– 140 ಗ್ರಾಂದ ಏಳು ಲಕ್ಷ ಮೌಲ್ಯದ ಕಿರೀಟ
ಬೆಂಗಳೂರು: ಉಡುಗೊರೆಯಾಗಿ ನೀಡಿದ್ದ 140 ಗ್ರಾಂ ತೂಕವುಳ್ಳ ಚಿನ್ನದ ಕಿರೀಟವನ್ನ ಡಿಸಿಎಂ ಗೋವಿಂದ ಕಾರಜೋಳ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ನೀಡಿದ್ದಾರೆ.
ಚಿನ್ನದ ಕಿರೀಟ ಹಸ್ತಾಂತರಿಸಿದ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿಗಳು, ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದ ಜನರು ಪ್ರೀತಿಯಿಂದ ಏಳು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ನೀಡಿದ್ದರು. ಇದೀಗ ನಿಯಮಗಳ ಪ್ರಕಾರ ವಿಜಯಭಾಸ್ಕರ್ ಅವರ ಮೂಲಕ ಉಡುಗೊರೆಯನ್ನ ಸರ್ಕಾರಕ್ಕೆ ಹಸ್ತಾಂತರಿಸಿದ್ದೇನೆ ಎಂದು ತಿಳಿಸಿದರು. ಚಿನ್ನದ ಕಿರೀಟ ಹಸ್ತಾಂತರಿಸಿದ ಕುರಿತು ಟ್ವಿಟ್ಟರ್ ಮೂಲಕ ಸಹ ಮಾಹಿತಿ ನೀಡಿದ್ದಾರೆ.
Advertisement
ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮದಸ್ಥರು ಙಗೆ ಸಮರ್ಪಿಸಿದ್ದ ಬಂಗಾರದ ಕಿರೀಟವನ್ನು ಇಂದು ಮುಖ್ಯಕಾರ್ಯದರ್ಶಿಯರ ಮೂಲಕ ಸರ್ಕಾರಕ್ಕೆ ಒಪ್ಪಿಸಿದೆ.
ನನ್ನ ಹುಟ್ಟೂರು ಕಾರಜೋಳ ಗ್ರಾಮದ ಇಡೀ ಗ್ರಾಮಸ್ಥರು ಅತ್ಯಂತ ಪ್ರೀತಿ ಅಭಿಮಾನದಿಂದ 140 ಗ್ರಾಂ ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು. 1/3 pic.twitter.com/2FSTWeOsDQ
— Govind M Karjol (@GovindKarjol) December 10, 2020
Advertisement
ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮಸ್ಥರು ನನಗೆ ಸಮರ್ಪಿಸಿದ್ದ ಬಂಗಾರದ ಕಿರೀಟವನ್ನು ಇಂದು ಮುಖ್ಯಕಾರ್ಯದರ್ಶಿಯರ ಮೂಲಕ ಸರ್ಕಾರಕ್ಕೆ ಒಪ್ಪಿಸಿದೆ. ನನ್ನ ಹುಟ್ಟೂರು ಕಾರಜೋಳ ಗ್ರಾಮದ ಇಡೀ ಗ್ರಾಮಸ್ಥರು ಅತ್ಯಂತ ಪ್ರೀತಿ ಅಭಿಮಾನದಿಂದ 140 ಗ್ರಾಂ ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು. ಕಾರಜೋಳ ಗ್ರಾಮದ ಅಭಿವೃದ್ಧಿಗಾಗಿ ರೂಪಿಸಿ ಅನುಷ್ಟಾನ ಗೊಳಿಸಿದ ಯೋಜನೆಗಳು, ನೀರಾವರಿ ಯೋಜನೆಗಳ ಅನುಷ್ಟಾನ, ಗ್ರಾಮದ ಮನೆಯ ಮಗನು ಉಪಮುಖ್ಯಮಂತ್ರಿಯಾಗಿರುವುದಕ್ಕೆ ಅತ್ಯಂತ ಪ್ರೀತಿ ಗೌರವದಿಂದ ಗ್ರಾಮಸ್ಥರು ಸನ್ಮಾನಿಸಿದ್ದರು. ಕಳೆದ 6 ವರ್ಷಗಳಿಂದ ಸನ್ಮಾನ ಮಾಡಲು ಪ್ರಯತ್ನಿಸುತ್ತಿದ್ದರು. ಇದನ್ನೂ ಓದಿ: ನಮೋ ಹುಟ್ಟುಹಬ್ಬಕ್ಕೆ ಹನುಮನಿಗೆ 1.25 ಕೆಜಿ ತೂಕದ ಚಿನ್ನದ ಕಿರೀಟ ನೀಡಿದ ಅಭಿಮಾನಿ
Advertisement
ಕಾರಜೋಳ ಗ್ರಾಮದ ಅಭಿವೃದ್ಧಿ ಗಾಗಿ ರೂಪಿಸಿ ಅನುಷ್ಟಾನ ಗೊಳಿಸಿದ ಯೋಜನೆಗಳು, ನೀರಾವರಿ ಯೋಜನೆಗಳ ಅನುಷ್ಟಾನ, ಗ್ರಾಮದ ಮನೆಯ ಮಗನು ಉಪಮುಖ್ಯಮಂತ್ರಿಯಾಗಿರುವುದಕ್ಕೆ ಅತ್ಯಂತ ಪ್ರೀತಿ ಗೌರವದಿಂದ ಗ್ರಾಮಸ್ಥರು ಸನ್ಮಾನಿಸಿದ್ದರು. ಕಳೆದ 6ವರ್ಷಗಳಿಂದ ಸನ್ಮಾನ ಮಾಡಲು ಪ್ರಯತ್ನಿಸುತ್ತಿದ್ದರು. 2/3 pic.twitter.com/547HseNAMc
— Govind M Karjol (@GovindKarjol) December 10, 2020
Advertisement
ಕಾರಜೋಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಒತ್ತಾಯ ಪೂರ್ವಕವಾಗಿ ಸನ್ಮಾನಿಸಿ, ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು. ಶಾಸಕ, ಸಚಿವರಾಗಿ ಸಲ್ಲಿಸಿದ ಸೇವೆಗಾಗಿ ಮಾಡಿದ ಸನ್ಮಾನ ಸರ್ಕಾರಕ್ಕೆ ಸಲ್ಲಬೇಕು. ಹೀಗಾಗಿ ಈ ಬಂಗಾರದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗೋವಿಂದ್ ಕಾರಜೋಳ, ಎಂ.ಬಿ ಪಾಟೀಲ್, ಶಿವಾನಂದ್ ಪಾಟೀಲ್‍ಗೆ ಚಿನ್ನದ ಕಿರೀಟ