ಬಿಗ್ ಬಾಸ್ ಕೊನೇಯ ವಾರಕ್ಕೆ ತಲುಪಿದೆ. ಕೆಲವೇ ದಿನಗಳಲ್ಲಿ ಗ್ರ್ಯಾಂಡ್ ಫಿನಾಲೆ ಸಹ ನಡೆಯಲಿದೆ. ಇದೇ ಸಂದರ್ಭದಲ್ಲಿ ವಾರದ ಕಥೆ ಕಿಚ್ಚ ಜೊತೆ ಎಪಿಸೋಡ್‍ಗೆ ಚಕ್ರವರ್ತಿ ಚಂದ್ರಚೂಡ್ ಆಗಮಿಸಿದ್ದು, ಈ ವೇಳೆ ಮನೆಯಲ್ಲಿನ ಸ್ಪರ್ಧಿಗಳನ್ನು ಪ್ರಾಣಿಗಳಿಗೆ ಹೋಲಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
Advertisement
ದಿವ್ಯಾ ಉರುಡುಗ ಅವರನ್ನು ಕಾಂಗರೂ ಮರಿಗೆ ಹೋಲಿಸಿದ್ದಾರೆ. ನೀರಿದ್ದಾಗ ಹೇಗೆ ಮಾಡಬೇಕು, ನೀರಿಲ್ಲದಾಗ ಹೇಗೆ ಮಾಡಬೇಕು, ಹೇಗೆ ತನ್ನವರನ್ನು ಕಾಪಾಡಿಕೊಳ್ಳಬೇಕು ಎಂಬ ಗುಣವಿದೆ. ಆದರೆ ಅದಕ್ಕೆ ಬೆನ್ನ ಹಿಂದೆ ಯಾರಾದರೂ ಇರಲೇಬೇಕು. ಇನ್ನು ಊರ ನಾಯಿ, ಕಾಡು ನಾಯಿ ಜೊತೆ ಹೋಗಿ ಬಿಟ್ಟಿದೆ. ನಾಯಿಗಳು ಎಂದೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಹೇಗಾದರೂ ಮಾಡಿ ಬದುಕುತ್ತವೆ. ಇದನ್ನು ತುಂಬಾ ಜನ ಪೆಟ್ ಎಂದು ಮುದ್ದು ಮಾಡಿ, ಪ್ಯಾಂಟ್, ಶರ್ಟ್ ಹೊಲಿಸುತ್ತಾರೆ. ಆದರೆ ಇಂತಹ ನಾಯಿ ಯಾವಾಗಲೂ ಒಬ್ಬರ ಮೇಲೆ ಅವಲಂಬಿತವಾಗಿರಬೇಕು, ಇಲ್ಲವಾದಲ್ಲಿ ಅದಕ್ಕೆ ಬದುಕಲು ಆಗುವುದಿಲ್ಲ ಎಂದು ಶಮಂತ್‍ಗೆ ಹೇಳಿದ್ದಾರೆ.
Advertisement
Advertisement
ಅಲ್ಲಿ ಒಂದು ನರಿ ಇದೆ, ಇನ್ನೊಬ್ಬರ ತಪ್ಪುಗಳ ಮೇಲೆ ಸವಾರಿ ಮಾಡುತ್ತದೆ, ತನ್ನ ಸರಿಗಳ ಮೇಲೆ ಸವಾರಿ ಮಾಡಲ್ಲ. ಆದರೆ ಅದು ತುಂಬಾ ಬ್ರಿಲಿಯಂಟ್, ಜನರ ನಾಡಿ ಮಿಡಿತ ನೋಡಿಕೊಂಡು ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಆಟವಾಡುತ್ತಿದೆ ಎಂದು ಪ್ರಶಾಂತ್ ಸಂಬರಗಿ ಹೆಸರನ್ನು ಹೇಳಿದ್ದಾರೆ. ತುಂಬಾ ಅದ್ಭುತವಾದ ಹುಲಿಯೊಂದಿದೆ. ಆ ಹುಲಿ ಯಾವಾಗಲೂ ಫ್ರಿಡ್ಜ್ ಇಟ್ಟುಕೊಳ್ಳುವುದಿಲ್ಲ, ಹೊಟ್ಟೆ ಹಸಿವಾದಾಗ ಮಾತ್ರ ಬೇಟೆಯಾಡುತ್ತದೆ. ಬಾಕಿ ವಿಚಾರಗಳಲ್ಲಿ ತುಂಬಾ ಆರಾಮವಾಗಿರುತ್ತದೆ. ಅದಕ್ಕೆ ಬೇರೆನೂ ಗೊತ್ತಾಗಲ್ಲ ಅದೇ ಕೆಪಿ ಅರವಿಂದ್ ಎಂದು ಹೇಳಿದ್ದಾರೆ. ಆದರೆ ಆ ಹುಲಿ ಈ ಕೊನೇಯ ವಾರದಲ್ಲಿ ಸರ್ವೈವ್ ಆಗಬೇಕೆಂದರೆ ನನ್ನ ಬೇಟೆಯಲ್ಲಿ ತಪ್ಪಿದೆ, ಒನ್ ಸೈಡೆಡ್ ಆಗುತ್ತಿದೆ ಎನ್ನುವುದು ಅದಕ್ಕೆ ಅರಿವಾಗಬೇಕು ಎಂದು ಅರ್ಥವಾಗಬೇಕಿದೆ ಎಂದಿದ್ದಾರೆ.
