ಬೆಂಗಳೂರು: ಉಪೇಂದ್ರ ಅವರು ಮಾಡುತ್ತಿರುವ ಸಮಾಜ ಸೇವೆಗೆ ಉಚಿತವಾಗಿ ಟೊಮೇಟೋ ನೀಡುವ ಮೂಲಕವಾಗಿ ರೈತರೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿದ್ದರಾಜು ಬ್ಯಾಲಾಳು ಗ್ರಾಮದ ರೈತರು ಇಂದು 15 ಕ್ರೇಟ್ ಟೊಮೇಟೋ ಉಚಿತವಾಗಿ ಕೊಟ್ಟು ಬೇಕಾದವರಿಗೆ ಹಂಚಿ ಎಂದು ನಮಗೆಲ್ಲರಿಗೂ ಮಾದರಿಯಾದರು. ಟೊಮೇಟೋಗೆ ಹಣ ಪಡೆಯಲು ನಿರಾಕರಿಸಿದ ಬ್ಯಾಲಾಳು ಸಿದ್ದರಾಜು ತನ್ನ ಗ್ರಾಮದಲ್ಲಿ ಸಂಕಷ್ಟದಲ್ಲಿರುವ ಇಪ್ಪತ್ತು ಕುಟುಂಬಕ್ಕೆ ದಿನಸಿ ಕಿಟ್ ವಿತರಿಸುವ ಜವಾಬ್ಧಾರಿಯನ್ನು ತಾನೇ ವಹಿಸಿಕೊಂಡು ಕಿಟ್ ಕೊಂಡೊಯ್ಯುತ್ತಿದ್ದಾರೆ ಎಂದು ಉಪೇಂದ್ರ ಅವರು ಮಾದರಿ ರೈತರ ಕುರಿತಾಗಿ ಟ್ವೀಟ್ ಮಾಡುವಮೂಲಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಸಿದ್ದರಾಜು ಬ್ಯಾಲಾಳು ಗ್ರಾಮದ ರೈತರು ಇಂದು 15 ಕ್ರೇಟ್ ಟೊಮೇಟೋ ಉಚಿತವಾಗಿ ಕೊಟ್ಟು ಬೇಕಾದವರಿಗೆ ಹಂಚಿ ಎಂದು ನಮಗೆಲ್ಲರಿಗೂ ಮಾದರಿಯಾದರು ???????????? pic.twitter.com/DnWUEcI665
— Upendra (@nimmaupendra) May 19, 2021
Advertisement
ಲಾಕ್ಡೌನ್ ಕಾರಣ ಸಂಪಾದನೆ ಇಲ್ಲದೇ ಕೂತಿರುವ ರೈತರು ಹಾಗೂ ಬಡವರ ಪಾಲಿಗೆ ನಟ ಉಪೇಂದ್ರ ಅವರು ನೆರವಿಗೆ ನಿಂತಿದ್ದಾರೆ. ಇದೀಗ ಉಪೇಂದ್ರ ಅವರು ಮಾಡುತ್ತಿರುವ ನಿಸ್ವಾರ್ಥ ಸೇವೆಗೆ ಬ್ಯಾಲಾಳು ಗ್ರಾಮದ ರೈತರೊಬ್ಬರು ಸಾಥ್ ನೀಡಿದ್ದಾರೆ. ತಾವು ಬೆಳೆದಿರುವ ಫಸಲನ್ನು ಉಚಿತವಾಗಿ ಉಪೇಂದ್ರ ಅವರ ಕೈಗೊಪ್ಪಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
Advertisement
ಟೊಮೇಟೋಗೆ ಹಣ ಪಡೆಯಲು ನಿರಾಕರಿಸಿದ ಬ್ಯಾಲಾಳು ಸಿದ್ದರಾಜು ತನ್ನ ಗ್ರಾಮದಲ್ಲಿ ಸಂಕಷ್ಟದಲ್ಲಿರುವ ಇಪ್ಪತ್ತು ಕುಟುಂಬಕ್ಕೆ ದಿನಸಿ ಕಿಟ್ ವಿತರಿಸುವ ಜವಾಬ್ಧಾರಿಯನ್ನು ತಾನೇ ವಹಿಸಿಕೊಂಡು ಕಿಟ್ ಕೊಂಡೊಯ್ಯುತ್ತಿದ್ದಾರೆ ???????? pic.twitter.com/XpLkRwjLZt
— Upendra (@nimmaupendra) May 19, 2021
Advertisement
ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ ಸಿನಿಕಾರ್ಮಿಕರಿಗೆ, ಬಡವರಿಗೆ ದಿನಸಿ ಕಿಟ್ಗಳನ್ನು ನೀಡುತ್ತಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ಈಗ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅಗತ್ಯ ಇರುವವರಿಗೆ ಹಂಚುತ್ತಿದ್ದಾರೆ. ಬೆಳೆಯನ್ನು ಖರೀದಿ ಮಾಡಿ ಅಗತ್ಯ ಇರುವವರಿಗೆ ಹಂಚಿಕೆ ಮಾಡುತ್ತಿರುವ ಉಪೇಂದ್ರ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.