಂಎಲ್‍ಸಿ ಬೋಜೇಗೌಡ ಮಧ್ಯಪ್ರವೇಶ ಮಾಡಿ ಜಮೀರ್ ಜೊತೆ ಸಂಧಾನ ನಡೆಸಿ, ದೂರು ಹಿಂಪಡೆಯುವಂತೆ ಮನವೊಲಿಸಿದ್ದಾರೆ. ಸ್ಟೇಷನ್ ಮೆಟ್ಟಿಲು ಹತ್ತಿದ್ದ ಗೆಸ್ಟ್ ಹೌಸ್ ಗಲಾಟೆ ಸದ್ಯ ತಣ್ಣಗಾಗಿದೆ. ಇದನ್ನು ಓದಿ: ಗೂಡ್ಸ್ ವಾಹನ ಚಾಲಕರಿಗೆ ಸರ್ಕಾರ ಸಹಾಯ ಮಾಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

Advertisements
Exit mobile version