ನವದೆಹಲಿ: ಕೋವಿಡ್ 19 ನಿಂದಾಗಿ ವಿಶ್ವಾದ್ಯಂತ ಸಮಸ್ಯೆಗಳು ಸೃಷ್ಟಿಯಾಗಿವೆ. ಅಟೋಮೊಬೈಲ್ ಕಂಪನಿಗಳಿಗೆ ಕಾರುಗಳು ಮಾರಾಟವಾಗದ ಕಾರಣ ಬಹಳ ನಷ್ಟ ಅನುಭವಿಸಿದೆ. ಆದರೆ ಈಗ ಅಟೋ ವಲಯ ನಷ್ಟ ಅನುಭವಿಸಿದ್ರೂ ಮುಂದಿನ ದಿನಗಳಲ್ಲಿ ಸಿಹಿ ಸುದ್ದಿ ಸಿಗುವ ಲಕ್ಷಣ ಕಾಣಿಸಲಾರಂಭಿಸಿದೆ.
ಹೌದು. ಕೋವಿಡ್ 19 ತಡೆಗಟ್ಟಲು ಸದ್ಯಕ್ಕೆ ಸಾಮಾಜಿಕ ಅಂತರವೇ ‘ಔಷಧಿ’ ಯಾಗಿದೆ. ಲಾಕ್‍ಡೌನ್ ತೆರವಾಗಿ ಸಾರ್ವಜನಿಕ ಸಾರಿಗೆ ಆರಂಭಗೊಂಡರೂ ಜನ ಈ ಸೇವೆ ಬಳಸಲು ಹಿಂದೇಟು ಹಾಕುತ್ತಿದ್ದು ಮುಂದಿನ ದಿನಗಳಲ್ಲಿ ಸ್ವಂತ ವಾಹನ ಖರೀದಿಸಲು ಮುಂದಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.
Advertisement
Advertisement
ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಿದರೆ ರಿಸ್ಕ್ ಜಾಸ್ತಿ. ಹೀಗಾಗಿ ಪ್ರಯಾಣಕ್ಕೆ ವಾಹನವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ ಕಾರುಗಳ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ.
Advertisement
ಮಾರಾಟವಾಗುವ ಕಾರುಗಳ ಪೈಕಿ ಕಡಿಮೆ ಬೆಲೆಯ ಕಾರುಗಳಿಗೆ ಹೆಚ್ಚಿನ ಬೇಡಿಕೆ ಸಿಗುವ ನಿರೀಕ್ಷೆಯಿದೆ ಎಂದು ಮಾರುತಿ ಸುಜುಕಿ ಇಂಡಿಯಾ(ಎಂಎಸ್‍ಐ) ಹೇಳಿದೆ.
Advertisement
ಮಾರುತಿ ಸುಜುಕಿ ಕಂಪನಿಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವತ್ಸವ್ ಪ್ರತಿಕ್ರಿಯಿಸಿ, ನಾವು ನಡೆಸಿದ ಗ್ರಾಹಕರ ಸಮೀಕ್ಷೆಯಲ್ಲಿ ಜನರು ಸಾರ್ವಜನಿಕ ಸಾರಿಗೆಗಿಂತ ಹೆಚ್ಚು ವೈಯಕ್ತಿಕ ವಾಹನಗಳತ್ತ ಒಲವು ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಪೈಕಿ ಮೊದಲ ಬಾರಿಗೆ ಖರೀದಿ ಮಾಡುವ ಗ್ರಾಹಕರು ಸಣ್ಣ ಕಾರುಗಳತ್ತ ಒಲವು ತೋರಿಸಿದ್ದಾರೆ. 1,800 ಡೀಲರ್ ಶಿಪ್ ಗಳಿಂದಾಗಿ ನಮಗೆ ಈ ಟ್ರೆಂಡ್ ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.