ಲಕ್ನೋ: ಉತ್ತರ ಪ್ರದೇಶದಲ್ಲಿ ಲಾಕ್ಡೌನ್ ಅವಧಿಯನ್ನ ವಿಸ್ತರಿಸಲಾಗಿದೆ. ಮೇ 10ರ ಬೆಳಗ್ಗೆ 7 ಗಂಟೆವರೆಗೂ ಇಡೀ ರಾಜ್ಯದಲ್ಲಿ ಲಾಕ್ಡೌನ್ ಇರಲಿದೆ. ನಾಳೆ ಬೆಳಗ್ಗೆ ಲಾಕ್ಡೌನ್ ಅಂತ್ಯವಾಗಲಿತ್ತು. ಆದ್ರೆ ಕೊರೊನಾ ನಿಯಂತ್ರಣಕ್ಕಾಗಿ ಸೋಮವಾರದವರೆಗೂ ಸದ್ಯದ ಪರಿಸ್ಥಿತಿ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ.
Advertisement
ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಪಂಚಾಯ್ತಿ ಚುನಾವಣೆ ಬಳಿಕ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಸರ್ಕಾರ ಲಾಕ್ಡೌನ್ ಆದೇಶವನ್ನ ವಿಸ್ತರಿಸಿದೆ ಎಂದು ವರದಿಯಾಗಿದೆ. ಕೇವಲ ಅಗತ್ಯ ಸೇವೆ ಮತ್ತು ಇ ಕಾಮರ್ಸ್ ಗೆ ಮಾತ್ರ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.
Advertisement
Advertisement
ಜಿಲ್ಲಾಡಳಿತಗಳು ಗ್ರಾಮೀಣ ಭಾಗಗಳಲ್ಲಿ ಲಸಿಕಾ ಆಭಿಯಾನ ಮತ್ತು ಸ್ಯಾನಿಟೈಸನ್ ಗೊಳಿಸುವ ಕೆಲಸವನ್ನು ವೇಗಗೊಳಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಇದಕ್ಕೂ ಮೊದಲು ಬಿಹಾರದಲ್ಲಿ ಮೇ 15ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ.
Advertisement