ಗದಗ: ಮಹಾಮಾರಿ ಕೊರೊನಾ ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಕೊರೊನಾ ಬಿಸಿ ಉತ್ತರ ಕರ್ನಾಟಕದ ಏಕೈಕ ಮೃಗಾಲಯ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ದಾನಿಗಳು ಮುಂದೆ ಬಂದು ಪ್ರಾಣಿಗಳನ್ನು ದತ್ತು ಪಡೆಯುವಂತೆ ಅರಣ್ಯ ಇಲಾಖೆ ಮನವಿ ಮಾಡ್ತಿದೆ.
Advertisement
ಹೌದು, ಉತ್ತರ ಕರ್ನಾಟಕದ ಏಕೈಕ ಸಣ್ಣ ಮೃಗಾಲಯವೆಂದೇ ಹೆಸರಾಗಿರೋ ಬಿಂಕದಕಟ್ಟಿ ಝೂ ಸಾಕಷ್ಟು ಆಕರ್ಷಣೀಯ ಕೇಂದ್ರಬಿಂದು. ಈ ಮೃಗಾಲಯಕ್ಕೆ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿ ಪ್ರಿಯರು ಬರ್ತಾಯಿದ್ರು. ಆದರೆ ಈ ಕೊರೋನಾ ಅಟ್ಟಹಾಸದಿಂದ ಮೃಗಾಲಯಕ್ಕೆ ಬರುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಹೀಗಾಗಿ ಗದಗನ ಬಿಂಕದಕಟ್ಟಿ ಮೃಗಾಲಯಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇಲ್ಲಿನ ಪ್ರಾಣಿಗಳನ್ನು ಸಾಕುವುದು ಅರಣ್ಯ ಇಲಾಖೆಗೆ ಕಷ್ಟ ಸಾಧ್ಯವಾಗಿದೆ. ಅದರಲ್ಲೂ ಮಾಂಸಾಹಾರಿ ಪ್ರಾಣಿಗಳನ್ನು ಸಲುವುದು ಮತ್ತಷ್ಟು ಸಮಸ್ಯೆಯಾಗಿದೆ.
Advertisement
Advertisement
ಸದ್ಯ ಎರಡು ಹುಲಿ ಹಾಗೂ ಆರು ಚಿರತೆಗಳು ಮೃಗಾಲಯದಲ್ಲಿ ಆಶ್ರಯ ಪಡೆದುಕೊಂಡಿವೆ. ಆ ಪೈಕಿ ಒಂದು ಹುಲಿ ಹಾಗೂ ಎರಡು ಚಿರತೆಗಳನ್ನು ಪ್ರಾಣಿ ಪ್ರಿಯರು ಈಗಾಗಲೇ ದತ್ತು ಪಡೆದುಕೊಂಡಿದ್ದಾರೆ. ಉಳಿದ ಒಂದು ಹುಲಿ ಹಾಗೂ ನಾಲ್ಕು ಚಿರತೆಗಳನ್ನು ದತ್ತು ಪಡೆಯುವಂತೆ ಮೃಗಾಲಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
ಒಂದು ಹುಲಿಗೆ ಆಹಾರ ಸೇರಿದಂತೆ ಹಾಗೂ ಅದರ ಸಂಪೂರ್ಣ ಆರೈಕೆ ಮಾಡಲು ವರ್ಷಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚ ತಗುಲುತ್ತದೆ. ಹಾಗೇ ಒಂದು ಚಿರತೆ ಆಹಾರ ಹಾಗೂ ಆರೈಕೆ ಮಾಡಲು 35 ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ಸದ್ಯ ಒಂದು ಹುಲಿ ಹಾಗೂ ನಾಲ್ಕು ಚಿರತೆಯನ್ನು ದತ್ತು ನೀಡಲು ಅರಣ್ಯ ಇಲಾಖೆ ಮುಂದಾಗಿದ್ದು ಕೊರೊನಾ ಹಾವಳಿ ಇಲ್ಲದಿದ್ದರೆ ಮೃಗಾಲಯಯಕ್ಕೆ ಬರುವ ಪ್ರಾಣಿ ಪ್ರಿಯರು ನೀಡುವ ಟಿಕೇಟ್ ದರದಲ್ಲಿ ಅವುಗಳಿಗೆ ಆಹಾರ ಹಾಗೂ ಆರೈಕೆ ಮಾಡಲಾಗುತ್ತಿತ್ತು. ಸದ್ಯ ಪ್ರಾಣಿ ವೀಕ್ಷಣೆ ಮಾಡಲು ಬರುವವರ ಸಂಖ್ಯೆ ಬಹಳ ವಿರಳವಾಗಿದೆ. ಹೀಗಾಗಿ ಆರ್ಥಿಕವಾಗಿ ಸದೃಢರಾದ ನಾಗರಿಕರು ಹಾಗೂ ಪ್ರಾಣಿ ಪ್ರಿಯರು ದತ್ತು ಪಡೆಯಲು ಮುಂದಾಗಬೇಕಾಗಿದೆ.
ಪ್ರಮುಖವಾಗಿ ಮಾಂಸಾಹಾರಿ ಪ್ರಾಣಿಗಳನ್ನು ದಾನಿಗಳು ದತ್ತು ಪಡೆಯುವಂತೆ ಮೃಗಾಲಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸರ್ಕಾರ ಕೂಡ ಇಂತಹ ಕಾರ್ಯಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಅನುದಾನ ಬಿಡುಗಡೆ ಮಾಡಬೇಕಾಗಿದೆ.