ಬೆಳಗಾವಿ: ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂಬ ಬಗ್ಗೆ ಸಿದ್ದರಾಮಯ್ಯಗೆ ನಿತ್ಯ ಕೆಟ್ಟ ಕೆಟ್ಟ ಕನಸು ಬೀಳುತ್ತಿವೆ. ಆ ಕೆಟ್ಟ ಕನಸು ನನಸು ಆಗಲು ಸಾಧ್ಯವೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
Advertisement
ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಡಳಿತ ಮಾಡಿದ್ದರೆ ಮತ್ತೆ ಅಧಿಕಾರಕ್ಕೆ ಅವರೇ ಬರುತ್ತಿದ್ದರು. ಈಗ ಚುನಾವಣೆಗೆ ಎರಡು ವರ್ಷ ಮೊದಲೇ ನಾನೇ ಮುಂದಿನ ಸಿಎಂ ಎನ್ನುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಅಷ್ಟೇ ಅಲ್ಲ ಡಿಕೆಶಿ, ಪರಮೇಶ್ವರ್, ಎಂ.ಬಿ.ಪಾಟೀಲ್ ಸೇರಿ ಎಲ್ಲರೂ ಅದನ್ನೆ ಹೇಳಿದ್ದಾರೆ. ಇವರ ಕೆಟ್ಟ ಕನಸು ಎಂದು ನನಸು ಆಗೋಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.
Advertisement
Advertisement
Advertisement
ಈ ಜನ್ಮದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಸಚಿವ ಆನಂದ ಸಿಂಗ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಸಂಪುಟ ರಚನೆ ಸಂದರ್ಭದಲ್ಲಿ ಕೆಲವರಿಗೆ ಅಸಮಾಧಾನ ಸಹಜ. ಅನ್ಯ ಪಕ್ಷದ ಶಾಸಕರು ಬರದೇ ಇದ್ದರೆ ಸರ್ಕಾರ ರಚನೆ ಆಗುತ್ತಿರಲಿಲ್ಲ. ಅವರಿಗೆ ಕೊಟ್ಟ ಬಳಿಕ ಉಳಿದ ಸ್ಥಾನ ಹಂಚಿಕೆ ನಡೆದಿದೆ. ಇಬ್ಬರು, ಮೂರು ಜನರಿಗೆ ಬೇಸರ ಇದೆ ಎಂದು ನನ್ನ ಗಮನಕ್ಕೆ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಇದನ್ನು ಇತ್ಯರ್ಥ ಮಾಡುತ್ತಾರೆ. ಎಲ್ಲಾ ಹಿರಿಯರನ್ನು ಸಿಎಂ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಬಿಎಸ್ವೈ ರಾಜೀನಾಮೆ ನೀಡುವ ಮೊದಲೇ ರಾಜೀನಾಮೆಗೆ ಮುಂದಾಗಿದ್ದ ಆನಂದ್ ಸಿಂಗ್
ದೇವೇಗೌಡರ ಕುಟುಂಬದ ಬಗ್ಗೆ ಬಿಜೆಪಿ ಮೃದು ಧೋರಣೆ ವಿಚಾರಕ್ಕೆ ಎನು ಮಾಡೋಣ ಕುಮಾರಸ್ವಾಮಿ ಕರಕೊಂಡು ಬಂದು ಹೊಡೆಯೋಕೆ ಆಗುತ್ತಾ. ನಾವು ಏನ್ ಮಾಡಿಲ್ಲ. ಅವರದು ರಾಜಕೀಯ ಪಕ್ಷ, ನಮ್ಮದು ರಾಜಕೀಯ ಪಕ್ಷ. ಬಿಜೆಪಿ ರಾಜ್ಯದಲ್ಲಿ ಸಂಪೂರ್ಣವಾಗಿ ಆಡಳಿತ ಮಾಡುತ್ತದೆ. ಜೆಡಿಎಸ್ ಜೊತೆಗೆ ಮೈತ್ರಿಯ ಪ್ರಶ್ನೆಯ ಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.