ಉದ್ಯಮಿಯ ಪ್ರೀತಿ ಬಲೆಯಲ್ಲಿ ರಾಜ ಬಲ್ಲಾಳದೇವ- ಯಾರು ಈ ಮಿಹೀಕಾ?

Public TV
2 Min Read
ranadaggubati

– ಸಹೋದರನ ಪ್ರೀತಿಗೆ ಕನ್ನಡತಿಯಿಂದ ವಿಶ್

ಹೈದರಾಬಾದ್: ಬಾಹುಬಲಿ ಚಿತ್ರದ ಬಲ್ಲಾಳದೇವ ಖ್ಯಾತಿಯ ನಟ ರಾಣಾ ದಗ್ಗುಬಾಟಿಯವರು ಮಾಡೆಲ್ ಕಮ್ ಉದ್ಯಮಿಯೊಬ್ಬರ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ.

ನಟ ರಾಣಾ ದಗ್ಗುಬಾಟಿಯವರ ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವನ ಪಾತ್ರ ಮಾಡಿ ಜನಮೆಚ್ಚುಗೆ ಪಡೆದವರು. ಈಗ ರಾಣಾ, ತಾನು ಪ್ರೀತಿಯಲ್ಲಿ ಸಿಲುಕಿರುವ ಬಗ್ಗೆ ಸ್ವತಃ ತಾವೇ ಇನ್‍ಸ್ಟಾಗ್ರಾಮ್ ಪೋಸ್ಟ್ ಹಾಕುವ ಮೂಲಕ ಖಚಿತಪಡಿಸಿದ್ದಾರೆ. ಹೌದು ಹೈದರಾಬಾದ್ ಮೂಲದ ಉದ್ಯಮಿ ಮಿಹೀಕಾ ಬಜಾಜ್ ಅವರ ಜೊತೆ ರಾಣಾ ಅವರಿಗೆ ಪ್ರೇಮಕುಂರವಾಗಿದೆ.

 

View this post on Instagram

 

And she said Yes 🙂 ❤️#MiheekaBajaj

A post shared by Rana Daggubati (@ranadaggubati) on

ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್‍ವೊಂದನ್ನು ಹಾಕಿರುವ ರಾಣಾ, ಅವಳು ಓಕೆ ಎಂದಳು ಎಂದು ಬರೆದು ಮಿಹೀಕಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ ಅವರ ಜೊತೆಗೆ ತೆಗೆದುಕೊಂಡ ಸೆಲ್ಫಿಯನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಆದರೆ ಕೂಡಲೇ ಕೆಲ ಅಭಿಮಾನಿಗಳು ರಾಣಾ ದಗ್ಗುಬಾಟಿ ಅವರೇ ಮಿಹೀಕಾ ಅವರಿಗೇ ಪ್ರಪೋಸ್ ಮಾಡಿದ್ದು, ಅವರು ಓಕೆ ಎಂದಿದ್ದಾರೆ ಅದಕ್ಕೆ ಈ ರೀತಿ ಪೋಸ್ಟ್ ಹಾಕಿದ್ದಾರೆ ಎಂದು ಹೇಳಿದ್ದಾರೆ.

https://www.instagram.com/p/B_jTGAWJbm5/?utm_source=ig_embed

ಯಾರು ಈ ಮಿಹೀಕಾ?
ರಾಣಾ ದುಗ್ಗುಬಾಟಿಯವರ ಪ್ರೇಯಸಿ ಮಿಹೀಕಾ ಅವರು ಹೈದರಾಬಾದ್ ಮೂಲದವರು. ಮಾಡೆಲಿಂಗ್ ಮಾಡಿಕೊಂಡು ಜೊತೆಗೆ ಅವರ ತಾಯಿ ಬಂಟಿ ಬಜಾಜ್ ಅವರ ಉದ್ಯಮವನ್ನು ನೋಡಿಕೊಳ್ಳುತ್ತಾರೆ. ಜೊತೆಗೆ ಒಂದು ಈವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದಾರೆ. ಇವರ ಮೂಲ ಹೈದರಬಾದ್ ಅದರೂ ಅವರು ಹೆಚ್ಚಾಗಿ ಇರುವುದು ಮುಂಬೈನಲ್ಲಿ. ಮಿಹೀಕಾ ಚೆಲ್ಸಿಯಾ ವಿಶ್ವವಿದ್ಯಾಲಯದಲ್ಲಿ ಇಂಟೀರಿಯರ್ ಡಿಸೈನಿಂಗ್ ಅಧ್ಯಯನ ಮಾಡಿದ್ದು, ಉದ್ಯಮಿ ಸಮರ್ತ್ ಬಜಾಜ್ ಅವರ ಸಹೋದರಿಯಾಗಿದ್ದಾರೆ.

