– 12 ಗಂಟೆಯಲ್ಲಿ ಕಂದಮ್ಮನ ರಕ್ಷಣೆ
– ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಪೊಲೀಸರ ಮಿಂಚಿನ ಕಾರ್ಯಾಚರಣೆ
ಉಡುಪಿ: ಕರಾವಳಿ ಬೈಪಾಸ್ ಬಳಿಯ ಕೂಲಿ ಕಾರ್ಮಿಕರ ಕಾಲೋನಿಯಲ್ಲಿ ಮಗುವಿನ ಅಪಹರಣ ನಡೆದು 12 ಗಂಟೆಯೊಳಗೆ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಕುಮುಟಾ ರೈಲು ನಿಲ್ದಾಣದಲ್ಲಿ ಆರೋಪಿ ಪರಶುರಾಮನನ್ನು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಎರಡು ವರ್ಷ ನಾಲ್ಕು ತಿಂಗಳ ಮಗುವನ್ನು ರಕ್ಷಿಸಲಾಗಿದೆ. ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಮಗುವಿನ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
Advertisement
Advertisement
ಘಟನೆ ವಿವರ
ಬಾಗಲಕೋಟೆ ಮೂಲದ ಮುಧೋಳ ತಾಲೂಕಿನ ಭಾರತಿ ಮತ್ತು ಅರುಣ್ ದಂಪತಿ ಉಡುಪಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಪಕ್ಕದ ಗುಡಿಸಲಿನಲ್ಲಿದ್ದ ಪರಶು ಚಹಾ ಕುಡಿಸುತ್ತೇನೆ ಎಂದು 2.4 ವರ್ಷದ ಶಿವರಾಜ್ ನನ್ನು ಎತ್ತಿಕೊಂಡು ಹೋಗಿದ್ದಾನೆ. ಆರೋಪಿ ಬಾಗಲಕೋಟೆಯ ಪರಶು ಎಂಬಾತ ಅಪಹರಿಸಿದ್ದಾನೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಉಡುಪಿ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣ- ಏಳು ಮಂದಿ ಚಿನ್ನ ಚೋರರು ಅಂದರ್!
Advertisement
Advertisement
ಮಗು ಅಪಹರಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಲಾಗಿತ್ತು. ಪರಶು ಎಂಬಾತ ಮಗುವನ್ನು ಎತ್ತಿಕೊಂಡು ನಗರದಿಂದ ಕುಂದಾಪುರ ಕಡೆ ಬಸ್ನಲ್ಲಿ ಹೋಗಿರುವುದು ತಿಳಿದುಬಂದಿದೆ. ಬಸ್ಸಿನ ನಿರ್ವಾಹಕರನ್ನು ವಿಚಾರಿಸಿದಾಗ ಸಂತೆ ಕಟ್ಟೆಯಲ್ಲಿ ಮಗುವಿನೊಂದಿಗೆ ಇಳಿದಿದ್ದಾನೆ. ಅಲ್ಲಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಸ್ ಹತ್ತಿ ಹೋಗಿದ್ದಾನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ದ.ಕನ್ನಡದ ಉಜಿರೆಯ ಬಾಲಕನ ಕಿಡ್ನ್ಯಾಪ್ ಸುಖಾಂತ್ಯ – 6 ಮಂದಿ ಅರೆಸ್ಟ್
ಕಿಡ್ನಾಪ್ ಪ್ರಕರಣ ಸುಖಾಂತ್ಯ
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇಳಿದ ಪರಶು ಮಗುವಿನ ಜೊತೆ ಕುಮಟವರೆಗೆ ರೈಲಿನಲ್ಲಿ ಹೋಗಿದ್ದಾನೆ. ಅಷ್ಟರಲ್ಲಿ ಪೊಲೀಸರು ಎಲ್ಲಾ ಸಿಸಿಟಿವಿ ದೃಶ್ಯ ಜಾಲಾಡಿ, ಬಸ್ ನಿಲ್ದಾಣ, ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಿ ಕುಮುಟಾ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿ ಮಗುವಿನ ರಕ್ಷಣೆ ಮಾಡಿದ್ದಾರೆ.