Advertisement
ಒಂದು ಜಿಂಕೆ ಇದೆ ಅದಕ್ಕೆ ಅಲಂಕಾರವೇ ಒಳ್ಳೆಯ ಗುಣ, ವಿನಯ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ತುಂಬಾ ಅಮಾಯಕ ಎಂದು ಅನ್ನಿಸಿದ್ದು ದಿವ್ಯಾ ಸುರೇಶ್. ಎಷ್ಟೇ ಬೇಟೆಗಾರರು ಬಂದರೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮಥ್ರ್ಯವಿದೆ. ಆದರೆ ಆ ಜಿಂಕೆಗೆ ಸೋಲು ಗೆಲವು ಎರಡನ್ನೂ ಸಮಾನವಾಗಿ ತೆಗೆದುಕೊಳ್ಳುವ ಶಕ್ತಿ ಬೇಕು ಎಂದಿದ್ದಾರೆ. ಒಂದು ಮೊಲ ಇದೆ ಅದಕ್ಕೆ ವಯಸ್ಸು, ಆಯಸ್ಸು ಯಾವುದೂ ಗೊತ್ತಾಗಲ್ಲ, ಯಾವಾಗಲೂ ಏನಾದರೂ ಕೇಳುತ್ತಲೇ ಇರುತ್ತದೆ. ಅದನ್ನು ತಬ್ಬಿಕೊಂಡು ಮುದ್ದಾಡಬೇಕೆನ್ನಿಸುತ್ತದೆ. ಆದರೆ ಅದು ಯಾರಿಗೆ ವಾಸನೆ ಹಿಡಿದಿರುತ್ತದೆಯೋ ಅವರ ಜೊತೆ ಮಾತ್ರ ಇರುತ್ತದೆ ಎಂದು ಶುಭಾ ಪೂಂಜಾ ಬಗ್ಗೆ ಹೇಳಿದ್ದಾರೆ.
ಸಾರಂಗ ಇದೆ, ಅದು ನೋಡಕ್ಕೂ ಚೆಂದ, ವಾದ್ಯವಾಗುತ್ತದೆ. ಮಾತು ಕಡಿಮೆ ಆಡುತ್ತದೆ. ತನ್ನಪಾಡಿಗೆ ತಾನು ಹೋಗುತ್ತಿರುತ್ತದೆ. ಯಾವುದೇ ಪ್ರಭೇದ ಅಲ್ಲ. ಆದರೆ ಅದು ಸೌಂಡ್ ಮಾಡಲ್ಲ, ಅದು ಸದ್ದು ಮಾಡಿದರೆ ಸಾರಂಗಗಳು ಹಿಂಡಾಗಿ ಬರುತ್ತವೆ ಅವರೇ ವೈಷ್ಣವಿ ಎಂದಿದ್ದಾರೆ. ತುಂಬಾ ಚೆಂದದ ಸಾರಂಗ, ಮಾಡುವ ಕಡೆ ಶಬ್ದ ಮಾಡಬೇಕು. ಆಗ ಅದ್ಭುತವಾಗಿ ಕಾಣುತ್ತದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಇನ್ನೊಂದು ಮುದ್ದು ಕೋಣ ಇದೆ ಕೆಸರಲ್ಲಿ, ನದಿಯಲ್ಲಿ ಎಲ್ಲಾದರೂ ಹಾಕಿ, ಏನೂ ಹಾಕಿದರೂ ನಗಿಸುವುದೊಂದೇ ಅದರ ಗುಣ. ಏನು ಮಾಡಿದರೂ ನಿನ್ನ ಜೊತೆ ಚೆನ್ನಾಗಿರುತ್ತೇನೆ ಎನ್ನುತ್ತಿರುತ್ತದೆ, ಹಳ್ಳಿ ಹಕ್ಕಿ, ಪ್ರತಿಭಾವಂತ ಅದು ಮಂಜು ಪಾವಗಡ, ಅದಕ್ಕೊಂದು ಚೆಪ್ಪಾಳೆ ಎಂದಿದ್ದಾರೆ.