https://www.instagram.com/p/BikgFSAFgTr/?utm_source=ig_embed

ಮಿಹೀಕಾ ಹೆಚ್ಚಾಗಿ ಮುಂಬೈನಲ್ಲಿ ಒಡನಾಟ ಹೊಂದಿರುವ ಕಾರಣ ಬಾಲಿವುಡ್ ಮಂದಿಯ ಜೊತೆಗೆ ಗುರುತಿಸಿಕೊಂಡಿದ್ದರು. ಬಾಲಿವುಡ್ ಬೆಡಗಿ ಸೋನಮ್ ಕಪೂರ್ ಅವರ ಗೆಳತಿಯಗಿರುವ ಮಿಹೀಕಾ ಕೆಲ ಪಾರ್ಟಿ ಹಾಗೂ ಮದುವೆಗಳಲ್ಲಿ ಅವರ ಜೊತೆ ಕಾಣಿಸಿಕೊಂಡಿದ್ದರು. ಹೀಗಾಗಿ ಇವರ ಪ್ರೀತಿಗೆ ಬಾಲಿವುಡ್ ಮಂದಿ ಕೂಡ ವಿಶ್ ಮಾಡಿದ್ದು, ನಟ ಅನಿಲ್ ಕಪೂರ್, ನನ್ನ ಹೈದರಾಬಾದ್ ಮಗನಿಗೆ ಶುಭಾಶಯಗಳು. ನೀವು ಪ್ರೀತಿ ಮಾಡುತ್ತಿರುವುದು ನನಗೆ ಖುಷಿಯಿದೆ ಎಂದಿದ್ದಾರೆ.

https://www.instagram.com/p/CAFoFzHjJnI/

ಪ್ರೀತಿಯ ಸಹೋದರನಿಗೆ ಕನ್ನಡತಿ ವಿಶ್
ರಾಜ ಬಲ್ಲಾಳದೇವನ ಪ್ರೀತಿಗೆ ರಾಣಿ ದೇವಸೇನಾ ಕೂಡ ವಿಶ್ ಮಾಡಿದ್ದು, ಶುಭಾಶಯಗಳು ಸಹೋದರ ಹಾಗೂ ಮಿಹೀಕಾ ಬಜಾಜ್, ನಿಮಗಿಬ್ಬರಿಗೂ ಒಳ್ಳೆಯದಾಗಲಿ. ನಮ್ಮೆಲ್ಲರ ಪ್ರೀತಿ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಟಿ ತಮನ್ನಾ ಭಾಟಿಯಾ, ಶೃತಿ ಹಾಸನ್, ಕೃತಿ ಕರಬಂಧ, ಸಮಂತಾ, ನಟ ಪುಲ್ಕಿತ್ ಸಮ್ರಾಟ್ ಅವರು ಕೂಡ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.

rana daggubati

ತಮ್ಮ ವೈಯಕ್ತಿಕ ಜೀವನವನ್ನು ಮೀಡಿಯಾದಿಂದ ದೂರ ಇಟ್ಟಿದ್ದ ರಾಣಾ ಹೆಸರು ಈ ಹಿಂದೆ ನಟಿ ತ್ರಿಶಾ ಅವರ ಜೊತೆ ಕೇಳಿ ಬಂದಿತ್ತು. ಈ ವಿಚಾರವಾಗಿ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ್ದ ರಾಣಾ, ನಾನು ತ್ರಿಶಾ ಹೆಚ್ಚು ಸಮಯಗಳ ಕಾಲ ಸ್ನೇಹಿತರಾಗಿದ್ದವು. ಆದರೆ ಸ್ವಲ್ಪ ಸಮಯ ಡೇಟ್ ಮಾಡಿದ್ದೇವೆ. ಆದರೆ ಅದು ವರ್ಕ್ ಆಗಲಿಲ್ಲ ಎಂದು ಹೇಳಿದ್ದರು.

Share This Article