Connect with us

Corona

ಉತ್ತರ ಕನ್ನಡದಲ್ಲಿ ಇಂದು 8 ಕೊರೊನಾ ಪ್ರಕರಣ ಪತ್ತೆ- 7 ಜನ ಗುಣಮುಖ

Published

on

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಎಂಟು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಏಳು ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಮಹಾರಾಷ್ಟ್ರದಿಂದ ಭಟ್ಕಳಕ್ಕೆ ಆಗಮಿಸಿದ 5 ಜನ, ಉತ್ತರ ಪ್ರದೇಶದಿಂದ ಭಟ್ಕಳಕ್ಕೆ ಬಂದ ಒಬ್ಬರು, ದೆಹಲಿಯಿಂದ ಶಿರಸಿಗೆ ವಾಪಾಸಾಗಿದ್ದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ದೆಹಲಿಯಿಂದ ಹಿಂತಿರುಗಿದ 17 ವರ್ಷದ ಹುಡುಗ ರೋಗಿ ನಂ.8715, 43 ವರ್ಷದ ಮಹಿಳೆ ರೋಗಿ ನಂ.8716, ಮಹರಾಷ್ಟ್ರ ದಿಂದ ಹಿಂತಿರುಗಿದ 69 ವರ್ಷದ ಮಹಿಳೆ ರೋಗಿ ನಂ.8717, 14 ವರ್ಷದ ಬಾಲಕ ರೋಗಿ ನಂ.8719, 42 ವರ್ಷದ ಮಹಿಳೆ ರೋಗಿ ನಂ.8720, 19 ವರ್ಷದ ಯುವತಿ ರೋಗಿ ನಂ.8721, 45 ವರ್ಷದ ಪುರುಷ ರೋಗಿ ನಂ.8722, ಉತ್ತರ ಪ್ರದೇಶದಿಂದ ಹಿಂತಿರುಗಿದ 50 ವರ್ಷದ ಪುರುಷ ರೋಗಿ ನಂ.8718 ಗೆ ಸೊಂಕು ದೃಢಪಟ್ಟಿದೆ.

ಸೋಂಕಿತರಿಗೆ ಕಾರವಾರದ ಕಿಮ್ಸ್ ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 138ಕ್ಕೆ ಏರಿಕೆಯಾಗಿದ್ದು, 108 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 39 ಸಕ್ರಿಯ ಪ್ರಕರಣಗಳಿವೆ.

ದುಬೈನಿಂದ ಬಂದವರಿಗೆ ಹೋಮ್ ಕ್ವಾರಂಟೈನ್

ದುಬೈನಿಂದ ಬಾಡಿಗೆ ವಿಮಾನದಲ್ಲಿ ಜೂನ್ 13ರಂದು ಭಟ್ಕಳಕ್ಕೆ ಬಂದು ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ 184 ಜನರ ಪೈಕಿ 124 ಮಂದಿಯನ್ನು ಹೋಮ್ ಕ್ವಾರಂಟೈನ್ ಗೆ ಕಳುಹಿಸಲಾಗಿದೆ. 7 ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ಮುಗಿದ ಹಿನ್ನೆಲೆಯಲ್ಲಿ ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದೆ. ಹೀಗಾಗಿ ಹೋಮ್ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ.

ಎರಡು ಖಾಸಗಿ ಹೋಟೆಲ್ ಹಾಗೂ ಅಂಜುಮನ್ ಕಾಲೇಜಿನ ವಿದ್ಯಾರ್ಥಿ ನಿಲಯಗಳಲ್ಲಿ ಇವರನ್ನು ಕ್ವಾರಂಟೈನ್ ಮಾಡಿತ್ತು. ಈ ಪೈಕಿ ಓರ್ವ ಮಹಿಳೆಗೆ ಶನಿವಾರ ಸೋಂಕು ದೃಢಪಟ್ಟಿದೆ. ಇವರನ್ನು ಹೊರತುಪಡಿಸಿದರೆ 124 ಮಂದಿಗೆ ನೆಗೆಟಿವ್ ಬಂದಿದ್ದು, 59 ಮಂದಿಯ ವರದಿ ಇನ್ನೂ ಬರಬೇಕಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ, ಗಂಟಲು ದ್ರವದ ಪರೀಕ್ಷಾ ವರದಿ ಬರುವವರೆಗೂ ಕ್ವಾರಂಟೈನ್ ನಲ್ಲಿಡಬೇಕಾಗಿರುವುದರಿಂದ ಎಲ್ಲ 59 ಮಂದಿ ಸದ್ಯ ಕ್ವಾರಂಟೈನ್ ನಲ್ಲಿದ್ದಾರೆ.

ಏಳು ಜನ ಗುಣಮುಖ ಡಿಸ್ಚಾರ್ಜ್
ಉತ್ತರ ಕನ್ನಡ ಜಿಲ್ಲೆಯ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್-19 ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ಮಂದಿ ಗುಣಮುಖರಾಗಿದ್ದು, ಭಾನುವಾರ ಡಿಸ್ಚಾರ್ಜ್ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 106ಕ್ಕೆ ಏರಿಕೆಯಾಗಿದೆ.

ಶಿರಸಿ ಮೂಲದ 63 ವರ್ಷದ ಮಹಿಳೆ, 62 ವರ್ಷದ ಪುರುಷ, ಜೊಯಿಡಾದ 24 ವರ್ಷದ ಯುವಕ, ದಾಂಡೇಲಿಯ 9 ವರ್ಷದ ಬಾಲಕಿ, ಹಳಿಯಾಳದ 12 ವರ್ಷದ ಬಾಲಕ ಹಾಗೂ 45 ವರ್ಷದ ಪುರುಷ ಇಂದು ಡಿಸ್ಚಾರ್ಜ್ ಆಗಿದ್ದಾರೆ.

Click to comment

Leave a Reply

Your email address will not be published. Required fields are marked *