ಡೆಹ್ರಾಡೂನ್: ತೀರ್ಥ್ ಸಿಂಗ್ ರಾವತ್ ರಾಜೀನಾಮೆಯಿಂದ ನೀಡಿದ್ದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸ್ಥಾನಕ್ಕೆ ಪುಷ್ಕರ್ ಸಿಂಗ್ ಧಾಮಿ ಅವರನ್ನು ಆಯ್ಕೆ ಮಾಡಲಾಗಿದ್ದು, ಪಕ್ಷದ ಕಚೇರಿಯಲ್ಲಿ ನಡೆದ ಸಿಎಲ್ಪಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
Pushkar Singh Dhami to take oath as 11th Chief Minister of Uttarakhand later today pic.twitter.com/vCakaJSPCg
— ANI (@ANI) July 3, 2021
Advertisement
Advertisement
ತೀರ್ಥ್ ಸಿಂಗ್ ರಾವತ್ ನಿನ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆ ಇಂದು ಹೊಸ ಶಾಸಕಾಂಗ ಪಕ್ಷದ ನಾಯಕ ಆಯ್ಕೆಗೆ ವೀಕ್ಷಕರಾಗಿ ಹೈಕಮಾಂಡ್ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಕಳುಹಿಸಿತ್ತು. ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ ನರೇಂದ್ರ ಸಿಂಗ್ ತೋಮರ್ ಶಾಸಕರ ಒಪ್ಪಿಗೆ ಮೇರೆಗೆ ಪುಷ್ಕರ್ ಸಿಂಗ್ ಧಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್ ಮುಂದಿನ ಮುಖ್ಯಮಂತ್ರಿ ಯಾರು?
Advertisement
Advertisement
Bharatiya Janta Party names Pushkar Singh Dhami as the next Uttarakhand Chief Minister pic.twitter.com/aqAHUNQB5u
— ANI (@ANI) July 3, 2021
ಖತೀಮ್ ಕ್ಷೇತ್ರದ ಹಾಲಿ ಶಾಸಕರಾಗಿರುವ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡನ ಹತ್ತನೇ ಸಿಎಂ ಆಗಿ ಶೀಘ್ರದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಿಎಲ್ಪಿ ಸಭೆಯಲ್ಲಿ ಸರ್ವಾನುಮತದಿಂದ ಪುಷ್ಕರ್ ಸಿಂಗ್ ಧಾಮಿ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಅಧಿಕಾರ ವಹಿಸಿಕೊಂಡ 4 ತಿಂಗಳಿಗೆ ಉತ್ತಾರಖಂಡ ಸಿಎಂ ರಾಜೀನಾಮೆ
Uttarakhand: We’re happy with this decision. We got a young leader. We’ll win going to win 2022 Assembly elections with a better margin: BJP MP Ajay Bhatt after Pushkar Singh Dhami appointed as State BJP legislature party leader pic.twitter.com/LGcyDAgjXc
— ANI (@ANI) July 3, 2021
ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 4 ತಿಂಗಳಿಗೆ ತೀರ್ಥ್ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ. ರಾವತ್ ಉತ್ತರಾಖಂಡದ ಮುಖ್ಯಮಂತ್ರಿಯಾಗಿ 2021ರ ಮಾರ್ಚ್ ತಿಂಗಳಲ್ಲಿ ಅಧಿಕಾರವಹಿಸಿಕೊಂಡಿದ್ದರು. ಆದಾದ ಬಳಿಕ ಇದೀಗ ರಾಜೀನಾಮೆಗೆ ಮುಂದಾಗಿದ್ದಾರೆ. ಈ ಕುರಿತು ಮಾತನಾಡಿರುವ ರಾವತ್, ಸಾಂವಿಧಾನಿಕ ಬಿಕ್ಕಟ್ಟಿನಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ. ಕೊರೊನಾದಿಂದಾಗಿ ಬೈ ಎಲೆಕ್ಷನ್ ನಡೆಯದೆ ಇರುವುದರಿಂದಾಗಿ ಈ ನಿರ್ಧಾರ ಸರಿಯೆಂದು ಭಾವಿಸುತ್ತಿದ್ದೇನೆ ಎಂದಿದ್ದರು. ಇದೀಗ ಮುಖ್ಯ ಮಂತ್ರಿ ಸ್ಥಾನಕ್ಕೆ ಪುಷ್ಕರ್ ಸಿಂಗ್ ಧಾಮಿ ಆಯ್ಕೆಯಾಗಿದ್ದಾರೆ.
My party has appointed a common worker, son of an ex-serviceman, who was born in Pithoragarh to serve the state. We’ll work together for people’s welfare. We accept the challenge of serving people with the help of others, in a short time span: Pushkar Singh Dhami#Uttarakhand pic.twitter.com/czeQOR6Ob3
— ANI (@ANI) July 3, 2021