– ಕಳಪೆ ಕಾಮಗಾರಿ ಮರೆಮಾಚಲು ಅಧಿಕಾರಿಗಳ ತೇಪೆ ಹಚ್ಚೋ ಕೆಲಸ
ಬೆಂಗಳೂರು: ನಗರದ ಹೊರವಲಯದ ನೆಲಮಂಗಲ ಸಮೀಪದ ದಾಸನಪುರದ ಮಾರುಕಟ್ಟೆ ಕಟ್ಟಡ ಉದ್ಘಾಟನೆಗೂ ಮುನ್ನವೇ ಬಿರುಕು ಬಿಟ್ಟಿದೆ. ಮಳೆ ಬಂದ್ರೆ ಸೋರುವ ಸ್ಥಿತಿಯಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇದೀಗ ಅಧಿಕಾರಿಗಳು ಕಳಪೆ ಕಾಮಗಾರಿ ಮರೆ ಮಾಚಲು ತೇಪೆ ಹಚ್ಚುವ ಕೆಲಸ ಆರಂಭಿಸಿದ್ದಾರೆ.
Advertisement
ರೈತರಿಗೆ ಹಾಗೂ ವರ್ತಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡಿ ಕಟ್ಟಿದ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿತ್ತು. ಈಗಾಗಗಲೇ ಯಶವಂತಪುರದಿಂದ ಇಲ್ಲಿಗೆ ಶಿಫ್ಟ್ ಮಾಡುವ ಆತುರದಲ್ಲಿರುವ ಎಪಿಎಂಸಿ ಅಧಿಕಾರಿಗಳು ಕಟ್ಟಡದ ಅವ್ಯವಸ್ಥೆ ನೋಡಿ, ಕಳಪೆ ಕಾಮಗಾರಿಯನ್ನ ಮತ್ತೆ ಸುಣ್ಣ ಬಣ್ಣ ಮಾಡಿ ತೇಪೆ ಕೆಲಸಕ್ಕೆ ಮುಂದಾಗಿದ್ದಾರೆ. ಇದಕ್ಕೆ ಕೆಂಪೇಗೌಡ ಮಾರ್ಕೆಟ್ ಎಪಿಎಂಸಿ ಯಾರ್ಡ್ ವರ್ತಕರ ಸಂಘದ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ಕಳಪೆ ಗುಣಮಟ್ಟದ ಕಟ್ಟಡದಲ್ಲಿ ಬಂದ್ರೆ ಯಾವಾಗ ಬೀಳುತ್ತೊ ಎಂಬ ಭಯ ಶುರುವಾಗಿದೆ. ಮಾರುಕಟ್ಟೆಗೆ ಬಂದ ರೈತರಿಗೆ ಸಮಸ್ಯೆಯಾದ್ರೆ ಯಾರು ಹೊಣೆ? ಅಲ್ಲದೆ ಯಾವುದೇ ಮೂಲಭೂತ ಸೌಕರ್ಯಗಳು ಸಹ ಇಲ್ಲಿ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸಾಕಷ್ಟು ಅವ್ಯವಸ್ಥೆಯಿಂದ ಕೂಡಿದ್ದು ತರಕಾರಿ ಮಾರುಕಟ್ಟೆ ಉದ್ಘಾಟನೆ ಮುನ್ನವೇ ಕಳಪೆ ಕಾಮಗಾರಿಯಿಂದ ಭಯದ ವಾತಾವರಣ ಉಂಟಾಗಿದೆ ಎಂದು ವರ್ತಕರು ಆಕ್ರೋಶ ಹೊರಹಾಕಿದ್ದಾರೆ.
Advertisement
ಕೆಂಪೇಗೌಡ ಮಾರ್ಕೆಟ್ ಎಪಿಎಂಸಿ ಯಾರ್ಡ್ ಅಧ್ಯಕ್ಷ ಎಂ.ಗೋವಿಂದಪ್ಪ, ಕಾರ್ಯಧರ್ಶಿ ಚಿಕ್ಕೇಗೌಡ, ಸದಸ್ಯ ದೇವರಾಜು, ಡಿಸ್ಕೊ ರಾಜು, ರಾಮಕೃಷ್ಣಪ್ಪ ಬಿಆರ್.ಮಹಂತೇಶ್ ಕಟ್ಟಡ ಪರಿಶೀಲಿಸಿ, ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಗುಡುಗಿದರು.