Bengaluru RuralKarnatakaLatestMain Post

ಎಎಪಿ ಮಾನಸಿಕ ಕಿರುಕುಳ ನೀಡುತ್ತಿದೆ- ಕಟ್ಟಡ ಮಾಲೀಕ ಆರೋಪ

ಆನೇಕಲ್: ಕಟ್ಟಡ ಮಾಲೀಕನೋರ್ವನಿಗೆ ಮಾನಸಿಕ ಕಿರುಕುಳ ನೀಡಿರುವ ಆರೋಪವೊಂದು ಎಎಪಿ ವಿರುದ್ಧ ಕೇಳಿಬಂದಿದೆ.

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಕಸವನಹಳ್ಳಿಯಲ್ಲಿ ಎಎಪಿ ಮುಖಂಡರು ವಾಣಿಜ್ಯ ಮಳಿಗೆ ತೆರೆಯಲೆಂದು ಕಟ್ಟಡವನ್ನು ಬಾಡಿಗೆಗೆ ಪಡೆದು, ಅದರಲ್ಲಿ ಪಕ್ಷದ ಕಚೇರಿ ತೆರೆದಿದ್ದಲ್ಲದೆ ವಿನಾಕಾರಣ ಕಟ್ಟಡ ಮಾಲೀಕರು ಹಾಗೂ ಮಹದೇವಪುರ ಕ್ಷೇತ್ರದ ಶಾಸಕರ ಹೆಸರಿಗೆ ಕಳಂಕ ತರುವಂತಹ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಅರವಿಂದ ಲಿಂಬಾವಳಿ ಬೆದರಿಕೆ ಆರೋಪ!

ಇದೇ ಆಗಸ್ಟ್ 15 ರಂದು ಬೆಳ್ಳಂದೂರು ವಾರ್ಡ್‍ನ ಕಸವನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ವಾಣಿಜ್ಯ ಮಳಿಗೆ ತೆರೆಯಲೆಂದು ಬಾಡಿಗೆಗೆ ಪಡೆದು ಎಎಪಿ ಕಚೇರಿಯನ್ನು ತೆರೆದಿದ್ದು, ಇದನ್ನು ಕಟ್ಟಡ ಮಾಲೀಕರು ಪ್ರಶ್ನಿಸಿದ್ದಾರೆ. ಈ ವೇಳೆ ಕಟ್ಟಡ ಮಾಲೀಕರು ನಮ್ಮ ಕಟ್ಟಡದಲ್ಲಿ ರಾಜಕೀಯ ಪಕ್ಷದ ಕಚೇರಿ ತೆರೆಯಲು ಅವಕಾಶ ನೀಡುವುದಿಲ್ಲವೆಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಎಪಿಯವರು, ನಮಗೆ ಸ್ಥಳೀಯ ರಾಜಕೀಯ ಮುಖಂಡರುಗಳಿಂದ ಬೆದರಿಕೆ ಇದೆಯೆಂದು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಅವಳಿ-ಜವಳಿ ಕಥೆ ಹೇಳಿ 2ನೇ ಮದುವೆಗೆ ಸಿದ್ಧನಾಗಿ ಪೊಲೀಸರ ಬಲೆಗೆ ಬಿದ್ದ

ಅಲ್ಲದೆ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗೋಷ್ಠಿ ನಡೆಸಿದ ಎಎಪಿಯವರು, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ರವರು ಕಟ್ಟಡ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆಂದು ಹೇಳಿದ್ದಾರೆ. ಆದರೆ ಈ ವಿಷಯಕ್ಕೂ ಶಾಸಕರಿಗೂ ಯಾವುದೇ ಸಂಬಂಧವಿಲ್ಲ. ಜೊತೆಗೆ ನಮಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ, ಎಎಪಿ ಕಡೆಯವರಿಂದ ನಮಗೆ ಮಾನಸಿಕ ತೊಂದರೆ ಉಂಟಾಗಿದೆ ಎಂದು ಕಟ್ಟಡ ಮಾಲೀಕರಾದ ಶ್ರೀಕಾಂತ್ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

Back to top button