ನವದೆಹಲಿ: ರಾಜಸ್ಥಾನ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ವಿರುದ್ಧ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷ ಸಚಿನ್ ಅವರನ್ನು ಸಂಸದರನ್ನಾಗಿ ಮಾಡಿತ್ತು. ಅಲ್ಲದೇ ಕೇಂದ್ರ ಸಚಿವ ಸ್ಥಾನವನ್ನು ನೀಡಿತ್ತು. ರಾಜಸ್ಥಾನ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರ ಸ್ಥಾನ ಹಾಗೂ ರಾಜ್ಯದ ಡಿಸಿಎಂ ಪದವಿಯನ್ನು ಅವರಿಗೆ ನೀಡಿದೆ. ಅವರ ವಯಸ್ಸು ಎಷ್ಟು? ಅವರು ಇನ್ನು ಯುವಕರಿದ್ದು, ಅವರಿಗೆ ತಾಳ್ಮೆಯ ಅಗ್ಯವಿದೆ. ಅವರ ನಡೆ ಪಕ್ಷದ ಶಿಸ್ತಿಗೆ ಧಕ್ಕೆ ತಂದಿದೆ. ಈ ಯುವಕರಿಗೆ ತಾಳ್ಮೆಯೇ ಇಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Sachin Pilot was made an MP, a Central Minister, Rajasthan Party Chief & Deputy CM, what is his age? He is still young, he should have some patience. His actions have been against the party discipline. These youngsters do not have patience: Digvijaya Singh, Congress pic.twitter.com/CZzrcACEbB
— ANI (@ANI) July 15, 2020
Advertisement
ಇತ್ತ ಪಕ್ಷದ ವಿರೋಧಿ ಚಟುವಟಿಕೆ, ಮತ್ತು ಪಕ್ಷದ ಸಭೆಗೆ ಗೈರು ಹಾಜರಾದ ಕಾರಣ ಪೈಲಟ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನ ಹಾಗೂ ಡಿಸಿಎಂ ಪದವಿಯಿಂದ ಕೆಳಗಿಳಿಸಲಾಗಿದೆ. ಇದರ ಬೆನಲ್ಲೇ ಪಕ್ಷದ ಶಾಸಕಾಂಗ ಸಭೆಗೆ ಗೈರಾಗಿದ್ದ ಶಾಸಕ ಹೇಮರಾಮ್ ಚೌಧರಿ ಸೇರಿದಂತೆ 18 ಶಾಸಕರ ನಿವಾಸಗಳ ಎದುರು ನೋಟಿಸ್ ಅಂಟಿಸಲಾಗಿದೆ. ಪಕ್ಷದ ನೋಟಿಸ್ಗೆ ಶಾಸಕರು 2 ದಿನಗಳಲ್ಲಿ ಪ್ರತಿಕ್ರಿಯೆ ನೀಡಬೇಕಿದೆ.
Advertisement
ಇತ್ತ ಈ ಕುರಿತು ಮಾತನಾಡಿರುವ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಅವರು, ದೇವರು ಸಚಿನ್ ಪೈಲಟ್ ಅವರಿಗೆ ಬುದ್ಧಿವಂತಿಕೆ ನೀಡಲಿ. ಅವರು ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡುವುದಿಲ್ಲ. ಈಗಲಾದರೂ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ಇಂದಿಗೂ ಮಾತುಕತೆ ನಡೆಸಲು ಪಕ್ಷದ ಬಾಗಿಲುಗಳು ತೆರೆದಿದೆ. ಆದರೆ ಅವರು ಎಲ್ಲಕ್ಕಿಂತ ಮುಂದೆ ಸಾಗಿದ್ದಾರೆ ಎಂದು ತೋರುತ್ತದೆ ಹೇಳಿದ್ದಾರೆ.
Advertisement
May God give Sachin Pilot wisdom&he doesn’t try to topple govt.He should admit his mistake. Doors were always open for him for talks, even today. But, now he seems to have moved ahead of all this, so these things don’t matter now: Rajasthan Congress in-charge Avinash Pande to ANI pic.twitter.com/jaJgCPMHPz
— ANI (@ANI) July 15, 2020