ಲಕ್ನೋ: ಉತ್ತರ ಪ್ರದೇಶ ಸರ್ಕಾರ ಮದರಸಾ ಆಧುನೀಕರಣಕ್ಕಾಗಿ ಬಜೆಟ್ನಲ್ಲಿ 479 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.
ಸರ್ಕಾರದ ನಿರ್ಧಾರದ ನಗ್ಗೆ ಮದರಸಾ ಬೋರ್ಡ್ ಅಧಿಕಾರಿಗಳು ಪ್ರತಿಕ್ರಿಯಿಸಿ ಈ ಹಣ ಮದರಸಾ ಅಭಿವೃದ್ಧಿಗೆ ಬಳಕೆಯಾಗಲಿದೆ. ವಿಶೇಷವಾಗಿ ಆಧುನಿಕ ವಿಷಯಗಳಾದ ಗಣಿತ, ಇಂಗ್ಲಿಷ್, ಹಿಂದಿ, ವಿಜ್ಞಾನ, ಗೃಹ ವಿಜ್ಞಾನ ವಿಷಯಗಳನ್ನು ಮದರಸಾದಲ್ಲಿ ಬೋಧಿಸಲಾಗುತ್ತದೆ ಎಂದು ಅವರು ತಿಳಿಸಿದರು.
Advertisement
Advertisement
ಮದರಸಾ ಆಧುನೀಕರಣ ಸಂಬಂಧ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಈಗಾಗಲೇ ಒಟ್ಟು 7,500 ಮಂದಿ ಶಿಕ್ಷಕರನ್ನು ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಅನುದಾನವನ್ನು ಬಳಸಿಕೊಂಡು ಮತ್ತಷ್ಟು ಶಿಕ್ಷಕರನ್ನು ನೇಮಿಸಲು ಸರ್ಕಾರ ಮುಂದಾಗಿದೆ.
Advertisement
ಸರ್ಕಾರಿ ದಾಖಲೆಗಳ ಪ್ರಕಾರ ಒಟ್ಟು 16 ಸಾವಿರ ಮದರಸಾಗಳು ನೋಂದಣಿಯಾಗಿದೆ. ಇದರಲ್ಲಿ 550 ಅನುದಾನಿತ ಮದರಸಾಗಳಿವೆ. ಒಟ್ಟು 20 ಲಕ್ಷ ವಿದ್ಯಾರ್ಥಿಗಳು ಉತ್ತರ ಪ್ರದೇಶದಲ್ಲಿ ಮದರಸಾಗಳಿಗೆ ಅಧ್ಯಯನಕ್ಕೆ ತೆರಳುತ್ತಿದ್ದಾರೆ.