ಹೈದರಾಬಾದ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಮೋಹನ್ ಭಾಗವತ್ ಹೇಳಿಕೆ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಓವೈಸಿ, ಈ ದ್ವೇಷ ಹಿಂದುತ್ವದ ಕೊಡುಗೆ ಅಂತ ಬರೆದುಕೊಂಡಿದ್ದಾರೆ.
ಮೋಹನ್ ಭಾಗವತ್, ವಧೆ ಮಾಡುವವರು ಹಿಂದೂತ್ವದ ವಿರೋಧಿಗಳು ಎಂದು ಹೇಳುತ್ತಾರೆ. ಆದ್ರೆ ಇವರಿಗೆ ಹಸು ಮತ್ತು ಎಮ್ಮೆಯ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಆದ್ರೆ ಇವರಿಗೆ ಜುನೈದ್, ಅಖ್ಲಾಕ್, ಪಹಲ, ರಕ್ಬರ್, ಅಲಿಮುದ್ದೀನ್ ಹೆಸರು ನೆನಪಿರಬೇಕು. ಈ ಪ್ರಕರಣದ ಅಪರಾಧಿಗಳಿಗೆ ಹಿಂದುತ್ವ ಸರ್ಕಾರ ಬೆನ್ನಲುಬಾಗಿ ನಿಂತಿದೆ ಎಂದು ಓವೈಸಿ ಗಂಭೀರ ಆರೋಪ ಮಾಡಿದ್ದಾರೆ.
Advertisement
केंद्रीय मंत्री के हाथों अलीमुद्दीन के कातिलों की गुलपोशी हो जाती है, अखलाक़ के हत्यारे की लाश पर तिरंगा लगाया जाता है, आसिफ़ को मारने वालों के समर्थन में महापंचायत बुलाई जाती है, जहाँ भाजपा का प्रवक्ता पूछता है कि "क्या हम मर्डर भी नहीं कर सकते?" 2/3
— Asaduddin Owaisi (@asadowaisi) July 5, 2021
Advertisement
ಅಲಿಮುದ್ದೀನ್ ಕೊಲೆಗಾರರಿಗೆ ಕೇಂದ್ರ ಸಚಿವರು ಹಾರ ಹಾಕಿ ಸನ್ಮಾನ ಮಾಡ್ತಾರೆ. ಅಖ್ಲಾಕ್ ನ ಕೊಲೆಗಾರರ ಶವದ ಮೇಲೆ ತ್ರಿವರ್ಣ ಧ್ವಜ ಹಾಕಲಾಗುತ್ತದೆ. ಇನ್ನೂ ಆಶಿಫ್ ಮೇಲೆ ಹಲ್ಲೆ ನಡೆಸಿದರವ ರಕ್ಷಣೆಗಾಗಿ ಮಹಾ ಪಂಚಾಯ್ತಿ ನಡೆಸಲಾಗುತ್ತದೆ. ಅಲ್ಲಿಯ ಬಿಜೆಪಿಯ ವಕ್ತಾರರು, ಏನು ನಾವು ಕೊಲೆಯೂ ಮಾಡುವಂತಿಲ್ವಾ ಎಂದು ಪ್ರಶ್ನೆ ಮಾಡುತ್ತಾರೆ. ಹೇಡಿತನ, ಹಿಂಸೆ, ಕೊಲೆ ಇದು ಗೋಡ್ಸೆ ಹಿಂದುತ್ವದ ಅವಿಭಾಜ್ಯ ಅಂಗ. ಮುಸ್ಲಿಮರನ್ನು ಕೊಲ್ಲುತ್ತಿರೋದು ಇದೇ ಹಿಂದುತ್ವದ ಭಾಗ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಓವೈಸಿ ಕಾರ್ಯಕ್ರಮದ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದ ಯುವತಿ
Advertisement
Advertisement
ಮೋಹನ್ ಭಾಗವತ್ ಹೇಳಿದ್ದೇನು?
ಭಾನುವಾರ ಪುಸ್ತರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಮೋಹನ್ ಭಾವಗತ್, ಮುಸ್ಲಿಂರು ಇಲ್ಲಿ ಇರುವಂತಿಲ್ಲ ಹೇಳುವ ವ್ಯಕ್ತಿ ಹಿಂದೂ ಅಲ್ಲ. ಹಸು ಪವಿತ್ರ ಜಾನುವಾರ. ಅದರ ಹೆಸರಿನಲ್ಲಿ ಬೇರೆಯವರರನ್ನು ಕೊಲ್ಲುವ ವ್ಯಕ್ತಿಗಳು ಹಿಂದೂತ್ವದ ವಿರೋಧಿಗಳು. ಇಂತಹ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡುತ್ತದೆ. ಯಾವುದೇ ಧರ್ಮದವರು ಇರಲಿ. ಎಲ್ಲ ಭಾರತೀಯರು ಡಿಎನ್ಎ ಒಂದೇ ಆಗಿದೆ ಅಂತ ಹೇಳಿದ್ದರು. ಇದನ್ನೂ ಓದಿ: ಲವ್ ಜಿಹಾದ್ ಕಾನೂನಿನಲ್ಲಿ ಯಾವ ಸಮುದಾಯದ ಹಿತಾಸಕ್ತಿ ಇದೆ- ಓವೈಸಿ ಪ್ರಶ್ನೆ