‘ಇವರಲ್ಲಿ ಯಾರು ನಿಮ್ಮ ಗೆಳತಿ?’: ಯುವರಾಜ್ ಸಿಂಗ್

Public TV
1 Min Read
YUVARAJ SINGH

ಮುಂಬೈ: ಕೊರೊನಾ ವೈರಸ್‍ನಿಂದ ಮನೆಯಲ್ಲೇ ಉಳಿದಿರುವ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದು, ವಿವಿಧ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

ಸದ್ಯ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ವಿಶೇಷ ಫೋಟೋವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಇವರಲ್ಲಿ ನಿಮ್ಮ ಗೆಳತಿಯನ್ನು ಆಯ್ಕೆ ಮಾಡಿ? ನಾನು ನಿಮಗೆ ನಾಳೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ. ಅಂದಹಾಗೇ ಯುವಿ, ಅಪ್ಲಿಕೇಶನ್ ಬಳಸಿ ಟೀಂ ಇಂಡಿಯಾ ಆಟಗಾರರ ಮುಖವನ್ನು ಹುಡುಗಿಯಂತೆ ಪರಿವರ್ತನೆ ಮಾಡಿರುವ ಫೋಟೋವನ್ನು ಶೇರ್ ಮಾಡಿದ್ದು, ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಯುವರಾಜ್ ಸಿಂಗ್ ಹಂಚಿಕೊಂಡಿರುವ ಫೊಟೋದಲ್ಲಿ, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಸೇರಿದಂತೆ ಇತರೇ ಆಟಗಾರರು ಇದ್ದಾರೆ. ಇದಕ್ಕೂ ಮುನ್ನ ಯುಜುವೇಂದ್ರ ಚಹಲ್ ರೋಹಿತ್ ಶರ್ಮಾ ಮುಖವನ್ನು ಅಪ್ಲಿಕೇಶನ್ ಬಳಸಿ ಪರಿವರ್ತನೆ ಮಾಡಿದ್ದ ಫೋಟೋ ಶೇರ್ ಮಾಡಿ ರೋಹಿತ್ ಕಾಲೆಳೆದಿದ್ದರು. ಚಹಲ್, ರೋಹಿತ್ ಶರ್ಮಾ ಹಾಗೂ ಅವರಂತೆ ಕಾಣುವ ಯುವತಿಯ ಫೋಟೋವನ್ನು ಸೇರಿಸಿ ಟ್ವೀಟ್ ಮಾಡಿದ್ದರು. ಜೊತೆಗೆ “ನೀವು ತುಂಬಾ ಮುದ್ದಾಗಿ ಕಾಣುತ್ತಿದ್ದಿರಾ ರೋಹಿತ್ ಶರ್ಮಾ ಬಾಯ್” ಎಂದು ಬರೆದುಕೊಂಡು ತಮಾಷೆ ಮಾಡಿ ಕಾಲೆಳೆದಿದ್ದರು.

Share This Article